ನವದೆಹಲಿ: ಸೋನಭದ್ರ ಕುಟುಂಬ ಸಂತ್ರಸ್ತರನ್ನು ಭೇಟಿಯಾಗಿಯೇ ಹೋಗುತ್ತೇನೆ ಎಂದು ಬಿಗಿಪಟ್ಟು ಹಿಡಿದಿದ್ದ ಪ್ರಿಯಾಂಕಾ ಗಾಂಧಿ ಈಗ ಕೊನೆಗೂ ಅವರನ್ನು ಭೇಟಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
#WATCH Priyanka Gandhi Vadra: Prasashan ko inki (family of victims of Sonbhadra firing case) rakhwali karni chaiye. Jab inke sath hadsa ho raha tha, madad karni chaiye thi. Prasashan ki mansikta meri samaj se bahar hai. Aap unn par thoda dabaw banaiye, aap mere piche pade hain. pic.twitter.com/BIW8ZYnzRF
— ANI UP (@ANINewsUP) July 20, 2019
ಭೂವಿವಾದ ಹಿನ್ನಲೆಯಲ್ಲಿ ನಡೆದ ಸೋನಭದ್ರ ಹತ್ಯಾಕಾಂಡದಲ್ಲಿ ಸುಮಾರು 10 ಜನರು ಮೃತಪಟ್ಟಿದ್ದರು. ಮೃತಪಟ್ಟ ಕುಟುಂಬ ಸಂತ್ರಸ್ತರನ್ನು ಭೇಟಿ ಮಾಡಲು ತೆರಳಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ಶುಕ್ರವಾರದಂದು ಅವರನ್ನು ಬಂಧಿಸಿ ಅತಿಥಿ ಗೃಹದಲ್ಲಿಟ್ಟಿದ್ದರು.ಆದರೆ ಈ ಬಂಧನಕ್ಕೆ ಜಗ್ಗದ ಪ್ರಿಯಾಂಕಾ ಗಾಂಧಿ ಮಾತ್ರ ರಾತ್ರಿಯಿಡಿ ಪೋಲೀಸರ ವಶದಲ್ಲಿಯೇ ಕಳೆದರು. ಶನಿವಾರದಂದು ಅವರು ತಂಗಿದ್ದ ಅತಿಥಿ ಗೃಹದ ಎದುರುಗಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Priyanka Gandhi Vadra: Two relatives of victims have come here to meet me, 15 others are not being allowed to meet me. Even I am not being allowed to meet them. Bhagwan jane inki mansikta kya hai? Aap thoda dawab banayiya, unhe aana dijiye. Mere pichhe pade hain. pic.twitter.com/49WkEL1URC
— ANI UP (@ANINewsUP) July 20, 2019
ಪ್ರಿಯಂಕಾ ಗಾಂಧಿಯವರು ಸೋನಭದ್ರ ಸಂತ್ರಸ್ತರನ್ನು ಭೇಟಿ ಮಾಡಿ ತಿರುವುದಾಗಿ ಎಂದು ಬಿಗಿ ಪಟ್ಟು ಹಿಡಿದ ಹಿನ್ನಲೆಯಲ್ಲಿ, ಅಧಿಕಾರಿಗಳು ಅವರ ಕುಟುಂಬ ಸದಸ್ಯರನ್ನು ಪ್ರಿಯಾಂಕಾ ಗಾಂಧಿ ತಂಗಿದ್ದ ಅತಿಥಿ ಗೃಹದಲ್ಲಿ ಭೇಟಿ ಮಾಡಿಸುವ ವ್ಯವಸ್ಥೆ ಮಾಡಿದರು. ಸಂತ್ರಸ್ತರ ಎರಡು ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ನಂತರ ಸುದ್ದಿಗಾರೊಂದಿಗೆ ಮಾತಾನಾಡಿದ ಪ್ರಿಯಾಂಕಾ ಗಾಂಧಿ 'ಸಂತ್ರಸ್ತರ ಎರಡು ಕುಟುಂಬ ಸದಸ್ಯರು ನನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದಾರೆ. ಇತರ 15 ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ. ನನಗೂ ಸಹಿತ ಅವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ. ಈ ಜನರು ಬಹಳ ದೂರದಿಂದ ಭೇಟಿ ಮಾಡಲು ಬಂದಿದ್ದಾರೆ, ಆದರೂ ಅಧಿಕಾರಿಗಳು ಅವರಿಗೆ ಅವಕಾಶ ನೀಡುತ್ತಿಲ್ಲ ಎಂದು ಹೇಳಿದರು.
Mirzapur: Family members of the victims of Sonbhadra's firing case come to meet Congress General Secretary Priyanka Gandhi Vadra at Chunar Guest House. pic.twitter.com/Yujq1qcSU6
— ANI UP (@ANINewsUP) July 20, 2019
ಬುಧುವಾರದಂದು ಸೋನಭದ್ರದಲ್ಲಿ ಗೊಂಡ ಮತ್ತು ಗುಜ್ಜರ ಸಮುದಾಯದ ನಡುವೆ ಭೂವಿವಾದದ ಹಿನ್ನಲೆಯಲ್ಲಿ ನಡೆದ ಹತ್ಯಾಕಾಂಡದಲ್ಲಿ 10 ಜನರು ಸಾವನ್ನಪ್ಪಿದ್ದಲ್ಲದೆ 24 ಜನರು ಗಾಯಗೊಂಡಿದ್ದರು. ಇದುವರೆಗೆ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ 29 ಜನರನ್ನು ಬಂಧಿಸಲಾಗಿದೆ. ಒಟ್ಟು 78 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.