'ಮಹಾ'ಸೂತ್ರ ರಚನೆಗೆ ಕಾಂಗ್ರೆಸ್ ಮತ್ತು ಎನ್‌ಸಿಪಿ-ಮಹತ್ವದ ಸಭೆ

ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆಗಾಗಿ ವಿಧಾನಗಳನ್ನು ರೂಪಿಸಲು ಎನ್‌ಸಿಪಿ-ಕಾಂಗ್ರೆಸ್ ಜಂಟಿ ಸಮನ್ವಯ ಸಮಿತಿಯ ನಿರ್ಣಾಯಕ ಸಭೆ ಪ್ರಸ್ತುತ ಮುಂಬೈನ ಟ್ರೈಡೆಂಟ್ ಹೋಟೆಲ್‌ನಲ್ಲಿ ನಡೆಯುತ್ತಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

Updated: Nov 14, 2019 , 10:54 AM IST
'ಮಹಾ'ಸೂತ್ರ ರಚನೆಗೆ ಕಾಂಗ್ರೆಸ್ ಮತ್ತು ಎನ್‌ಸಿಪಿ-ಮಹತ್ವದ ಸಭೆ
file photo

ನವದೆಹಲಿ: ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆಗಾಗಿ ವಿಧಾನಗಳನ್ನು ರೂಪಿಸಲು ಎನ್‌ಸಿಪಿ-ಕಾಂಗ್ರೆಸ್ ಜಂಟಿ ಸಮನ್ವಯ ಸಮಿತಿಯ ನಿರ್ಣಾಯಕ ಸಭೆ ಪ್ರಸ್ತುತ ಮುಂಬೈನ ಟ್ರೈಡೆಂಟ್ ಹೋಟೆಲ್‌ನಲ್ಲಿ ನಡೆಯುತ್ತಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ವರದಿಗಳ ಪ್ರಕಾರ,ಎನ್‌ಸಿಪಿ ಹಿರಿಯ ಮುಖಂಡ ಮತ್ತು ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರು ರಾಜ್ಯ ಕಾಂಗ್ರೆಸ್ ಉನ್ನತ ನಾಯಕರೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದಾರೆ. ಉದ್ದೇಶಿತ ಜಂಟಿ ಸಮನ್ವಯ ಸಮಿತಿ ಸಭೆ ಮುಂದೂಡಲ್ಪಟ್ಟ ಕಾರಣ ಗುರುವಾರ ಬಾರಾಮತಿಗೆ ತೆರಳುವುದಾಗಿ ಅಜಿತ್ ಪವಾರ್ ಈ ಹಿಂದೆ ಹೇಳಿದ್ದರು. ಸರ್ಕಾರ ರಚಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ ದಿನದ ನಂತರ, ಉಭಯ ಪಕ್ಷಗಳು ಜಂಟಿ-ಸಮನ್ವಯ ಸಮಿತಿಯನ್ನು ರಚಿಸಿ, ಅವುಗಳ ನಡುವೆ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಚರ್ಚೆ ನಡೆಸಿವೆ.

ಎರಡು ಪಕ್ಷಗಳು ರಚಿಸಿದ ಸಮನ್ವಯ ಸಮಿತಿಯಲ್ಲಿ ಅಜಿತ್ ಪವಾರ್, ಜಯಂತ್ ಪಾಟೀಲ್, ಛಗನ್ ಭುಜ್ಬಾಲ್, ಧನಂಜಯ್ ಮುಂಡೆ ಮತ್ತು ಎನ್‌ಸಿಪಿಯಿಂದ, ನವಾಬ್ ಮಲಿಕ್ ಮತ್ತು ಕಾಂಗ್ರೆಸ್‌ನಿಂದ ಬಾಲಾಸಾಹೇಬ್ ಥೋರತ್, ಅಶೋಕ್ ಚವಾಣ್, ಪೃಥ್ವಿರಾಜ್ ಚವಾಣ್, ಮಣಿಕರಾವ್ ಠಾಕ್ರೆ ಮತ್ತು ವಿಜಯ್ ವಾಡೆಟ್ಟಿವಾರ್ ಭಾಗವಹಿಸಿದ್ದಾರೆ.

ಬುಧವಾರದಂದು ಎನ್‌ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಮಹಾರಾಷ್ಟ್ರಕ್ಕೆ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಒಪ್ಪಿಗೆ ನೀಡಿವೆ ಎಂದು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ '50 -50 ಅಧಿಕಾರ ಹಂಚಿಕೆ ಸೂತ್ರ 'ಕುರಿತು ಒಮ್ಮತಕ್ಕೆ ಬರುವಂತೆ ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಚರ್ಚಿಸಿವೆ ಎಂದು ಮೂಲಗಳು ಬುಧುವಾರ ಜೀ ಮೀಡಿಯಾಕ್ಕೆ ತಿಳಿಸಿವೆ.

ಮುಖ್ಯಮಂತ್ರಿ ಸ್ಥಾನವನ್ನು ತಲಾ 2.5 ವರ್ಷಗಳ ಕಾಲ ಹಂಚಿಕೊಳ್ಳಲು ಉಭಯ ಪಕ್ಷಗಳು ಒಪ್ಪಿಕೊಂಡಿವೆ ಎಂದು ವರದಿಯಾಗಿದೆ, ಆದರೆ ಅಧಿಕಾರ ಹಂಚಿಕೆ ಒಪ್ಪಂದದ ಮೂರನೇ ಪಾಲುದಾರ ಕಾಂಗ್ರೆಸ್ ಪಕ್ಷಕ್ಕೆ ಐದು ವರ್ಷಗಳ ಕಾಲ ಉಪಮುಖ್ಯಮಂತ್ರಿ ಹುದ್ದೆಗೆ ಉತ್ಸುಕವಾಗಿದೆ. ಆದರೆ, ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಹುದ್ದೆಯ ಬಗ್ಗೆ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ.