ಕಾಂಗ್ರೆಸ್ಸಿನ ನಾನಾ ಪಟೋಲೆ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆ

ಮಹಾರಾಷ್ಟ್ರದ ವಿಧಾನಸಭಾ ಸ್ಪೀಕರ್ ಹುದ್ದೆಗೆ ಭಾನುವಾರ ವಿಧಾನಸಭೆಯಲ್ಲಿ ನಡೆದ ಸ್ಪೀಕರ್ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಮುಖಂಡ ಕಿಸಾನ್ ಕಾಥೋರೆ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡರು.ಈ ಹಿನ್ನಲೆಯಲ್ಲಿ ಕಾಂಗ್ರೆಸ್-ಎನ್‌ಸಿಪಿ-ಶಿವಸೇನೆ ಮೈತ್ರಿಕೂಟದ ಅಭ್ಯರ್ಥಿ ನಾನಾ ಪಟೋಲೆ ಅವಿರೋಧವಾಗಿ ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

Last Updated : Dec 1, 2019, 10:59 AM IST
ಕಾಂಗ್ರೆಸ್ಸಿನ ನಾನಾ ಪಟೋಲೆ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆ title=

ನವದೆಹಲಿ: ಮಹಾರಾಷ್ಟ್ರದ ವಿಧಾನಸಭಾ ಸ್ಪೀಕರ್ ಹುದ್ದೆಗೆ ಭಾನುವಾರ ವಿಧಾನಸಭೆಯಲ್ಲಿ ನಡೆದ ಸ್ಪೀಕರ್ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಮುಖಂಡ ಕಿಸಾನ್ ಕಾಥೋರೆ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡರು.ಈ ಹಿನ್ನಲೆಯಲ್ಲಿ ಕಾಂಗ್ರೆಸ್-ಎನ್‌ಸಿಪಿ-ಶಿವಸೇನೆ ಮೈತ್ರಿಕೂಟದ ಅಭ್ಯರ್ಥಿ ನಾನಾ ಪಟೋಲೆ ಅವಿರೋಧವಾಗಿ ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

ಸರ್ವಪಕ್ಷ ಸಭೆ ಕರೆದ ನಂತರ ಬಿಜೆಪಿಯ ಈ ನಿರ್ಧಾರಕ್ಕೆ ಬಂದಿದ್ದು, ಪ್ರಸ್ತುತ ಬಿಜೆಪಿ ಮಹಾರಾಷ್ಟ್ರ ಶಾಸಕರು ವಿಧಾನಸಭಾ ಸ್ಪೀಕರ್ ಅವರನ್ನು ಆಯ್ಕೆ ಮಾಡುವ ಸಂಪ್ರದಾಯವನ್ನು ಎತ್ತಿ ಹಿಡಿಯಬೇಕು ಎಂದು ಒತ್ತಾಯಿಸಿದರು ಎಂದು ಬಿಜೆಪಿ ರಾಜ್ಯ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ. "ವಿಧಾನಸಭೆಯ ಘನತೆಯನ್ನು ಹಾಗೇ ಉಳಿಸಿಕೊಳ್ಳಲು, ಕಿಸಾನ್ ಕಾಥೋರೆ ಅವರ ಹೆಸರನ್ನು ಚುನಾವಣೆಯಿಂದ ಹಿಂತೆಗೆದುಕೊಳ್ಳಲು ನಾವು ನಿರ್ಧರಿಸಿದ್ದೇವೆ, ಇದರಿಂದ ವಿಧಾನಸಭಾ ಸ್ಪೀಕರ್ ಅವಿರೋಧವಾಗಿ ಆಯ್ಕೆಯಾಗುತ್ತಾರೆ" ಎಂದು ಪಾಟೀಲ್ ಹೇಳಿದರು. ಬಿಜೆಪಿ ತನ್ನ ನಿರ್ಧಾರವನ್ನು ಘೋಷಿಸಿದ ನಂತರ, ಎನ್‌ಸಿಪಿ ನಾಯಕ ಚಗನ್ ಭುಜ್ಬಾಲ್ ಅವರನ್ನು ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿ, "ಈ ಹಿಂದೆ, ಪ್ರತಿಪಕ್ಷಗಳು ವಿಧಾನಸಭಾ ಸ್ಪೀಕರ್ ಹುದ್ದೆಗೆ ಫಾರ್ಮ್ ಅನ್ನು ಭರ್ತಿ ಮಾಡಿದ್ದವು, ಆದರೆ ಇತರ ಶಾಸಕರ ಕೋರಿಕೆಯ ನಂತರ ಮತ್ತು ವಿಧಾನಸಭೆಯ ಘನತೆಯನ್ನು ಹಾಗೇ ಉಳಿಸಿಕೊಳ್ಳಿ , ಅವರು ಹೆಸರನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಈಗ, ಸ್ಪೀಕರ್ ಚುನಾವಣೆಯು ಅವಿರೋಧವಾಗಿ ನಡೆಯುತ್ತದೆ ಎಂದರು.

ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವು 169 ಶಾಸಕರ ಬೆಂಬಲದೊಂದಿಗೆ ವಿಶ್ವಾಸ ಮತ ಪರೀಕ್ಷೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಿದ ಒಂದು ದಿನದ ನಂತರ, ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಅವರನ್ನು ಆಯ್ಕೆ ಮಾಡಲು ಹಂಗಾಮಿ ಸ್ಪೀಕರ್ ದಿಲೀಪ್ ವಾಲ್ಸೆ ಪಾಟೀಲ್ ಅವರು ಭಾನುವಾರ ವಿಧಾನಸಭೆ ಅಧಿವೇಶನಕ್ಕೆ ಕರೆ ನೀಡಿದ್ದರು.

ಈ ವರ್ಷ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿಕೊಂಡಿದ್ದರು. ನಾಗ್ಪುರದ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು.
 

Trending News