ಗಾಂಧಿನಗರ: ಅಕ್ಟೋಬರ್ 21 ರಂದು ನಡೆಯಲಿರುವ ಗುಜರಾತ್ ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಲಿರುವ ನಾಲ್ವರು ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಭಾನುವಾರ ಬಿಡುಗಡೆ ಮಾಡಿದೆ.
ಗುಜರಾತ್ ವಿಧಾನಸಭೆಗೆ ನಡೆಯಲಿರುವ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನಾಗಿ ಘೋಷಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅನುಮೋದಿಸಿದ್ದಾರೆ.
ಗುಲಾಬ್ಸಿಂಹ್ ಪಿರಾಭಾಯ್ ರಜಪೂತ್ ಅವರು ತಾರಾದ್ ವಿಧಾನಸಭಾ ಕ್ಷೇತ್ರದಿಂದ, ಪಟೇಲ್ ಜಸುಭಾಯ್ ಶಿವಭಾಯ್ ಅವರು ಬಯಾದ್ ವಿಧಾನಸಭಾಕ್ಷೇತ್ರದಿಂದ, ಧರ್ಮೇಂದ್ರಭಾಯಿ ಶಾಂತಿಲಾಲ್ ಪಟೇಲ್ ಅವರು ಅಮ್ರೈವಾಡಿ ವಿಧಾನಸಭಾ ಕ್ಷೇತ್ರದಿಂದ ಮತ್ತು ಚೌಹಾನ್ ಗುಲನ್ಸಿಂಹ್ ಸೋಮಸಿಂಹ್ ಅವರು ಲುನಾವಾಡಾ ವಿಧಾನಸಭಾಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಎಐಸಿಸಿ ಪತ್ರಿಕಾ ಪ್ರಕಟಣೆ ತಿಳಿಸಿದೆ.
INC COMMUNIQUE
Following persons have been approved as party candidate for the forthcoming bye -elections to the Legislative Assembly of Gujarat. pic.twitter.com/A0ikaFG3EF
— INC Sandesh (@INCSandesh) September 29, 2019
ಇದಕ್ಕೂ ಮುನ್ನ ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಮುಂಬರುವ ಉಪಚುನಾವಣೆಗೆ ಐದು ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಘೋಷಿಸಿತ್ತು.
ಅದರಂತೆ ಬಿಹಾರದ ಸಮಸ್ತಿಪುರ (ಎಸ್ಸಿ) ಕ್ಷೇತ್ರದಿಂದ ಅಶೋಕ್ ಕುಮಾರ್, ಕಿಶನ್ಗಂಜ್ನಿಂದ ಸಯೀದಾ ಬಾನು, ರಾಜಸ್ಥಾನದ ಮಂಡವದಿಂದ ರೀಟಾ ಚೌಧರಿ, ಕಿನ್ವ್ಸರ್ನಿಂದ ಹರೇಂದ್ರ ಮಿರ್ಧಾ ಮತ್ತು ಬಾಲ್ಹಾ (ಎಸ್ಸಿ) ಕ್ಷೇತ್ರದಿಂದ ಮನ್ನು ದೇವಿ ಅವರಿಗೆ ಟಿಕೆಟ್ ನೀಡಿರುವುದಾಗಿ ಕಾಂಗ್ರೆಸ್ ಘೋಷಿಸಿದೆ.
INC COMMUNIQUE
Following persons have been approved as party candidate for the forthcoming bye -elections to the Legislative Assembly of Bihar, Rajasthan & Uttar Pradesh pic.twitter.com/ERNqbG3baq
— INC Sandesh (@INCSandesh) September 29, 2019
ಈ ಎಲ್ಲಾ ಕ್ಷೇತ್ರಗಳಿಗೆ ಅಕ್ಟೋಬರ್ 21 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 24 ರಂದು ಫಲಿತಾಂಶ ಪ್ರಕಟವಾಗಲಿದೆ.