ನವದೆಹಲಿ: 'ಉತ್ತರ-ದಕ್ಷಿಣ ವಿಭಜನೆಯ ಟೂಲ್‌ಕಿಟ್ ಅನ್ನು ಬಿಜೆಪಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದೆ' ಎಂದು ಕಾಂಗ್ರೆಸ್ ಆರೋಪಿಸಿದೆ.
'ಕಾಂಗ್ರೆಸ್(Congress) ಮುಖಂಡ ರಾಹುಲ್ ಗಾಂಧಿ ಅವಕಾಶವಾದಿ. ಕೇರಳದಲ್ಲಿ ಮಾಡಿದ ಭಾಷಣದಲ್ಲಿ ಉತ್ತರ ಭಾರತೀಯರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ' ಎಂದು ಬಿಜೆಪಿಯ ಹಲವು ಮುಖಂಡರು ನಡೆಸಿದ ವಾಗ್ದಾಳಿಗೆ ಕಾಂಗ್ರೆಸ್ ಈ ಪ್ರತ್ಯುತ್ತರ ನೀಡಿದೆ.
ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿ
ತಿರುವನಂತಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ(Rahul Gandhi), '15 ವರ್ಷಗಳ ಕಾಲ ಉತ್ತರ ಭಾರತದಲ್ಲಿ ಸಂಸದನಾಗಿದ್ದೆ. ಅಲ್ಲಿನ ರಾಜಕೀಯವೇ ವಿಭಿನ್ನವಾಗಿತ್ತು. ಕೇರಳಕ್ಕೆ ಬಂದ ಮೇಲೆ ದಿಢೀರನೆ ಹೊಸತನ ಕಾಣಿಸಿತು. ಇಲ್ಲಿನ ಜನರು ನೈಜ ವಿಷಯಗಳು ಮತ್ತು ಸಮಸ್ಯೆಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಕೇವಲ ತೋರಿಕೆಯ ವಿಷಯಗಳ ಬದಲು ನೈಜ ವಿಷಯಗಳ ಬಗ್ಗೆ ಗಮನಹರಿಸುತ್ತಾರೆ' ಎಂದು ಹೇಳಿದ್ದರು.
'EPFO’ ನಿಂದ ಹೊಸ ಮಾರ್ಗಸೂಚಿ: ಇವು ನಿಮ್ಮ ಮೇಲೆ ಬೀಳಲಿದೆ ನೇರ ಪರಿಣಾಮ..!
ಇಂದು ಈ ಹೇಳಿಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ ಸುರ್ಜೇವಾಲಾ(Randeep Singh Surjewala), 'ತಮಗೆ ಅಗತ್ಯವಿರುವ ನೈಜ ವಿಷಯಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವಂತೆ ರಾಹುಲ್ ಗಾಂಧಿ ಜನತೆಗೆ ಕರೆ ನೀಡಿದ್ದಾರೆ. ಅದು ಕೇಂದ್ರ ಅಥವಾ ರಾಜ್ಯ ಸರ್ಕಾರ ಇರಬಹುದು. ಜತೆಗೆ, ಬಿಜೆಪಿ ಮಾರಾಟ ಮಾಡುವ ತೋರಿಕೆಯ ಟೂಲ್‌ಕಿಟ್ ಕಥೆಗಳನ್ನು ಕಡೆಗಣಿಸುವಂತೆಯೂ ಅವರು ಹೇಳಿದ್ದಾರೆ' ಎಂದು ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಅರವಿಂದ್ ಕೇಜ್ರಿವಾಲ್..!
'ಉತ್ತರ-ದಕ್ಷಿಣ ವಿಭಜನೆಯ ಟೂಲ್‌ಕಿಟ್ ಅಳವಡಿಸಿಕೊಂಡಿರುವ ಬಿಜೆಪಿ(BJP), ಸುದ್ದಿ ವಾಹಿನಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದೆ. ಜನತೆಯ ನಿಜವಾದ ಸಮಸ್ಯೆಗಳಿಂದ ದೇಶದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಕೇವಲ ತೋರಿಕೆಯ ಮತ್ತು ಪೊಳ್ಳು ವಿಷಯಗಳನ್ನು ಪ್ರತಿ ದಿನ ಪ್ರಸ್ತಾಪಿಸುತ್ತಿದೆ' ಎಂದು ಕಿಡಿಕಾರಿದ್ದಾರೆ.
Tractor Rally: 'ರೈತರ 40 ಲಕ್ಷ ಟ್ರಾಕ್ಟರ್‌ನಿಂದ ಸಂಸತ್ ಮುತ್ತಿಗೆ, ಇಂಡಿಯಾ ಗೇಟ್ ಬಳಿ ಉಳುಮೆ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.