ನವದೆಹಲಿ: ಭಾರತದಾದ್ಯಂತ ಅತಿ COVID-19 ಪೀಡಿತ ಸ್ಥಳಗಳಲ್ಲಿ ಒಂದಾದ, ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 2,948 ಹೊಸ COVID-19 ದೃಢಪಡಿಸಿದ ಪ್ರಕರಣಗಳನ್ನು ದಾಖಲಾಗಿವೆ.ಆ ಮೂಲಕ ದೆಹಲಿಗೆ ಈಗ ಒಟ್ಟು 80 ಸಾವಿರ ಪ್ರಕರಣಗಳನ್ನು ತಲುಪಿದೆ.
ದೆಹಲಿಯಲ್ಲಿ ಈಗ 80,188 ಕೊರೊನಾ ಪ್ರಕರಣಗಳಿದ್ದು ಮಹಾರಾಷ್ಟ್ರದ ನಂತರದ ಹೆಚ್ಚಿನ ಕರೋನವೈರಸ್ ಪ್ರಕರಣಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.ದೆಹಲಿಯಲ್ಲಿ ಇನ್ನೂ 28,329 ಸಕ್ರಿಯ ಕೊರೊನಾ ಪ್ರಕರಣಗಳಿವೆ.ಇದುವರೆಗೆ ಚೇತರಿಸಿಕೊಂಡವರ ಸಂಖ್ಯೆ 49,301 ಕ್ಕೆ ಏರಿದೆ ಮತ್ತು ಸಾವಿನ ಸಂಖ್ಯೆ 2,558 ಕ್ಕೆ ಏರಿದೆ. ಆ ಮೂಲಕ ಒಟ್ಟು ಚೇತರಿಕೆ ದರವು ಶೇ 61.48 ರಷ್ಟಾಗಿದೆ.
ಇದನ್ನೂ ಓದಿ: ಒಂದೇ ದಿನದಲ್ಲಿ ಅತಿ ಹೆಚ್ಚು ಕರೋನಾ ಪ್ರಕರಣ ಪತ್ತೆ, 26455 ಕ್ಕೇರಿದ ಮೃತರ ಸಂಖ್ಯೆ
ಇತರ ಬೆಳವಣಿಗೆಗಳಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ರಾಷ್ಟ್ರ ರಾಜಧಾನಿಯಲ್ಲಿ 10,000 ಕ್ಕೂ ಹೆಚ್ಚು ಹಾಸಿಗೆಗಳೊಂದಿಗೆ ಹೊಸದಾಗಿ ರಚಿಸಲಾದ ಕೊರೊನಾ ಆರೈಕೆ ಸೌಲಭ್ಯಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.ಇದೇ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಉಪಸ್ಥಿತರಿದ್ದರು.
ಛತ್ತರ್‌ಪುರ ಪ್ರದೇಶದ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಕ್ಯಾಂಪಸ್‌ನಲ್ಲಿರುವ ಸೌಲಭ್ಯವು ಎರಡು ವಿಭಾಗಳನ್ನು ಹೊಂದಿರುತ್ತದೆ.