CORONAVIRUS EFFECT: ಭಾರಿ ಘೋಷಣೆ ಮೊಳಗಿಸಿದ twitter...!

ಕೊರೊನಾ ವೈರಸ್ ನಿಂದ ಪಾರಾಗಲು ಖ್ಯಾತ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಭಾರಿ ಘೋಷಣೆಯೊಂದನ್ನು ಮೊಳಗಿಸಿದೆ.

Last Updated : Mar 3, 2020, 01:06 PM IST
CORONAVIRUS EFFECT: ಭಾರಿ ಘೋಷಣೆ ಮೊಳಗಿಸಿದ twitter...! title=

ನವದೆಹಲಿ:ಕೊರೊನಾ ವೈರಸ್ ಕುರಿತು ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಯಾವ ರೀತಿಯ ಭೀತಿ ಪಸರಿಸಿದೆ ಎಂದರೆ, ಇದೀಗ ಯಾವುದೇ ಕಂಪನಿ ಚಾನ್ಸ್ ತೆಗೆದುಕೊಳ್ಳಲು ಇಷ್ಟಪಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ನೀಂದ ಪಾರಾಗಲು ಬಯಸಿರುವ ಖ್ಯಾತ ಮೈಕ್ರೋ ಬ್ಲಾಗಿಂಗ್ ಸೈಟ್ TWITTER ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ಸಂಸ್ಥೆ ವಿಶ್ವಾದ್ಯಂತ ತನ್ನ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ನೌಕರರಿಗೆ ನೌಕರಿ ಮಾಡಲು ಕಚೇರಿಗೆ ಬರುವ ಅಗತ್ಯವಿಲ್ಲ ಹಾಗೂ ನೌಕರರು ತಮ್ಮ ಮನೆಯಲ್ಲಿಯೇ ಕುಳಿತು ಕೆಲಸ ಮಾಡಬಹುದಾಗಿದೆ ಎಂದು ಹೇಳಿದೆ.

ಒಟ್ಟು 5000 ನೌಕರರಿಗೆ ಸಿಗಲಿದೆ ಈ ನೆಮ್ಮದಿ
ಮಂಗಳವಾರ ಈ ಕುರಿತು ಟ್ವೀಟ್ ಮಾಡಿರುವ ಸಂಸ್ಥೆ, ಈ ಕುರಿತು ಎಲ್ಲ ನೌಕರರಿಗೆ ಮೇಲ್ ವೊಂದನ್ನು ಮಾಡಲಾಗಿದ್ದು, ಎಲ್ಲ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಬಹುದು ಎಂಬ ಸಲಹೆಯನ್ನು ನೀಡಲಾಗಿದೆ ಎಂದಿದೆ. ಕೆಲಸಕ್ಕಾಗಿ ನೀವು ಇದೀಗ ಕಂಪನಿಯ ಕಚೇರಿಗೆ ಬರುವ ಅಗತ್ಯವಿಲ್ಲ ಎಂದು ಸಂಸ್ಥೆ ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ಟ್ವಿಟ್ಟರ್ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಜೆನ್ನಿಫರ್ ಕ್ರಿಸ್ಟಿ, ಕೊರೊನಾ ವೈರಸ್ ನ ಪ್ರಭಾವವನ್ನು ತಡೆಹಿಡಿಯಲು ಸಂಸ್ಥೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು, ಇದರದೇ ಒಂದು ಭಾಗವಾಗಿ ನಾವು ವಿಶ್ವಾದ್ಯಂತ ಇರುವ ನಮ್ಮ ಎಲ್ಲ ನೌಕರರಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಸಲಹೆ ನೀಡಿರುವುದಾಗಿ ಹೇಳಿದೆ.

ಇದಕ್ಕೂ ಮೊದಲು ಹಾಂಗ್ ಕಾಂಗ್, ಜಪಾನ್ ಹಾಗೂ ದಕ್ಷಿಣ ಕೊರಿಯಾನಲ್ಲಿ ಕಾರ್ಯನಿರ್ವಹಿಸುತ್ತಿದ್ದ ತನ್ನ ಎಲ್ಲ ನೌಕರರಿಗೆ ಟ್ವಿಟ್ಟರ್ ಈಗಾಗಲೇ ಮನೆಯಿಂದ ಕೆಲಸ ಮಾಡಲು ಹೇಳಿತ್ತು. ಆದರೆ, ಇದೀಗ ಇಡಿ ವಿಶ್ವಾದ್ಯಂತ ಕೊರೊನಾ ವೈರಸ್ ಸೋಂಕು ಪಸರಿಸಿದ್ದು, ವ್ಯಾಪಕ ಪ್ರಭಾವ ಬೀರಲಾರಂಭಿಸಿದೆ. ಇದನ್ನು ಮನಗಂಡ ಕಂಪನಿ ತನ್ನ ಎಲ್ಲ ನೌಕರರಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಸಲಹೆ ನೀಡಿದೆ. ಇದಕ್ಕೆ ಸಂಬಂಧಿಸಿದ ತಜ್ಞರು ಹೇಳುವ ಪ್ರಕಾರ, ಟ್ವಿಟ್ಟರ್, ಫೇಸ್ ಬುಕ್ ಅಥವಾ ಗೂಗಲ್ ನಂತಹ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಜನರು, ತಮ್ಮ ಕಾರ್ಯಕ್ಷೇತ್ರದ ವ್ಯಾಪಕತೆಯ ಕಾರಣ ನಿರಂತರವಾಗಿ ಇತರೆ ದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಲೇ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಈ ಮಾರಕ ವೈರಸ್ ಕಂಪನಿಗೆ ಲಗ್ಗೆ ಇಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ವೈರಸ್ ನ ಸೊಂಕು ಪಸರಿಸುವ ಪ್ರಭಾವ ಕಡಿಮೆ ಮಾಡಲು ಈ ಮಹತ್ವದ ನಿರ್ಣಯ ಕೈಗೊಂಡಿದೆ.

ಕೇವಲ ಯುರೋಪ್ ಒಂದರಿಂದಲೇ ಸುಮಾರು 3000ಕ್ಕೂ ಅಧಿಕ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೀಗ ಇಡೀ ವಿಶ್ವಾದ್ಯಂತ ಕೊರೊನಾ ವೈರಸ್ ಸೋಂಕಿಗೆ ಸುಮಾರು 3,119 ಜನ ಬಲಿಯಾಗಿದ್ದಾರೆ. ಜೊತೆಗೆ ಸುಮಾರು 90,933 ಜನರು ಈ ಸೋಂಕಿನ ಪ್ರಭಾವಕ್ಕೆ ಗುರಿಯಾಗಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.

Trending News