Coronavirus Update: ಕೊರೊನಾ ಪ್ರೋಟೋಕಾಲ್ ಮರೆತರೆ ಮತ್ತೆ ನಿರ್ಬಂಧಗಳು ಜಾರಿ: ಕೇಂದ್ರ

ನವದೆಹಲಿ: Health Ministry Brief On Covid-19 Cases - ಕರೋನಾ ಸೋಂಕಿನ ಎರಡನೇ (Coronavirus Second Wave) ಅಲೆ ದುರ್ಬಲಗೊಂಡ ನಂತರ ಮತ್ತು ನಿರ್ಬಂಧಗಳಲ್ಲಿ  ನೀಡಿದ ಬಳಿಕ, ಜನರು ಪ್ರವಾಸಗಳನ್ನು ಕೈಗೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಮನಾಲಿ, ಶಿಮ್ಲಾದಂತಹ ಗಿರಿಧಾಮಗಳಿಂದಲೂ ಕೂಡ ಇಂತಹ ಚಿತ್ರಣ ಕಂಡುಬರುತ್ತಿದೆ. 

Written by - Nitin Tabib | Last Updated : Jul 6, 2021, 06:44 PM IST
  • ಕೊರೊನಾ ವೈರಸ್ ಪ್ರಕರಣಗಳ ಕುರಿತು ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿ
  • ಜನರು ಕೊರೊನಾ ಪ್ರೋಟೋಕಾಲ್ ಗಳನ್ನು ಪಾಲಿಸುತ್ತಿಲ್ಲ.
  • ಹೀಗೆಯೇ ಮುಂದುವರೆದಲ್ಲಿ ಮತ್ತೆ ನಿರ್ಬಂಧ ಜಾರಿಗೊಳಿಸಲಾಗುವುದು.
Coronavirus Update: ಕೊರೊನಾ ಪ್ರೋಟೋಕಾಲ್ ಮರೆತರೆ ಮತ್ತೆ ನಿರ್ಬಂಧಗಳು ಜಾರಿ: ಕೇಂದ್ರ title=
Health Ministry Brief On Covid-19 Cases (Photo Courtesy-ANI)

ನವದೆಹಲಿ: Health Ministry Brief On Covid-19 Cases - ಕರೋನಾ ಸೋಂಕಿನ ಎರಡನೇ (Coronavirus Second Wave) ಅಲೆ ದುರ್ಬಲಗೊಂಡ ನಂತರ ಮತ್ತು ನಿರ್ಬಂಧಗಳಲ್ಲಿ  ನೀಡಿದ ಬಳಿಕ, ಜನರು ಪ್ರವಾಸಗಳನ್ನು ಕೈಗೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಮನಾಲಿ, ಶಿಮ್ಲಾದಂತಹ ಗಿರಿಧಾಮಗಳಿಂದಲೂ ಕೂಡ ಇಂತಹ ಚಿತ್ರಣ ಕಂಡುಬರುತ್ತಿದೆ. ಇದರಲ್ಲಿ ಜನರು ಫೇಸ್ ಮಾಸ್ಕ್ ಮತ್ತು ಸಾಮಾಜಿಕ ಅಂತರಗಳಂತಹ ಅಗತ್ಯ ನಿಯಮಗಳನ್ನು ಅನುಸರಿಸುತ್ತಿಲ್ಲ. ಏತನ್ಮಧ್ಯೆ, ಜನರು ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದರೆ, ಮತ್ತೊಮ್ಮೆ ನಿರ್ಬಂಧಗಳಲ್ಲಿನ ಸಡಿಲಿಕೆಯನ್ನು ಹಿಂಪಡೆಯಲಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್, "ಇದುವರೆಗೆ ಕೊರೊನಾ ಎರಡನೇ ಅಲೆಯನ್ನು ನಿಭಾಯಿಸುವಲ್ಲಿ ದೊರೆತ ಪ್ರಯಾಸದ ಯಶವನ್ನು, ಕೊರೊನಾ ಪ್ರೋಟೋಕಾಲ್ (Covid-19 Protocol) ಮುರಿಯುವವರು ಮುಗಿಸಿಹಾಕುತ್ತಿದ್ದಾರೆ" ಎಂದಿದ್ದಾರೆ.

ಇದನ್ನೂ ಓದಿ- GPF Interest Rate: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, GPF ಹೊಸ ಬಡ್ಡಿದರಗಳು ಪ್ರಕಟ

Coronavirus Latest Update Today - "ಜನರು ಗಿರಿಧಾಮಗಳತ್ತ ಪ್ರಯಾಣ ಆರಂಭಿಸಿದ್ದಾರೆ. ಈ ಜನರು ಕರೋನಾ ಪ್ರೋಟೋಕಾಲ್ (Corona Protocol) ಅನ್ನು ಅನುಸರಿಸುತ್ತಿಲ್ಲ. ಇದು ಸಂಭವಿಸಿದಲ್ಲಿ, ನಾವು ಇಲ್ಲಿಯವರೆಗೆ ನೀಡಿರುವ ಸಡಿಲಿಕೆಯನ್ನು ಸಹ ಹಿಂತೆಗೆದುಕೊಳ್ಳಬಹುದು. ಕರೋನದ ಎರಡನೇ ಅಲೆ ಇನ್ನೂ ಮುಗಿದಿಲ್ಲ" ಎಂದು ಲವ್ ಅಗರ್ವಾಲ್ ಹೇಳಿದ್ದಾರೆ. ಎರಡನೇ ಅಲೆ ಇನ್ನೂ  ನಮ್ಮ ನಡುವೆ ಸೀಮಿತ ರೂಪದಲ್ಲಿ ಇದೆ.  ದೇಶದಲ್ಲಿ ಸಕ್ರಿಯ ಕರೋನ ಪ್ರಕರಣಗಳ ಸಂಖ್ಯೆ ಇದೀಗ 5 ಲಕ್ಷಕ್ಕಿಂತ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ. ಅದು ಇನ್ನೂ ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ತ್ರಿಪುರ, ಮೇಘಾಲಯ ಮತ್ತು ಸಿಕ್ಕಿಂ ಅನ್ನು ಕಳವಳಕ್ಕೆ ಕಳವಳಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಈ ರಾಜ್ಯಗಳು  ಇನ್ನೂ 10% ಕ್ಕಿಂತ ಹೆಚ್ಚು ಸಕಾರಾತ್ಮಕ ದರ ಹೊಂದಿವೆ ಅಲ್ಲಿ ಇನ್ನೂ ಹೊಸ ಪ್ರಕರಣಗಳೂ ಕೂಡ ಕಂಡುಬರುತ್ತಿವೆ" ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-Union Cabinet : ಕೇಂದ್ರ ಕ್ಯಾಬಿನೆಟ್ ನಿಂದ 8 ಹೊಸ ರಾಜ್ಯಪಾಲರ ನೇಮಕ ಪೂರ್ಣ ಪಟ್ಟಿ ಇಲ್ಲಿದೆ ಪರಿಶೀಲಿಸಿ!

Coronavirus Cases In India: ಆದರೆ, ಏತನ್ಮಧ್ಯೆ ದೇಶಾದ್ಯಂತ ಕೊರೊನಾ ಪ್ರಕರಣಗಳ ವೇಗ ಕಡಿಮೆಯಾಗಿದೆ. ಕಳೆದ ವಾರದಲ್ಲಿ ಕೊರೊನಾ ದಿನನಿತ್ಯದ ಸರಾಸರಿ ಹೊಸ ಪ್ರಕರಣಗಳಲ್ಲಿ ಶೇ.13ರಷ್ಟು ಇಳಿಕೆಯಾಗಿದೆ. ದೇಶಾದ್ಯಂತ ಕೇವಲ 91 ಜಿಲ್ಲೆಗಳಲ್ಲಿ ಮಾತ್ರ ಪ್ರತಿನಿತ್ಯ 100ಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಮಾರ್ಚ್ 4 ರಂದು ಈ ಅಂಕಿ 531 ಜಿಲ್ಲೆಗಳು ಆಗಿತ್ತು.  ಹೀಗಿರುವಾಗ ಆ ಗರಿಷ್ಠ ಸಂಖ್ಯೆಯ ಹೋಲಿಕೆಯಲ್ಲಿ ಇಂದು ಪ್ರಕರಣಗಳು ತುಂಬಾ ಕಡಿಮೆಯಾಗಿವೆ. ದೇಶಾದ್ಯಂತ ಕೇವಲ 90 ಜಿಲ್ಲೆಗಳಿಂದ ಶೇ.80ರಷ್ಟು ಪ್ರಕರಣಗಳು ವರದಿಯಾಗುತ್ತಿವೆ ಎಂದು ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ-NPS ಚಂದಾದಾರರಿಗೆ ಬಿಗ್ ನ್ಯೂಸ್ : ಮೆಚ್ಯೂರಿಟಿ ಪೂರ್ವ ನಿರ್ಗಮನಕ್ಕೆ ಹೊಸ ನಿಯಮ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News