ನವದೆಹಲಿ: ಕೇಂದ್ರ ಸರ್ಕಾರವು 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಕೊರೊನಾ ಬೂಸ್ಟರ್ ಡೋಸ್ ಲಸಿಕೆ(Covid 19 Booster Shot) ನೀಡಲು ಪ್ರಾರಂಭಿಸಿದೆ. Omicron ರೂಪಾಂತರಿ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಜನರು ಬೂಸ್ಟರ್ ಡೋಸ್ ಪಡೆಯಲು ಆತುರಪಡುತ್ತಿದ್ದಾರೆ. ವಂಚಕರು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಹೊಸ ರೀತಿಯ ಹಗರಣದಲ್ಲಿ ಸೈಬರ್ ಅಪರಾಧಿಗಳು ಬೂಸ್ಟರ್ ಲಸಿಕೆ(Booster Dose Scam)ಗಳ ಬಗ್ಗೆ ಮಾಹಿತಿ ನೀಡುವ ನೆಪದಲ್ಲಿ ಜನರಿಂದ ಪ್ರಮುಖ ಮಾಹಿತಿ ಖರೀದಿಯುತ್ತಿದ್ದಾರೆ. ಆ ವಿವರಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಲಾಗುತ್ತಿದೆ. ಹೀಗಾಗಿ ಈ ಬಗ್ಗೆ ಜನರು ಎಚ್ಚರಿಕೆಂದ ಇರಬೇಕು.
ಈ ಹಗರಣ ಹೇಗೆ ನಡೆಯುತ್ತದೆ..?
ಮೊದಮೊದಲು ಮೋಸಗಾರರು ನಿಮಗೆ ಕರೆ ಮಾಡಿ ತಮ್ಮನ್ನು ಸರ್ಕಾರಿ ನೌಕರರು ಎಂದು ಹೇಳಿಕೊಳ್ಳುತ್ತಾರೆ. ಅಪರಾಧಿಗಳು ಹೆಚ್ಚಾಗಿ ಹಿರಿಯ ನಾಗರಿಕರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ. ಫೋನ್ ಮಾಡಿದ ತಕ್ಷಣ ನಿಮ್ಮ ಮಾಹಿತಿ ಪಡೆದುಕೊಂಡು, ಡಬಲ್ ಡೋಸ್(Booster Dose Scandal) ಬೇಕಾ ಎಂದು ಕೇಳುತ್ತಾರೆ. ವಂಚಕರಿಗೆ ಈ ಮೊದಲೇ ನಿಮ್ಮ ಅಲ್ಪಸ್ವಲ್ಪ ಮಾಹಿತಿ ಸಿಕ್ಕಿರುತ್ತದೆ. ಹೀಗಾಗಿ ನಯವಾಗಿ ಮಾತನಾಡಿ ನಂಬಿಕೆ ಬರುವಂತೆ ನಟಿಸುತ್ತಾರೆ. ಬಳಿಕ ನಿಮ್ಮ ಹೆಸರು, ವಯಸ್ಸು, ವಿಳಾಸ ಮತ್ತು ಇತರ ವಿವರಗಳನ್ನು ಕೇಳುತ್ತಾನೆ. ಈ ದಿನ ನಾವು ನಿಮಗೆ ವ್ಯಾಕ್ಸಿನೇಷನ್ ಹಾಕುತ್ತೇವೆಂದು ಹೇಳಿ ದಿನಾಂಕವನ್ನೂ ಸಹ ನಿಮಗೆ ಹೇಳುತ್ತಾರೆ.
ಇದನ್ನೂ ಓದಿ: ಎರಡು ಡೋಸ್ ಲಸಿಕೆ ಪಡೆದವರಿಗೆ ಸಿಹಿಸುದ್ದಿ: ಈ ಏರ್‌ಲೈನ್ ಕಂಪನಿ ನೀಡುತ್ತಿದೆ ಭರ್ಜರಿ ಕೊಡುಗೆ..!
ಒಟಿಪಿ ಕೊಟ್ಟರೆ ನಿಮ್ಮ ಖಾತೆಯಿಂದ ಹಣ ಮಾಯ!
ವಂಚಕರು ನಿಮ್ಮ ಬಳಿ ಸಂಪೂರ್ಣ ಮಾಹಿತಿ ಪಡೆದುಕೊಂಡ ಬಳಿಕ ನೀವು ಕೋವಿಡ್-19(COVID-19) ಲಸಿಕೆ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಆಸಕ್ತಿ ಹೊಂದಿದ್ದೀರಾ ಮತ್ತು ಅದಕ್ಕಾಗಿ ಸ್ಲಾಟ್ ಅನ್ನು ಬುಕ್ ಮಾಡಲು ಬಯಸುವಿರಾ ಎಂದು ಕೇಳುತ್ತಾರೆ. ಡೋಸ್‌ಗೆ ಸೂಕ್ತವಾದ ದಿನಾಂಕ ಮತ್ತು ಸಮಯವನ್ನು ಪರಿಶೀಲಿಸಿದ ನಂತರ ನಿಮ್ಮ ಮೊಬೈಲ್‌ನಲ್ಲಿ ಸ್ವೀಕರಿಸುವ OTP ಕುರಿತು ಕೇಳುತ್ತಾರೆ. ಇಲ್ಲಿಂದಲೇ ನಿಜವಾದ ವಂಚನೆ ಆರಂಭವಾಗುತ್ತದೆ. ಅವರಿಗೆ ನಿಮ್ಮ ಮೊಬೈಲ್ ನಲ್ಲಿ ಬರುವ OTP ಅಷ್ಟೇ ಬೇಕು. ಒಂದು ವೇಳೆ ನೀವು ಏನಾದರೂ ಒಟಿಪಿ ಸಂಖ್ಯೆ ಹೇಳಿದರೆ ಮುಗಿಯಿತು ನಿಮ್ಮ ಖಾತೆಯಿಂದ ಹಣ ಮಂಗಮಾಯವಾಗುತ್ತದೆ. ಈ
ವಂಚನೆಗೆ ಬಲಿಯಾಗದಿರಲು ಹೀಗೆ ಮಾಡಿ
ಸರ್ಕಾರವು ಫೋನ್ ಕರೆಗಳ ಮೂಲಕ ಲಸಿಕೆ(CoronaVirus) ಸ್ಲಾಟ್‌ಗಳನ್ನು ಬುಕ್ ಮಾಡುವುದಿಲ್ಲ ಎಂಬುದನ್ನು ನೀವು ಗಮನಿಸಬೇಕು. ನೀವು ಕೋವಿಡ್-19 ಲಸಿಕೆಗಾಗಿ ಸ್ಲಾಟ್ ಅನ್ನು ಬುಕ್ ಮಾಡಲು ಬಯಸಿದರೆ http://cowin.gov.in ಗೆ ಭೇಟಿ ನೀಡಬಹುದು. ನೀವು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಮೂಲಕ ಕೂಡ ಈ ಸೈಟ್ ಗೆ ಭೇಟಿ ನೀಡಿ ಬುಕ್ ಮಾಡಬಹುದು. ನಿಮಗೆ ಸ್ಲಾಟ್ ಕಾಯ್ದಿರಿಸಲು ಸಾಧ್ಯವಾಗದಿದ್ದರೆ ಮಾನ್ಯವಾದ ಸರ್ಕಾರಿ ಗುರುತಿನ ಚೀಟಿಯೊಂದಿಗೆ ಯಾವುದೇ ಲಸಿಕೆ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನೀವು ಲಸಿಕೆ ತೆಗೆದುಕೊಳ್ಳಬಹುದು.
ಇದನ್ನೂ ಓದಿ: Baal Aadhar Card:ಹುಟ್ಟಿದ ಮಗುವಿಗೆ ಆಧಾರ್ ಕಾರ್ಡ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಜನರು ಸಾಮಾನ್ಯವಾಗಿ OTP ಯೊಂದಿಗೆ ಬರುವ ಸಂದೇಶದ ಬಗ್ಗೆ ನಿರ್ಲಕ್ಷ್ಯವಹಿಸುತ್ತಾರೆ. ನೀವು ಯಾವಾಗಲೂ OTP ಯೊಂದಿಗೆ ಬರುವ ಸಂದೇಶವನ್ನು ಓದಬೇಕು. ಏಕೆಂದರೆ ಅದು ಕೋಡ್ ಅನ್ನು ಯಾವುದಕ್ಕಾಗಿ ಬಳಸುತ್ತದೆ ಎಂದು ಹೇಳುತ್ತದೆ ಮತ್ತು ನೀವು ಈ ಒಂದು ಬಾರಿಯ ಪಾಸ್‌ವರ್ಡ್ ಅನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು. ಇಲ್ಲದಿದ್ದರೆ ನೀವು ಸುಲಭವಾಗಿ ವಂಚನೆ(Online Fraud)ಗೆ ಬಲಿಯಾಗಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.