COVID-19: ಸರ್ಕಾರ ನಿಮ್ಮ ವಾಟ್ಸಾಪ್ ಸಂದೇಶಗಳನ್ನು ಸ್ಕ್ರೀನಿಂಗ್ ಮಾಡುತ್ತಿದೆಯೇ? ವದಂತಿ ಬಗ್ಗೆ PIB ಟ್ವೀಟ್

ವಾಟ್ಸಾಪ್ ಸಂದೇಶಗಳ ಮೇಲೆ ಸರ್ಕಾರ ಬೇಹುಗಾರಿಕೆ ನಡೆಸುತ್ತಿರುವ ಬಗ್ಗೆ  ಪಿಐಬಿ ಫ್ಯಾಕ್ಟ್ ಚೆಕ್‌ನ ಟ್ವಿಟರ್ ಹ್ಯಾಂಡಲ್ 'ಎಚ್ಚರಿಕೆ' ನೀಡಿದೆ.

Last Updated : Apr 8, 2020, 10:36 AM IST
COVID-19: ಸರ್ಕಾರ ನಿಮ್ಮ ವಾಟ್ಸಾಪ್ ಸಂದೇಶಗಳನ್ನು ಸ್ಕ್ರೀನಿಂಗ್ ಮಾಡುತ್ತಿದೆಯೇ? ವದಂತಿ ಬಗ್ಗೆ PIB ಟ್ವೀಟ್ title=

ನವದೆಹಲಿ:  ವಾಟ್ಸಾಪ್ ಸಂದೇಶಗಳ ಮೇಲೆ ಸರ್ಕಾರ ಬೇಹುಗಾರಿಕೆ ನಡೆಸುತ್ತಿದೆ ಎಂದು ಹರಿದಾಡುತ್ತಿರುವ ವದಂತಿಗಳ ಬಗ್ಗೆ ಏಪ್ರಿಲ್ 7ರಂದು ಪಿಐಬಿ ಫ್ಯಾಕ್ಟ್ ಚೆಕ್‌ನ ಟ್ವಿಟರ್ ಹ್ಯಾಂಡಲ್ 'ಎಚ್ಚರಿಕೆ' ನೀಡಿದೆ.

ವದಂತಿಗಳ ಕುರಿತಂತೆ ಟ್ವೀಟ್ ಮಾಡಿರುವ ಪಿಐಬಿ ಹೋಗಲಾಡಿಸುವ ಸ್ಪಷ್ಟ ಪ್ರಯತ್ನದಲ್ಲಿ, ವಾಟ್ಸಾಪ್ ಸಂದೇಶದಲ್ಲಿ ಮೂರು ಟಿಕ್ ಇರುವ ಬಗ್ಗೆ ಹರಿದಾಡುತ್ತಿರುವ ವದಂತಿಯನ್ನು ಸರ್ಕಾರ ಗಮನಕ್ಕೆ ತೆಗೆದುಕೊಂಡಿದೆ. ಆದರೆ ವಾಟ್ಸಾಪ್ ಸಂದೇಶದಲ್ಲಿ ಮೂರು ಟಿಕ್ ಗಳನ್ನು ಕಂಡು ಬಂದಿಲ್ಲ ಎಂದು ಪಿಐಬಿ ಸ್ಪಷ್ಟನೆ ನೀಡಿದೆ.

ವಾಟ್ಸಾಪ್ ಸಂದೇಶವನ್ನು ಕಳುಹಿಸುವಾಗ ಅದರ ಮುಂದೆ ಒಂದು ಟಿಕ್ ಅನ್ನು ತೋರಿಸಲಾಗುತ್ತದೆ, ಸಂದೇಶವನ್ನು ಇತರ ವ್ಯಕ್ತಿಯು ಸ್ವೀಕರಿಸಿದಾಗ ಎರಡು ಟಿಕ್ ಮತ್ತು ಆ ವ್ಯಕ್ತಿಯು ಸಂದೇಶವನ್ನು ಓದಿದಾಗ ಎರಡೂ ಟಿಕ್ ನೀಲಿ ಬಣ್ಣಕ್ಕೆ ತಿರುಗುತ್ತದೆ ಎಂಬುದನ್ನು ಗಮನಿಸಬೇಕು.

ಟ್ವಿಟರ್ ಹ್ಯಾಂಡಲ್ ಸಹ ವಾಟ್ಸಾಪ್ನಲ್ಲಿ ಕೆಳಗೆ ತಿಳಿಸಲಾದ ವದಂತಿಗಳೆಲ್ಲವೂ ನಕಲಿ ಎಂದು ಖಚಿತಪಡಿಸುತ್ತದೆ:

-2 ನೀಲಿ + 1 ರೆಡ್ ಟಿಕ್ (ಇದರರ್ಥ ಸರ್ಕಾರ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು)

-1 ನೀಲಿ + 2 ಕೆಂಪು ಟಿಕ್ (ಅಂದರೆ ಸರ್ಕಾರ ನಿಮ್ಮ ಡೇಟಾವನ್ನು ಪ್ರದರ್ಶಿಸುತ್ತಿದೆ)

-3 ಕೆಂಪು ಟಿಕ್ (ಇದರರ್ಥ ಸರ್ಕಾರವು ಕ್ರಮವನ್ನು ಪ್ರಾರಂಭಿಸಿದೆ ಮತ್ತು ಕಳುಹಿಸುವವರು ನ್ಯಾಯಾಲಯದಿಂದ ಸಮನ್ಸ್ ಸ್ವೀಕರಿಸುತ್ತಾರೆ)

ಏತನ್ಮಧ್ಯೆ,  ಕರೋನಾವೈರಸ್ (Coronavirus) ​ COVID-19 ಗೆ ಸಂಬಂಧಿಸಿದ ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯುವ ಸಲುವಾಗಿ ಬಳಕೆದಾರರು ಆಗಾಗ್ಗೆ ಫಾರ್ವರ್ಡ್ ಮಾಡುವ ಸಂದೇಶಗಳನ್ನು ಒಂದು ಚಾಟ್‌ಗೆ ಸೀಮಿತಗೊಳಿಸಲು ವಾಟ್ಸಾಪ್ ನಿರ್ಧರಿಸಿದೆ. ಸಂದೇಶವನ್ನು ಈ ಹಿಂದೆ ಸಂದೇಶಗಳನ್ನು ಐದು ಜನರಿಗೆ ಒಟ್ಟಿಗೆ ಫಾರ್ವರ್ಡ್ ಮಾಡಬಹುದಾಗಿತ್ತು. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ವದಂತಿಗಳು ಮತ್ತು ನಕಲಿ ಸುದ್ದಿಗಳನ್ನು ಹರಡದಂತೆ ತಡೆಯಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಈ ಕರ್ಮ ಕೈಗೊಳ್ಳಲಾಗಿದೆ.

ವಾಟ್ಸಾಪ್ನಲ್ಲಿ ಈಗ ನಾವು ಒಂದು ವೇಳೆಗೆ ಒಂದು ಸಂದೇಶವನ್ನು ಕಳುಹಿಸುವ ಮಿತಿಯನ್ನು ಪರಿಚಯಿಸುತ್ತಿದ್ದೇವೆ. ಇದರಿಂದಾಗಿ ಒಂದು ಸಮಯದಲ್ಲಿ ಒಂದು ಚಾಟ್‌ಗೆ ಮಾತ್ರ ಫಾರ್ವರ್ಡ್ ಮಾಡಬಹುದು. ಬಳಕೆದಾರರು ನಮಗೆ ಹೇಳಿರುವ ಫಾರ್ವರ್ಡ್ ಮಾಡುವಿಕೆಯ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳವನ್ನು ನಾವು ನೋಡಿದ್ದೇವೆ ಮತ್ತು ಅದು ವದಂತಿ ಹರಡುವಿಕೆಗೆ ಕಾರಣವಾಗಬಹುದು ಎಂದು ವದಂತಿಗಳ ಬಗ್ಗೆ ಫೇಸ್‌ಬುಕ್ ಒಡೆತನದ ವಾಟ್ಸಾಪ್ ತನ್ನ ಬ್ಲಾಗ್‌ನಲ್ಲಿ ಮಂಗಳವಾರ ಹೇಳಿದೆ.

Trending News