Cyclone Yaas Bihar Update: ರಾಜಧಾನಿ ಪಾಟ್ನಾವನ್ನು ವೈಶಾಲಿಗೆ ಸಂಪರ್ಕಿಸುವ ಭದ್ರಾ ಘಾಟ್ನಲ್ಲಿರುವ ಪಿಪಾ ಸೇತುವೆಯ ಅಪ್ರೋಚ್ ರಸ್ತೆ ಕುಸಿದಿದೆ. ಅದೇ ಸಮಯದಲ್ಲಿ, ವೈಶಾಲಿಯ ರಾಘೋಪುರದಲ್ಲಿ ಭಾರಿ ಮಳೆಯಿಂದಾಗಿ ರುಸ್ತಾಂಪುರ್ ಪೀಪಾಪುಲ್ ಹಾನಿಗೊಳಗಾಗಿದೆ ಎಂದು ವರದಿಯಾಗಿದೆ.
ಯಾಸ್ ಚಂಡಮಾರುತದ ಕುರಿತು ಪ್ರಧಾನಿ ಮೋದಿ ಕರೆದಿದ್ದ ಸಭೆಗೆ ಸಿಎಂ ಮಮತಾ ಅವರು ಗೈರು ಹಾಜರಾಗುವ ಮೂಲಕ ಸಾಂವಿಧಾನಿಕ ನೀತಿಗಳನ್ನು ಹತ್ಯೆಗೈದಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ದಾ ಟೀಕಾ ಪ್ರಹಾರ ನಡೆಸಿದ್ದಾರೆ.
ಯಾಸ್ ಚಂಡಮಾರುತ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳನ್ನು ಪ್ರವೇಶಿಸಿದೆ. ಕರಾವಳಿ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರಗಳಲ್ಲಿ ರಕ್ಕಸ ಗಾತ್ರದ ಅಲೆಗಳು ಏಳಲಾರಂಭಿಸಿವೆ.
ಯಾಸ್ ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾ ಮತ್ತು ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಬಾರೀ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಇನ್ನು ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪೋರ್ ಜಿಲ್ಲೆಯ ನ್ಯೂ ದಿಘಾ ಸೀ ಬಿಚ್ ಬಳಿಯ ವಸತಿ ಪ್ರದೇಶಗಳಿಗೆ ಸಮುದ್ರದ ನೀರು ನುಗ್ಗಿರುವ ಬಗ್ಗೆಯೂ ವರದಿಯಾಗಿದೆ.
ಯಾಸ್ ಚಂಡಮಾರುತವು ಮೇ 26 ರಂದು ಬಂಗಾಳ ಮತ್ತು ಒಡಿಶಾದ ತೀರಕ್ಕೆ ಅಪ್ಪಳಿಸಲಿದೆ. ಚಂಡಮಾರುತದ ಪರಿಣಾಮ ಇಂದಿನಿಂದಲೇ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಒಡಿಶಾದ ಕರಾವಳಿ ಪ್ರದೇಶಗಳಾದ ಬಾಲಸೋರ್ ಮತ್ತು ಚಂಡಿಪುರದಲ್ಲಿ ಭಾರಿ ಮಳೆ ಪ್ರಾರಂಭವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.