ರಾಮಮಂದಿರ ನಿರ್ಮಾಣದ ದಿನವನ್ನು 2019 ರ ಕುಂಭದಲ್ಲಿ ನಿರ್ಧರಿಸಲಾಗುವುದು-ರಾಮಜೀ ದಾಸ್

ರಾಮಮಂದಿರದ ನಿರ್ಮಾಣವನ್ನು ಪ್ರಯಾಗರಾಜ್ ನಲ್ಲಿ ನಡೆಯಲಿರುವ ಕುಂಭದ ಸಂದರ್ಭದಲ್ಲಿ ನಿರ್ಧರಿಸಲಾಗುವುದು ಎಂದು ವಿಶ್ವ ಹಿಂದು ಪರಿಷತ್ ಆಯೋಜಿಸಿದ್ದ ಧರ್ಮ ಸಭಾದಲ್ಲಿ ನಿರ್ಮೊಯಿ ಅಖಾರಾದ ರಾಮಜೀ ದಾಸ್ ತಿಳಿಸಿದ್ದಾರೆ.

Last Updated : Nov 25, 2018, 08:44 PM IST
ರಾಮಮಂದಿರ ನಿರ್ಮಾಣದ ದಿನವನ್ನು 2019 ರ ಕುಂಭದಲ್ಲಿ ನಿರ್ಧರಿಸಲಾಗುವುದು-ರಾಮಜೀ ದಾಸ್  title=

ನವದೆಹಲಿ: ರಾಮಮಂದಿರದ ನಿರ್ಮಾಣವನ್ನು ಪ್ರಯಾಗರಾಜ್ ನಲ್ಲಿ ನಡೆಯಲಿರುವ ಕುಂಭದ ಸಂದರ್ಭದಲ್ಲಿ ನಿರ್ಧರಿಸಲಾಗುವುದು ಎಂದು ವಿಶ್ವ ಹಿಂದು ಪರಿಷತ್ ಆಯೋಜಿಸಿದ್ದ ಧರ್ಮ ಸಭಾದಲ್ಲಿ ನಿರ್ಮೊಯಿ ಅಖಾರಾದ ರಾಮಜೀ ದಾಸ್ ತಿಳಿಸಿದ್ದಾರೆ.

ಬಡೇ ಭಕ್ತಿಮಾಲ್ ಕಿ ಬಾಗಿಯಾದಲ್ಲಿ ಮಂತ್ರಗಳ ಪಠಣವನ್ನು ಉದ್ಘಾಟಿಸಿದ ನಂತರ ಉದ್ಘಾಟನಾ ಸಮಾವೇಶದಲ್ಲಿ ಮಾತನಾಡಿದ ರಾಮಜೀ ದಾಸ್, "ರಾಮ ಮಂದಿರದ ನಿರ್ಮಾಣದ ದಿನಾಂಕವನ್ನು ಪ್ರಯಾಗರಾಜ್ ದಲ್ಲಿ 2019 ರಲ್ಲಿ ನಡೆಯುವ ಕುಂಭದಲ್ಲಿ ಘೋಷಿಸಲಾಗುವುದು. ಇದಕ್ಕೆ ಕೆಲವು ದಿನಗಳು ಮಾತ್ರ ಇವೆ ಆದ್ದರಿಂದ ತಾವು ಎಲ್ಲರು ತಾಳ್ಮೆಯಿಂದ ಇರಬೇಕೆಂದು ಅವರು ತಿಳಿಸಿದರು.ರಾಮಮಂದಿರವನ್ನು ನಿರ್ಮಿಸುವ ವಿಚಾರವಾಗಿ ಚರ್ಚಿಸಲು ರಾಮ ಭಕ್ತರು ಕರೆದಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಮ ಜನ್ಮಭೂಮಿ ನ್ಯಾಸ್ ಅಧ್ಯಕ್ಷ  ನೃತ್ಯ ಗೋಪಾಲ್ ದಾಸ್ ಮಾತನಾಡಿ "ಇಂತಹ ದೊಡ್ಡ ಹಾಜರಾತಿ ನಿಜಕ್ಕೂ ರಾಮಮಂದಿರ ನಿರ್ಮಾಣಕ್ಕೆ ಎಷ್ಟು ವಿಭಿನ್ನ ಬಗೆಯ ಜನರಿಗೆ ಬಂಧವಾಗಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು.ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಮೇಲೆ ನಾವು ಬಹಳ ಭರವಸೆ ಹೊಂದಿದ್ದೇವೆ ಎಂದರು. 

Trending News