ಡಿಯರ್ ಜಿಂದಗಿ : ಬಿರುಗಾಳಿ ಏಳುವ ಮೊದಲು

    

Last Updated : Jun 7, 2018, 04:33 PM IST
ಡಿಯರ್ ಜಿಂದಗಿ : ಬಿರುಗಾಳಿ ಏಳುವ ಮೊದಲು  title=

ಲೇಖಕರು- ದಯಾಶಂಕರ್ ಮಿಶ್ರಾ

ಬಿರು ಬಿಸಿಲಿನ ಸಂಗತಿಯ ಕುರಿತಾಗಿ ಮುಖ್ಯಾಂಶಗಳು ಬರುತ್ತಿರುವಂತೆ ...  ಇನ್ನೊಂದೆಡೆ ದೇಶದ ವಿವಿಧ ಭಾಗಗಳಿಂದ ಬರುವ ಕೆಲವು ವರದಿಗಳಿಂದ ಎಷ್ಟೋ ಕುಟುಂಬಗಳ ಹೃದಯ ಒಡೆದು ಹೋಗುತ್ತಿವೆ ಎಂಬುದು ಗೊತ್ತಿಲ್ಲ. ಎಲ್ಲೋ ಓದಿರುವಂತೆ ಮನೆಯ ಒಬ್ಬನೇ ಮಗ ಅಥವಾ ಮಗಳು ನದಿಯಲ್ಲಿ ಮುಳುಗಿ ಹೋದರೆಂದು ಅಥವಾ ಮಕ್ಕಳು ನದಿಯಲ್ಲಿ ಈಜುತ್ತಿರಬೇಕಾದರೆ ಕೊಚ್ಚಿಕೊಂಡು ಹೋದ ಘಟನೆಗಳ ಬಗ್ಗೆ ನಾವು ಕೇಳಲ್ಪಟ್ಟಿದ್ದೇವೆ. ಕೆಲವು ದಿನಗಳ ಹಿಂದೆ ನಾನು ಮನಾಲಿಯಲ್ಲಿದ್ದೆ ಆಗ ನಾನು ಕುಲ್ಲುದಿಂದ ಮನಾಲಿಗೆ ಹೋಗುತ್ತಿರಬೇಕಾದರೆ ನದಿಯ ದಂಡೆ ಹತ್ತಿರವಿರುವ ರೆಸ್ಟೋರೆಂಟ್ ಮೇಲೆ ಗಮನ ಹರಿಸಿದಾಗ ಆ ನದಿಯ  ಅರ್ಧ ದೃಶ್ಯ ನಿಜಕ್ಕೂ ನಾವು ಕಡೆಗಣಿಸದಿರುವ ಹಾಗೆ ಇದೆ. ಇದರಿಂದ ಆ ದಾರಿ ಮೂಲಕ ಸಾಗುತ್ತಿರುವ ಪ್ರಯಾಣಿಕರು ಅಲ್ಲೆ ನಿಂತಿದ್ದರು. ಅದರಲ್ಲಿ ಎರಡರಿಂದ ನಾಲ್ಕು ರೆಸ್ಟೋರೆಂಟ್ನ ಉದ್ಯೋಗಿಗಳು ಅಲ್ಲಿಯೇ ನಿಂತು ಪ್ರತಿ ಪ್ರಯಾಣಿಕರಿಗೆ ನದಿಯ ಆಳದ ಮತ್ತು ವೇಗದ ಕುರಿತಾಗಿ ಎಚ್ಚರಿಕೆಯ ಸೂಚನೆ ನೀಡುತ್ತಿದ್ದರು.ಅಲ್ಲಿ ಆಡಳಿತ ವಿಭಾಗವು ಇದನ್ನು ಅಪಾಯಕಾರಿ ವಲಯ ಎಂದು ಘೋಷಿಸಿರುವ ಬೋರ್ಡ್ ಸಹ ಅಲ್ಲಿತ್ತು. 

ಪ್ರತಿ ಸಿಜನ್ ನಲ್ಲಿಯೂ ಸಹಿತ ಕೆಲವು ಅಹಿತಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಇವುಗಳೆಲ್ಲದರ ನಡುವೆ ಸೆಲ್ಫಿ ಗಿಳಿರುವ ಸಮಾಜವು ಇದರ ಬಗ್ಗೆ  ಎಷ್ಟು ತಿಳಿದುಕೊಂಡಿದೆ ಎನ್ನುವುದರ ಬಗ್ಗೆ ಚಿಂತಿಸಬೇಕಾಗಿದೆ.ನಾನು ಇಲ್ಲಿ ಇತರರ ಬಗ್ಗೆ ಮಾತನಾಡುವ ಮೊದಲು ನಮ್ಮ ಕ್ಯಾರಾವ್ಯಾನ್ ನಲ್ಲಿರುವರು ಎಚ್ಚರಿಕೆಯ ಸೂಚನೆಯಿಂದ ಹೆದರಿಲ್ಲ ಕಾರಣ ಅವರು ನದಿಯ ಹರಿವಿನ ಯಾವುದೇ ಹೆದರಿಕೆಯಿಂದ ಅವರು ಅಲ್ಲಿಗೆ ಬಂದವರಲ್ಲ. ಆದ್ದರಿಂದ ನಾವು ಇಲ್ಲಿ  ಬಿರುಗಾಳಿ ಎಬ್ಬಿಸಲಿಕ್ಕೆ ಬಂದಿದ್ದೇವೆ ಎನ್ನುವುದನ್ನು ಅರಿತುಕೊಳ್ಳಬೇಕು ನಮ್ಮ ಹೆದರಿಕೆ ನಂತರ ಗೆಲುವು ಎನ್ನುವದು ಇದ್ದೆ ಇದೇ ಎನ್ನುವ ಮನಸ್ತಿತಿಯೊಂದಿಗೆ ನಾವು  ಪ್ರತಿ ಸಿಜನ್ ನ್ನಿನ ಸಂತಸವನ್ನು ನಾವು ಅರಿತುಕೊಳ್ಳಬೇಕಾಗಿದೆ.  

ಇದಾದ ಮರುದಿನ ಮನಾಲಿಯಲ್ಲಿ ನಮಗೆ ಆತಿಥ್ಯ ನೀಡಿದವನ ಜೊತೆ ಮಾತನಾಡುತ್ತಿದ್ದಾಗ ಅವನು ಕೆಲವು ವರ್ಷದ ಹಿಂದೆ ಯಾತ್ರಿಕನ ಸಹೋದರ ಕೊಚ್ಚಿ ಹೋದ ಬಗ್ಗೆ ವಿವರಿಸಿದನು. ಅಲ್ಲದೆ ಅವನು ಇವರೆಗೂ ಕೂಡ  ಅವನ ದೇಹ ಸಿಗದಿರುವುದರ ಬಗ್ಗೆ ತಿಳಿಸಿದ. ಆಗ ನಮ್ಮ ಜೊತೆಗಿದ್ದ ಯಾತ್ರಿಕರು  ಅದೇಗೆ ಸಂಭವಿಸಿತು ಎಂದು ಉದ್ಘಾರವೇಳೆಯುತ್ತಾ ಈ ಜನರಿಗೆ ನದಿ,ಪರ್ವತಗಳನ್ನು ಕಂಡ ತಕ್ಷಣವೇ ಹುಚ್ಚರಂತಾಗುತ್ತಾರೆ ಎಂದರು. ಆಗ ನನಗೆ ಇನ್ನೊಬ್ಬರ ಮಾತು ಬದಲಾದಂತೆ ನಮ್ಮ ಮನಸ್ಸು ಕೂಡ ಬದಲಾಗಿ ಹೇಗೆ ಬೇರೆ ಕಡೆ ಎಳೆಯುತ್ತದೆ ಎಂದು ಅನಿಸಿತು. 

ನಾವು ಈ ರೀತಿಯ ಸನ್ನಿವೇಶದಲ್ಲಿ ಜೀವನವು ನಮಗೆ ಹಲವು ಅವಕಾಶಗಳನ್ನು ನೀಡುತ್ತದೆ ಎನ್ನುವುದನ್ನು ನಾವು ಮರೆತಿದ್ದೇವೆ,ಆದರೆ ಇದು ಸಾವಿಗೆ ಮಾತ್ರ ಅನ್ವಯಿಸುವುದಿಲ್ಲ ಅಂತಹ ಸನ್ನಿವೇಶದಲ್ಲಿ ಪ್ರಕೃತಿಯ ನಿಯಮದೊಂಡಿದೆ ನಾವು ಸಾಗಬೇಕಾಗುತ್ತದೆ. ಯುವಕನಾಗಿರುವುದೆಂದರೆ ಪ್ರಕೃತಿ ನಿಯಮಗಳನ್ನು ಗಾಳಿಗೆ ತೂರುವುದಲ್ಲ. ಬದಲಾಗಿ ಜೀವನಕ್ಕೆ ಸಂಭಂಧಿತ ಹಲವು ಸಾಮಾನ್ಯ ವಿಚಾರಗಳನ್ನು ಅರ್ಥೈಸಿಕೊಳ್ಳವುದು. ಇಲ್ಲದೆ ಹೋದರೆ ನಮ್ಮ ಜೀವನದ ಬಾಗಿಲು ಮುಚ್ಚಿಹೋಗುತ್ತದೆ. ಆದರಿಂದ ಇದನ್ನು ನೀವು ಕೆಲವೊಮ್ಮೆ ಚಿಕ್ಕ ಪುಟ್ಟ ಕ್ಷಣಗಳಲ್ಲಿಯೂ ಕಾಣುವಂತಾಗಬೇಕು 

ಇದು ಕೇವಲ ನದಿ ಅಥವಾ ಪರ್ವತದ ಕುರಿತ ಸಂಗತಿಯಲ್ಲ. ಬದಲಾಗಿ ಇದು ಪ್ರತಿ ಸ್ಥಳದಲ್ಲಿಯೋ ಕೂಡ ಸಂತಸವನ್ನು ಹುಡುಕುವ ಪ್ರಕ್ರಿಯೆ. ಒಂದು ವೇಳೆ ನೀವು ಜೀವನದ ಸಾಮಾನ್ಯ ನಿಯಮಗಳನ್ನು ಪಾಲನೆ ಮಾಡಿದ್ದೆ ಆದಲ್ಲಿ ನೀವು ಜೀವನವನ್ನು ಅಪಘಾತದಿಂದ ಪಾರು ಮಾಡಬಹುದು. ಅಷ್ಟಕ್ಕೂ ಈ ಅಪಘಾತದ ಕೇವಲ ಒಬ್ಬರಿಗೆ ಮಾತ್ರ ನೋವನ್ನುಂಟು ಮಾಡುವುದಿಲ್ಲ ಬದಲಾಗಿ ಪೂರ್ಣ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಇನ್ನು ರಸ್ತೆಯ  ಅಪಘಾತಗಳು ಕೇವಲ ಒಂದು ನಿಮಿಷದ ಸಂತೋಷಕ್ಕಾಗಿ ಸಂಭವಿಸುತ್ತವೆ. ಪ್ರಯಾಣದಲ್ಲಿರುವ ಬಹುತೇಕರು ಕೇವಲ ಎರಡು ನಿಮಿಷದ ಆನಂದಕ್ಕಾಗಿ ತಮ್ಮನ್ನು ತಾವೇ ನಿರ್ಲಕ್ಷಿಸಿ ನಡೆಯುತ್ತಿರುತ್ತಾರೆ. ಇನ್ನು  ನಿಮ್ಮನ್ನು ನಂಬುವುದೆಂದರೆ ನೀವು ಯಾವಾಗಲು ಅಪಾಯದಲ್ಲಿರುವುದು ಎನ್ನುವ  ಅರ್ಥವಲ್ಲ. ಆದರೆ ಕೆಲವೊಮ್ಮೆ ಈ ಅಪಾಯದಿಂದ  ಜೀವನದಲ್ಲಿ ಬಿರುಗಾಳಿ ಬರುವ ಸಾಧ್ಯತೆ ನಿಚ್ಚಳವಾಗಿರುತ್ತದೆ ಎನ್ನುವುದನ್ನು ಅರಿಯಬೇಕಾಗಿರುತ್ತದೆ.

Trending News