ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಿದ ಪಾಕ್ ಗೆ ಖಡಕ್ ಉತ್ತರ ನೀಡಿದ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಾಕಿಸ್ತಾನ ಸಚಿವ ಫವಾದ್ ಹುಸೇನ್ ಭಾರತದ ಆಂತರಿಕ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಟ್ವೀಟ್ ಮೂಲಕ ಖಡಕ್  ಉತ್ತರ ನೀಡಿದ್ದಾರೆ.

Last Updated : Jan 31, 2020, 07:08 PM IST
ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಿದ ಪಾಕ್ ಗೆ ಖಡಕ್ ಉತ್ತರ ನೀಡಿದ ಕೇಜ್ರಿವಾಲ್ title=

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಾಕಿಸ್ತಾನ ಸಚಿವ ಫವಾದ್ ಹುಸೇನ್ ಭಾರತದ ಆಂತರಿಕ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಟ್ವೀಟ್ ಮೂಲಕ ಖಡಕ್  ಉತ್ತರ ನೀಡಿದ್ದಾರೆ.

ಪ್ರಧಾನಿ ಮೋದಿಯವರ ಅತ್ಯಂತ ಕಟು ವಿಮರ್ಶಕರಲ್ಲಿ ಒಬ್ಬರಾದ ಕೇಜ್ರಿವಾಲ್ ನರೇಂದ್ರ ಮೋದಿ ತಮ್ಮ ಪ್ರಧಾನ ಮಂತ್ರಿಯೂ ಆಗಿದ್ದಾರೆ ಮತ್ತು ಪಾಕಿಸ್ತಾನವು ತನ್ನ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಭಾರತ ಸಹಿಸುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

"ನರೇಂದ್ರ ಮೋದಿ ಅವರು ಭಾರತದ ಪ್ರಧಾನಿ ಮತ್ತು  ಅವರು ನನ್ನ ಪ್ರಧಾನಿ. ದೆಹಲಿ ಚುನಾವಣೆ ಭಾರತದ ಆಂತರಿಕ ವಿಷಯವಾಗಿದೆ, ಮತ್ತು ಭಯೋತ್ಪಾದನೆ ಬೆಂಬಲಿಗರ ಹಸ್ತಕ್ಷೇಪವನ್ನು ನಾವು ಸಹಿಸುವುದಿಲ್ಲ" ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. "ಪಾಕಿಸ್ತಾನ ತಮಗೆ ಬಯಸಿದಷ್ಟು ಪ್ರಯತ್ನಿಸಬಹುದು, ಆದರೆ ಅದು ನಮ್ಮ ದೇಶದ ಏಕತೆಗೆ ದಾಳಿ ಮಾಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ಸಶಸ್ತ್ರ ಸಂಘರ್ಷದಲ್ಲಿ ಪಾಕಿಸ್ತಾನವನ್ನು ಸೋಲಿಸಲು ಭಾರತೀಯ ಸಶಸ್ತ್ರ ಪಡೆಗಳು 10 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಈ ವಾರದ ಆರಂಭದಲ್ಲಿ ಮಾಡಿದ ಹೇಳಿಕೆಗೆ ಫವಾದ್ ಹುಸೇನ್ ಪ್ರಧಾನಿ ಮೋದಿಯವರ ಮೇಲೆ ವಾಗ್ದಾಳಿ ನಡೆಸಿದ್ದರು."ಪಾಕಿಸ್ತಾನ ಈಗಾಗಲೇ ಮೂರು ಯುದ್ಧಗಳನ್ನು ಸೋತಿದೆ. ಪಾಕಿಸ್ತಾನವು ನೆಲಕ್ಕಚ್ಚುವಂತೆ ಮಾಡಲು ನಮ್ಮ ಸಶಸ್ತ್ರ ಪಡೆಗಳು 7-10 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದ್ದರು. 2016 ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಮತ್ತು ಕಳೆದ ವರ್ಷ ಬಾಲಕೋಟ್‌ನಲ್ಲಿ ನಡೆದ ಭಯೋತ್ಪಾದಕ ಶಿಬಿರದಲ್ಲಿ ನಡೆದ ವಾಯುದಾಳಿ ಇದಕ್ಕೆ ಸಾಕ್ಷಿ ಎಂದು ಪಿಎಂ ಮೋದಿ ಹೇಳಿದ್ದಾರೆ.

Trending News