ವಾಯುಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರದ ಮಹತ್ವದ ನಿರ್ಧಾರ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರದಂದು ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ವಾಯು ಗುಣಮಟ್ಟದ ಪರಿಸ್ಥಿತಿಯ ಕುರಿತು ತುರ್ತು ಸಭೆ ಕರೆದಿದ್ದಾರೆ.

Written by - Zee Kannada News Desk | Last Updated : Nov 13, 2021, 07:42 PM IST
  • ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರದಂದು ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ವಾಯು ಗುಣಮಟ್ಟದ ಪರಿಸ್ಥಿತಿಯ ಕುರಿತು ತುರ್ತು ಸಭೆ ಕರೆದಿದ್ದಾರೆ.
ವಾಯುಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರದ ಮಹತ್ವದ ನಿರ್ಧಾರ  title=
file photo

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರದಂದು ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ವಾಯು ಗುಣಮಟ್ಟದ ಪರಿಸ್ಥಿತಿಯ ಕುರಿತು ತುರ್ತು ಸಭೆ ಕರೆದಿದ್ದಾರೆ.

ಇದೇ ವೇಳೆ'ನಿರ್ಮಾಣ ಚಟುವಟಿಕೆಗಳನ್ನು ಅನುಮತಿಸಲಾಗುವುದಿಲ್ಲ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಸಾಧ್ಯವಾದಷ್ಟು ಮನೆಯಿಂದ ಕೆಲಸದ ಮೇಲೆ ಕಾರ್ಯನಿರ್ವಹಿಸುತ್ತವೆ ಎಂದು ದೆಹಲಿ ಸರ್ಕಾರ ಹೇಳಿದೆ.

ಇದನ್ನೂ ಓದಿ: Gautam Gambhir: ರೋಹಿತ್ ಶರ್ಮಾ-ರಾಹುಲ್ ದ್ರಾವಿಡ್ ಭಾರತಕ್ಕೆ ಐಸಿಸಿ ಪ್ರಶಸ್ತಿ ಗೆಲ್ಲುತ್ತಾರೆ- ಗೌತಮ್ ಗಂಭೀರ್

'ಸರ್ಕಾರಿ ಕಚೇರಿಗಳು ಒಂದು ವಾರದವರೆಗೆ ಶೇ ರ 100% ಸಾಮರ್ಥ್ಯದಲ್ಲಿ ಮನೆಯಿಂದಲೇ (WFH) ಕಾರ್ಯನಿರ್ವಹಿಸುತ್ತವೆ.ಖಾಸಗಿ ಕಚೇರಿಗಳಿಗೆ ಸಾಧ್ಯವಾದಷ್ಟು ಡಬ್ಲ್ಯುಎಫ್‌ಹೆಚ್ ಆಯ್ಕೆಗೆ ಹೋಗಲು ಸಲಹೆಯನ್ನು ನೀಡಲಾಗುವುದು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಚಾಲ್ತಿಯಲ್ಲಿರುವ ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರ (Delhi Government ) ವು ಈ ನಿರ್ಧಾರಗಳನ್ನು ತೆಗೆದುಕೊಂಡಿದೆ.'ನವೆಂಬರ್ 14 ಮತ್ತು 17ರ ನಡುವೆ ಯಾವುದೇ ಗಾಳಿಯ ಚಲನೆಯನ್ನು ಊಹಿಸಲಾಗಿಲ್ಲ, ಗಾಳಿಯ ಗುಣಮಟ್ಟವು ಹದಗೆಡುವ ನಿರೀಕ್ಷೆಯಿದೆ' ಎಂದು ಕೇಜ್ರಿವಾಲ್ ಹೇಳಿದರು.

ಇದನ್ನೂ ಓದಿ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರನ ವಿರುದ್ಧ ಇಡಿಯಿಂದ ಸಮನ್ಸ್ ಜಾರಿ

ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿನ ವಾಯುಮಾಲಿನ್ಯ ಪರಿಸ್ಥಿತಿಯನ್ನು ತುರ್ತು ಪರಿಸ್ಥಿತಿ ಎಂದು ಸುಪ್ರೀಂ ಕೋರ್ಟ್ ಕರೆದ ನಂತರ ಮತ್ತು ರಾಜಧಾನಿಯಲ್ಲಿ ಲಾಕ್‌ಡೌನ್ ಮಾಡಲು ಸೂಚಿಸಿದ ನಂತರ ದೆಹಲಿ ಸರ್ಕಾರಗಳ ಕ್ರಿಯಾ ಯೋಜನೆ ಬಂದಿದೆ.

ದೆಹಲಿಯ ಮುಖ್ಯ ಕಾರ್ಯದರ್ಶಿಯೊಂದಿಗೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮತ್ತು ಪರಿಸರ ಸಚಿವ ಗೋಪಾಲ್ ರೈ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಮಾಲಿನ್ಯ ನಿಯಂತ್ರಣ ಕ್ರಮಗಳು ಮತ್ತು ಸಲಹೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News