ಆಸಿಯಾನ್ ಶೃಂಗಸಭೆಯ ಪ್ರಯುಕ್ತ ದೆಹಲಿ ರಸ್ತೆಗಳ ಸೌಂದರ್ಯಿಕರಣಕ್ಕೆ ಆದೇಶ

    

Last Updated : Dec 25, 2017, 07:12 PM IST
ಆಸಿಯಾನ್ ಶೃಂಗಸಭೆಯ ಪ್ರಯುಕ್ತ ದೆಹಲಿ ರಸ್ತೆಗಳ ಸೌಂದರ್ಯಿಕರಣಕ್ಕೆ ಆದೇಶ  title=

ನವದೆಹಲಿ: ಮುಂದಿನ ತಿಂಗಳು ಜನವರಿ 19 ಮತ್ತು 30 ರಂದು  ಏಷಿಯಾನ್ ಶೃಂಗಸಭೆಗೆ ದೆಹಲಿ ಆತಿಥ್ಯ ವಹಿಸಿಕೊಂಡಿರುವುದರಿಂದ ಎಎಪಿ ನೇತೃತ್ವದ  ಸರಕಾರವು ನಗರದ ಎಲ್ಲ ರಸ್ತೆಗಳ ಸೌಂದರ್ಯಿಕರಣ ಮತ್ತು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಆದೇಶ ನೀಡಿದೆ.

ಪಿಡಬ್ಲ್ಯೂಡಿ ಇಲಾಖೆಯು ರಸ್ತೆ , ಕಾಲು ದಾರಿಗಳು, ಹಾಗೂ ಚರಂಡಿಗಳ ದುರಸ್ತಿ ಕಾರ್ಯಗಳನ್ನು ಯೋಜನೆ ರೂಪಿಸಿದೆ. ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಪ್ರತಿ ರಸ್ತೆಯ ಪ್ರತಿಫಲಿತ ಡಿಲೈನೈಟರ್ಗಳು, ಬೊಲ್ಲರ್ಡ್ಸ್ ಗಳನ್ನು ಸುರಕ್ಷತಾ ದೃಷ್ಟಿಯಿಂದ ರಸ್ತೆಯುದ್ದಕ್ಕೂ ಅಳವಡಿಸಲಾಗುತ್ತದೆ ಎಂದು ಪಿಡಬ್ಲ್ಯೂಡಿ ಇಲಾಖೆ ಹೇಳಿದೆ. ಎಲ್ಲಾ ರಸ್ತೆಗಳು ಮತ್ತು ಬಸ್ ಹೆದ್ದಾರಿಗಳನ್ನು  ಭಾರತೀಯ ರೋಡ್ಸ್ ಕಾಂಗ್ರೆಸ್ (ಐಆರ್ಸಿ) ಮಾನದಂಡಗಳಿಗೆ ಅನುಗುಣವಾಗಿ ಅಳವಡಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸುಮಾರು 1,260 ಕಿ.ಮೀ ಉದ್ದದ ದೆಹಲಿಯ  ರಸ್ತೆಗಳು ಪಿಡಬ್ಲ್ಯೂಡಿ ಅಧೀನಕ್ಕೆ ಒಳಪಡುತ್ತವೆ,

ಕಳೆದ ವಾರದ ಸಭೆಯಲ್ಲಿ 15 ದಿನಗಳವರೆಗೆ  ಕಲ್ಲಿದ್ದಲು ಆಧಾರಿತ ಕೈಗಾರಿಕೆಗಳನ್ನು ಮುಚ್ಚಲು ಆದೇಶಿಸಲಾಗಿದೆ.ಆ ಮೂಲಕ ಸಮ್ಮೇಳನದ ಸಂದರ್ಭದಲ್ಲಿ ಯಾವುದೇ ರೀತಿಯ ವಾಯು ಮಾಲಿನ್ಯ ಸಮ್ಮೇಳನಕ್ಕೆ ಅಡ್ಡಿಯುಂಟಾಗದಂತೆ ನೋಡಿಕೊಳ್ಳಲು ಮಾಲಿನ್ಯ ನಿರ್ವಹಣಾ ಮಂಡಳಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. 

Trending News