ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾಹಿತಿಯ ಪ್ರಕಾರ, ಬೈಜಾಲ್ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮಾಜಿ ಐಎಎಸ್ ಅಧಿಕಾರಿಯಾಗಿದ್ದ ಬೈಜಾಲ್, ನಜೀಬ್ ಜಂಗ್ ಅವರ ಸ್ಥಾನಕ್ಕೆ 31 ಡಿಸೆಂಬರ್ 2016 ರಂದು ರಾಷ್ಟ್ರ ರಾಜಧಾನಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದರು.
ದೆಹಲಿಯ ಮುಂಡ್ಕಾದಲ್ಲಿ ಇತ್ತೀಚಿನ ಅಗ್ನಿ ದುರಂತದ ನಂತರ, ಈ ವಿಷಯದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ನಿರ್ಧಾರವನ್ನು ಅನುಮೋದಿಸಿದರು. ಆರು ವಾರಗಳಲ್ಲಿ ಈ ತನಿಖೆ ಪೂರ್ಣಗೊಳ್ಳಲಿದೆ.
ಇದನ್ನೂ ಓದಿ : Shocking Viral Video: ಎದೆ ಝಲ್ಲೆನಿಸುವ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
ವಾಜಪೇಯಿ ಸರಕಾರದಲ್ಲಿ ಮಹತ್ವದ ಹುದ್ದೆಯಲ್ಲಿದ್ದ ಬೈಜಾಲ್
ದೆಹಲಿಯ 21 ನೇ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಅಧಿಕಾರಾವಧಿಯು ಡಿಸೆಂಬರ್ 2021 ರಲ್ಲಿ ಪೂರ್ಣಗೊಂಡಿತು, ಆದರೆ ಅವರು 5 ವರ್ಷ ಮತ್ತು 4 ತಿಂಗಳುಗಳ ಕಾಲ ತಮ್ಮ ಹುದ್ದೆಯಲ್ಲಿ ಇದ್ದರು. ಅನಿಲ್ ಬೈಜಾಲ್ 1969 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ನಜೀಬ್ ಜಂಗ್ ಅವರ ಅಧಿಕಾರಾವಧಿಯಲ್ಲಿ ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ಸುದೀರ್ಘ ಹಕ್ಕುಗಳ ಹೋರಾಟ ನಡೆಯಿತು. ನಂತರ, ಈ ವಿಷಯವು ನ್ಯಾಯಾಲಯಕ್ಕೆ ತಲುಪಿತು, ನಂತರ ನ್ಯಾಯಾಲಯವು ದೆಹಲಿಯ ಆಡಳಿತ ಮುಖ್ಯಸ್ಥ ಲೆಫ್ಟಿನೆಂಟ್ ಗವರ್ನರ್ ಎಂದು ಸ್ಪಷ್ಟಪಡಿಸಿತು. ಹೀಗಾಗಿ ರಾಜಧಾನಿಯಲ್ಲಿ ಈ ಪೋಸ್ಟ್ ಬಹಳ ಮುಖ್ಯವಾಗುತ್ತದೆ.
ಇದನ್ನೂ ಓದಿ : Gujarat Tragedy: ಉಪ್ಪು ಪ್ಯಾಕೇಜಿಂಗ್ ಕಾರ್ಖಾನೆಯ ಗೋಡೆ ಕುಸಿತ: 12 ಮಂದಿ ದುರ್ಮರಣ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.