ಚಾಕೊಲೇಟ್ ನೀಡುವ ನೆಪ ಹೇಳಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಆರೋಪಿ ಬಂಧನ

ದೆಹಲಿಯ ದ್ವಾರಕಾ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ 24 ವರ್ಷದ ಆರೋಪಿ ಯುಪಿಯ ಬುಲಂದ್‌ಶಹರ್ ನಿವಾಸಿ ಎಂದು ತಿಳಿದುಬಂದಿದೆ.  

Last Updated : Jul 5, 2019, 10:43 AM IST
ಚಾಕೊಲೇಟ್ ನೀಡುವ ನೆಪ ಹೇಳಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಆರೋಪಿ ಬಂಧನ title=

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಮುಗ್ಧ ಹುಡುಗಿಯರೊಂದಿಗೆ ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚುತ್ತಿವೆ. ದೇಶಾದ್ಯಂತ ಈ ಬಗ್ಗೆ ಕಟ್ಟೆಚ್ಚರ ವಹಿಸಲಾಗುತ್ತಿದೆಯಾದರೂ ಮುಗ್ಧ ಬಾಲಕಿಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳಗಳಂತ ಕುಕೃತ್ಯಗಳು ಇನ್ನೂ ನಡೆಯುತ್ತಲೇ ಇವೆ. ಇಂತಹದ್ದೆ ಒಂದು ಮನಕಲಕುವ ಘಟನೆ ದೆಹಲಿಯ ದ್ವಾರಕಾ ಪ್ರದೇಶದಲ್ಲೂ ನಡೆದಿದೆ. ಯುವಕನೊಬ್ಬ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಸ್ಥಳದಿಂದ ಪರಾರಿಯಾಗಿದ್ದನು. ಬಾಲಕಿಯನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. 

ಸ್ಥಳೀಯ ನಿವಾಸಿಗಳು ಜುಲೈ 2 ರ ಮಂಗಳವಾರ ಮಧ್ಯಾಹ್ನ 1: 30 ಕ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪೊದೆಯಲ್ಲಿ ಮಗು ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ಆಧರಿಸಿ ಘಟನಾ ಸ್ಥಳಕ್ಕೆ ತಲುಪಿದ ಪೊಲೀಸರು ಮಗುವಿನ ಸ್ಥಿತಿಯನ್ನು ಕಂಡು ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಅವರ ಕುಟುಂಬವನ್ನು ಗುರುತಿಸಲು ತಂಡವನ್ನು ರಚಿಸಿದರು ಎಂದು ದೆಹಲಿಯ ದ್ವಾರಕಾ ಜಿಲ್ಲೆಯ ಡಿಸಿಪಿ ಆಂಟೊನೊ ಎಲ್ಫ್ಸಾನೊ ತಿಳಿಸಿದ್ದಾರೆ.

ಬಾಲಕಿಯ ಛಾಯಾಚಿತ್ರದ ಆಧಾರದ ಮೇಲೆ ಪೊಲೀಸರು ಬಾಲಕಿಯ ಕುಟುಂಬವನ್ನು ಹುಡುಕಿದರು. ಮಗುವಿನ ಕುಟುಂಬದವರು ಮಕ್ಕಳು ಕೂಲಿ ಕೆಲಸ ಮಾಡುತ್ತಾರೆ ಎಂದು ತಿಳಿದು ಬಂದಿದ್ದು, ಬಾಲಕಿ ಮನೆಯಿಂದ ಹೊರಗೆ ಆಟವಾದುತ್ತಿದ್ದಳು, ಕೆಲ ಸಮಯದ ನಂತ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಳು ಎನ್ನಲಾಗಿದೆ. 

ಬಾಲಕಿಯ ಈ ಸ್ಥಿತಿಗೆ ಕಾರಣರಾದ ಆರೋಪಿಗಳನ್ನು ಸೆರೆಹಿಡಿಯುವ ಸಲುವಾಗಿ ಮನೆಯ ಸಮೀಪವಿರುವ ಪ್ರದೇಶದಲ್ಲಿ ಪತ್ತೆಯಾದ ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆ ತನಿಖೆ ನಡೆಸಲಾಯಿತು. ಅಲ್ಲಿ ಒಬ್ಬ ಯುವಕ ಹುಡುಗಿಯ ಕೈಯನ್ನು ಹಿಡಿದು ಎಳೆದೊಯ್ಯುತ್ತಿದ್ದ ದೃಶ್ಯ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಪೊಲೀಸರು ಆರೋಪಿ ಮೊಹಮ್ಮದ್ ನ್ಯಾನಿ (24) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಉತ್ತರ ಪ್ರದೇಶದ ಬುಲಂದ್‌ಶಹರ್ ನಿವಾಸಿ ಎಂದು ಗುರುತಿಸಲಾಗಿದ್ದು, ಬಾಲಕಿಗೆ ಚಾಕೊಲೇಟ್ ನೀಡುವ ನೆಪ ಹೇಳಿ ಆರೋಪಿಯು ಆಕೆಯನ್ನು ಕರೆದೊಯ್ದು ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Trending News