ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಪೊಲೀಸ್ ನ ವಿಶೇಷ ವಿಂಗ್ ಗೆ ಭಾರಿ ಯಶಸ್ಸು ಲಭಿಸಿದೆ. ಖಚಿತ ಮಾಹಿತಿ ಆದಾರದ ಮೇಲೆ ದಾಳಿ ನಡೆಸಿರುವ ಪೊಲೀಸರು ಕುಖ್ಯಾತ ಉಗ್ರ ಸಂಘಟನೆ ISISನ ಮೂವರು ಉಗ್ರರನ್ನು ಬಂಧಿಸುವಲ್ಲಿ ಯಶಸಿವಿಯಾಗಿದ್ದಾರೆ. ದೆಹಲಿ ಹಾಗೂ ಪಶ್ಚಿಮ ಉತ್ತರ ಪ್ರದೇಶದಲ್ಲಿ ದೊಡ್ಡ ದಾಳಿ ನಡೆಸಲು ಈ ಮೂವರು ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ಮೂವರು ISISನ ಸೂಚನೆಗೆ ಕಾಯುತ್ತಿದ್ದರು ಎನ್ನಲಾಗಿದೆ.
ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ ದೆಹಲಿಯ ವಜೀರಾಬಾದ್ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಎನ್ಕೌಂಟರ್ ಬಳಿಕ ಈ ಮೂವರನ್ನು ಬಂಧಿಸಲಾಗಿದೆ. ಈ ಮೂವರು ಉಗ್ರರ ಬಳಿಯಿಂದ ಪೊಲೀಸರು ಶಸ್ತ್ರಾಸ್ತ್ರಗಳನ್ನು ಸಹ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಸದ್ಯ ಪೊಲೀಸರು ಈ ಮೂವರನ್ನು ವಿಚಾರಣೆಗೆ ಒಳಪಡಿಸಿದ್ದು, ಅವರು ನೀಡಿರುವ ಮಾಹಿತಿ ಆಧರಿಸಿ ಪೊಲೀಸರು ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ದೆಹಲಿ ಪೊಲೀಸರು ಈ ಉಗ್ರರು ನೇಪಾಲ್ ಮಾರ್ಗವಾಗಿ ದೆಹಲಿಯನ್ನು ಪ್ರವೇಶಿಸಿದ್ದಾರೆ ಎಂದಿದ್ದಾರೆ. ಈ ಮೂವರು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಆತಂಕ ಸೃಷ್ಟಿಸಲು ದೊಡ್ಡ ಘಟನೆಯೊಂದನ್ನು ನಡೆಸಲು ಸಂಚು ರೂಪಿಸುತ್ತಿದ್ದು, ಇವರ ಬಳಿಯಿಂದ ಶಸ್ತ್ರಾಸ್ತ್ರ ಕೂಡ ವಶಕ್ಕೆ ಪಡೆಯಲಾಗಿದೆ. ಈ ಮೂವರು ISISನ ಸೂಚನೆಗೆ ಕಾಯುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂವರು ಉಗ್ರರು ನೀಡಿರುವ ಮಾಹಿತಿಯನ್ನು ಆಧರಿಸಿ ಪೊಲೀಸರು ಎಲ್ಲ ಸಂದಿಗ್ಧ ಸ್ಥಳಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿ ಪೋಲೀಸರ ವಿಶೇಷ ಸೆಲ್ ಮೂಲಗಳ ಮಾಹಿತಿ ಪ್ರಕಾರ "ಗುರುವಾರ ಈ ಮೂವರು ಉಗ್ರರನ್ನು ಈಶಾನ್ಯ ದೆಹಲಿಯ ವಜೀರಾಬಾದ್ ಪ್ರಾಂತ್ಯದಲ್ಲಿ ನಡೆಸಲಾದ ಒಂದು ಎನ್ಕೌಂಟರ್ ಬಳಿಕ ಬಂದಿಸಲಾಗಿದ್ದು, ಈ ಮೂವರು ಉಗ್ರರು ಐಸಿಸ್ ನಿಂದ ಪ್ರಭಾವಿತರಾಗಿದ್ದಾರೆ" ಎನ್ನಲಾಗಿದೆ. ನವೆಂಬರ್ ೨೫, ೨೦೧೦ ರಲ್ಲಿಯೂ ಕೂಡ ದೆಹಲಿ ಪೊಲೀಸರು ಐಸಿಸ್ ನಿಂದ ಪ್ರಭಾವಿತರಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಅಷ್ಟೇ ಅಲ್ಲ ಅವರ ಬಳಿಯಿಂದ ಅಪಾರ ಪ್ರಮಾಣದ ಸಿಡಿಮದ್ದುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.