ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ: ಫುಲ್ ಆಕ್ಟೀವ್ ಆದ ಬಿಬಿಎಂಪಿ ಅಧಿಕಾರಿಗಳು

ಬಿಬಿಎಂಪಿ ಘನ ವಿಭಾಗದ ವಿಶೇಷ ಆಯುಕ್ತರಿಂದ ಆದೇಶ ಹೊರಡಿಸಲಾಗಿದ್ದು, ಕಾರ್ಯಚರಣೆ ವೇಳೆ ಸಿಬ್ಬಂದಿಗೆ ಬೆದರಿಕೆ ಮತ್ತು ಕರ್ತವ್ಯಕ್ಕೆ ಅಡ್ಡಿ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಡಕ್‌ ವಾರ್ನಿಂಗ್‌ ನೀಡಲಾಗಿದೆ.  

Written by - Zee Kannada News Desk | Edited by - Bhavishya Shetty | Last Updated : Jul 24, 2022, 12:10 PM IST
  • ಪ್ಲಾಸ್ಟಿಕ್ ವಿರುದ್ಧ ಕಾರ್ಯಾಚರಣೆ ವೇಳೆ ಸಿಬ್ಬಂದಿಗಳಿಗೆ ತೊಂದರೆ ಕೊಡುವಂತಿಲ್ಲ
  • ಬಿಬಿಎಂಪಿ ಘನ ವಿಭಾಗದ ವಿಶೇಷ ಆಯುಕ್ತರಿಂದ ಆದೇಶ
  • ಅಡ್ಡಿ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ
ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ: ಫುಲ್ ಆಕ್ಟೀವ್ ಆದ ಬಿಬಿಎಂಪಿ ಅಧಿಕಾರಿಗಳು title=
Ban on plastic

ಬೆಂಗಳೂರು: ಪ್ಲಾಸ್ಟಿಕ್ ಬಳಕೆ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ಫುಲ್ ಆಕ್ಟೀವ್ ಆಗಿದ್ದು, ಬಿಬಿಎಂಪಿ ಘನ ವಿಭಾಗದ ವಿಶೇಷ ಆಯುಕ್ತರಿಂದ ಆದೇಶ ಹೊರಡಿಸಲಾಗಿದೆ. ಪ್ಲಾಸ್ಟಿಕ್ ವಿರುದ್ಧ ಕಾರ್ಯಾಚರಣೆ ವೇಳೆ ಸಿಬ್ಬಂದಿಗಳಿಗೆ ತೊಂದರೆ ಕೊಡುವಂತಿಲ್ಲ. ಅಧಿಕಾರಿ ಅಥವಾ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ. 

ಬಿಬಿಎಂಪಿ ಘನ ವಿಭಾಗದ ವಿಶೇಷ ಆಯುಕ್ತರಿಂದ ಆದೇಶ ಹೊರಡಿಸಲಾಗಿದ್ದು, ಕಾರ್ಯಚರಣೆ ವೇಳೆ ಸಿಬ್ಬಂದಿಗೆ ಬೆದರಿಕೆ ಮತ್ತು ಕರ್ತವ್ಯಕ್ಕೆ ಅಡ್ಡಿ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಡಕ್‌ ವಾರ್ನಿಂಗ್‌ ನೀಡಲಾಗಿದೆ.  

ಇದನ್ನೂ ಓದಿ: Viral Video: 5ನೇ ಮಹಡಿಯಿಂದ ಬಿದ್ದ 2 ವರ್ಷದ ಬಾಲಕಿಯನ್ನು ಕ್ಯಾಚ್ ಹಿಡಿದ ವ್ಯಕ್ತಿ!

ಆದೇಶ ಏನು?
-ಏಕ ಬಳಕೆ, ಪ್ಲಾಸ್ಟಿಕ್ ಮತ್ತು ಅವುಗಳ ಉತ್ಪನ್ನಗಳ ಉಪಯೋಗ ನಿಲ್ಲಿಸಲು ಕ್ರ‌ಮ
-ನಗರ ವ್ಯಾಪ್ತಿಯಲ್ಲಿ ಎಲ್ಲೇ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಇದ್ದರೆ ಕೂಡಲೇ ಮುಟ್ಟುಗೋಲು
-ಪಾಲಿಕೆ ಕ್ರಮ ವಹಿಸುವ ವೇಳೆ ಅಧಿಕಾರಿಗಳಿಗೆ ಬೆದರಿಕೆ ಹಾಕುವಂತಿಲ್ಲ
-ಇನ್ನಾವುದೇ ರೀತಿಯಲ್ಲಿ ತಡೆಯೊಡ್ಡಿದರೆ ಕ್ರಿಮಿನಲ್ ಅಪರಾಧ ಪ್ರಕರಣ ದಾಖಲು
- ಸಾರ್ವಜನಿಕರು ಯಾವುದೇ ಪ್ರಶ್ನೆ, ದೂರುಗಳಿದ್ದಲ್ಲಿ ಪಾಲಿಕೆ‌ ಕಚೇರಿಕೆ ಸಂಪರ್ಕಿಸಬಹುದು
-ಕರ್ತವ್ಯಗಳನ್ನು ನಿಯಮಾನುಸಾರ ನಿರ್ವಹಿಸಲು ಯಾವುದೇ ಅಡ್ಡಿ ಪಡಿಸದಂತೆ ಆದೇಶ

ಇದನ್ನೂ ಓದಿ: ಈ ದಿನದಂದು ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾದ್ರೆ ಮಂಗಳಕರ! ಇದಕ್ಕಿದೆ ಪ್ರಮುಖ ಕಾರಣ

ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಹರೀಶ್‌ ಕುಮಾರ್‌ ಈ ಆದೇಶಗಳನ್ನು ಹೊರಡಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News