ದೆಹಲಿ ಮೆಟ್ರೋದಲ್ಲಿ ರೆಡ್ ಅಲರ್ಟ್; ಭದ್ರತಾ ಸಿಬ್ಬಂದಿಗೆ ಸಹಕರಿಸುವಂತೆ ಪ್ರಯಾಣಿಕರಲ್ಲಿ ಡಿಎಂಆರ್‌ಸಿ ಮನವಿ

ಭದ್ರತಾ ಏಜೆನ್ಸಿಗಳ ಸಲಹೆ ಮೇರೆಗೆ ದೆಹಲಿ ಮೆಟ್ರೋದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

Last Updated : Aug 5, 2019, 01:56 PM IST
ದೆಹಲಿ ಮೆಟ್ರೋದಲ್ಲಿ ರೆಡ್ ಅಲರ್ಟ್; ಭದ್ರತಾ ಸಿಬ್ಬಂದಿಗೆ ಸಹಕರಿಸುವಂತೆ ಪ್ರಯಾಣಿಕರಲ್ಲಿ ಡಿಎಂಆರ್‌ಸಿ ಮನವಿ title=
File Image

ನವದೆಹಲಿ: ದೆಹಲಿ ಮೆಟ್ರೋ ರೈಲು ನಿಗಮ(DMRC) ಸೋಮವಾರ ರೆಡ್ ಅಲರ್ಟ್ ಘೋಷಿಸಿದ್ದು, ತಪಾಸಣೆಗಾಗಿ ಭದ್ರತಾ ಸಿಬ್ಬಂದಿಗಳ ಜೊತೆ ಸಹಕರಿಸುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದೆ.

ಈ ಬಗ್ಗೆ ಇಂದು ಬೆಳಿಗ್ಗೆ ಟ್ವೀಟ್ ಮಾಡಿರುವ ಡಿಎಂಆರ್‌ಸಿ, ಭದ್ರತಾ ಏಜೆನ್ಸಿಗಳ ಸಲಹೆ ಮೇರೆಗೆ ದೆಹಲಿ ಮೆಟ್ರೋದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ತಿಳಿಸಿದೆ.

"ಭದ್ರತಾ ಎಚ್ಚರಿಕೆ: ಭದ್ರತಾ ಸಂಸ್ಥೆಗಳ ಸಲಹೆ ಮೇರೆಗೆ ಡಿಎಂಆರ್‌ಸಿ ತನ್ನ ಸಂಪೂರ್ಣ ನೆಟ್‌ವರ್ಕ್‌ನಲ್ಲಿ ರೆಡ್ ಅಲರ್ಟ್ ಅನ್ನು ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಪರಿಶೀಲನೆಗೆ ಹೆಚ್ಚು ಸಮಯ ಅಗತ್ಯವಿದ್ದು, ದಯವಿಟ್ಟು ಸಹಕರಿಸಿ" ಎಂದು ದೆಹಲಿ ಮೆಟ್ರೋ ರೈಲು ನಿಗಮ(ಡಿಎಂಆರ್‌ಸಿ) ಟ್ವೀಟ್ ಮೂಲಕ ಪ್ರಯಾಣಿಕರನ್ನು ಒತ್ತಾಯಿಸಿದೆ.

Trending News