ನವದೆಹಲಿ:ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ಕಾವೇರಿ ಜಲ ನಿರ್ವಹಣಾ ಮಂಡಳಿ ಸ್ಥಾಪಿಸಬೇಕೆಂದು ನಟ ಕಮಲ್ ಹಾಸನ್ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಯಾಗಿರುವಲ್ಲಿ ಸಿಡಬ್ಲ್ಯುಬಿಬಿ ಸ್ಥಾಪನೆಗೆ ಸರ್ಕಾರವು ವಿಳಂಬನೀತಿ ಅನುಸರಿಸುತ್ತಿದೆಯೇ ಎಂದು ಕಮಲ್ ಪ್ರಶ್ನಿಸಿದ್ದಾರೆ.
My Open Letter to The Honourable Prime Minister @PMOIndia @narendramodi #KamalAppealToPM pic.twitter.com/P3Vlvzdcqq
— Kamal Haasan (@ikamalhaasan) April 12, 2018
"ಈ ವಿಳಂಬವು ಕರ್ನಾಟಕದಲ್ಲಿ ಚುನಾವಣೆ ನಿಮ್ಮ ಪಕ್ಷದ ಆಸಕ್ತಿ ಇರುವ ಕಾರಣದಿಂದಾಗಿ ಇದು ವಿಳಂಬವಾಗುತ್ತಿದೆ ಎಂದು ತಮೀಮ್ ನಾಡಿನ ಜನರು ನಂಬಿದ್ದಾರೆ,ಅದ್ದರಿಂದ ಸರ್, ತಕ್ಷಣ ನಮ್ಮ ದೇಶದ ಪ್ರಧಾನಮಂತ್ರಿಯಾಗಿ ಇದು ಸುಳ್ಳು ಎಂದು ಸ್ಪಷ್ಟಪಡಿಸಲುಸುಪ್ರಿಂ ಕೋರ್ಟ್ ಅನ್ವಯ ನೀವು ಕಾರ್ಯ ನಿರ್ವಹಿಸಬೇಕು" ಎಂದು ಕಮಲ್ ತಮ ಪತ್ರದಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕಮಲ್ ಹಾಸನ್ ರವರು ಮೋದಿಯವರು ನರ್ಮಧಾ ನದಿಯ ವಿಚಾರದಲ್ಲಿ ನೀರಿನ ಹಂಚಿಕೆಯ ಸಮಸ್ಯೆ ಎದುರಾದಾಗ ಅದನ್ನು ಬಗೆ ಹರಿಸಿದ ಅನುಭವವನ್ನು ಹೊಂದಿದವರಾಗಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.