ಭಾರತ-ಮಯನ್ಮಾರ್ ಗಡಿ ಪ್ರದೇಶದಲ್ಲಿ ಭೂಕಂಪ

   

PTI | Updated: Jan 7, 2018 , 03:11 PM IST
ಭಾರತ-ಮಯನ್ಮಾರ್ ಗಡಿ ಪ್ರದೇಶದಲ್ಲಿ ಭೂಕಂಪ

ನವದೆಹಲಿ:  ಭಾರತ-ಮಯನ್ಮಾರ್ (ಮಣಿಪುರ) ಗಡಿ ಪ್ರದೇಶದಲ್ಲಿ 6.0 ರಿಕ್ಟರ್ ಅಳತೆಯ ಮಾಪನದಲ್ಲಿ ಇಂದು ಮಧ್ಯಾಹ್ನ ಭೂಕಂಪ ಸಂಭವಿಸಿದೆ.

ಭೂ ವಿಜ್ಞಾನದ ಸಚಿವಾಲಯದ ಘಟಕವಾದ ನ್ಯಾಷನಲ್ ಸೆಂಟರ್ ಫಾರ್ ಸೈಸ್ಮಾಲಜಿ (NCS) ಪ್ರಕಾರ, ಭೂಕಂಪನವು 35 ಕಿಮೀ ಆಳದಲ್ಲಿ 12:17 ಕ್ಕೆ ಸಂಭವಿಸಿದೆ ಎಂದು ತಿಳಿಸಿದೆ 

ಮ್ಯಾನ್ಮಾರ್-ಭಾರತ (ಮಣಿಪುರ) ಗಡಿ ಪ್ರದೇಶ 24.7 ಎನ್ ಅಕ್ಷಾಂಶ ಮತ್ತು 94.7 ಇ ರೇಖಾಂಶದಲ್ಲಿ ಸಂಭವಿಸಿದೆ ಎಂದು ಅದು ಹೇಳಿದೆ.