ಪೂರ್ವದಿಂದ ಪಶ್ಚಿಮದವರೆಗೆ ಮತ್ತೂಮೆ ಕಂಪಿಸಿದ ಭೂಮಿ, ಗುಜರಾತ್, ಮಿಜೋರಾಂಗಳಲ್ಲಿ Earthquake

ಕೊರೊನಾ ಸಂಕಷ್ಟದ ನಡುವೆ ಭಾನುವಾರ ದೇಶದ ಹಲವು ರಾಜ್ಯಗಳಲ್ಲಿ ಭೂ ಕಂಪಿಸಿರುವ ಕುರಿತು ವರದಿಗಳು ಕೇಳಿಬಂದಿವೆ. ಬೆಳಗ್ಗೆ ಲಡಾಖ್ ನಲ್ಲಿ ಸಂಭವಿಸಿದ ಭೂಕಂಪದ ಬಳಿದ ಇದೀಗ ಸಂಜೆ ಗುಜರಾತ್ ನ ಕಛ ಭೂಕಂಪ ಸಂಭವಿಸಿದ್ದು, 15 ನಿಮಿಷಗಳ ಅಂತರದಲ್ಲಿ ಮಿಜೋರಾಂನಲ್ಲಿ ಭೂಮಿ ಕಂಪಿಸಿದೆ.

Last Updated : Jul 5, 2020, 07:25 PM IST
ಪೂರ್ವದಿಂದ ಪಶ್ಚಿಮದವರೆಗೆ ಮತ್ತೂಮೆ ಕಂಪಿಸಿದ ಭೂಮಿ, ಗುಜರಾತ್, ಮಿಜೋರಾಂಗಳಲ್ಲಿ Earthquake

ನವದೆಹಲಿ: ಕೊರೊನಾ ವೈರಸ್ ಬಿಕ್ಕಟ್ಟಿನ ನಡುವೆ ದೇಶದ ವಿವಿಧ ಭಾಗಗಳಲ್ಲಿ ಆಗಾಗ ಬ್ಹೊಕಂಪ ಸಂಭವಿಸುತ್ತಲೇ ಇದೆ. ಭಾನುವಾರ ಬೆಳಗ್ಗೆ ಲಡಾಖ್ ನಲ್ಲಿ ಸಂಭವಿಸಿದ ಭೂಕಂಪದ ಬಳಿಕ ಇದೀಗ ಸಂಜೆ ಸುಮಾರಿಗೆ ಗುಜರಾತ್ ನ ಕಛ ನಲ್ಲಿ ಭೂಕಂಪ ಸಂಭವಿಸಿದೆ. ಇದಾದ ಸುಮಾರು 15 ನಿಮಿಷಗಳ ಬಳಿಕ ಪೂರ್ವೋತ್ತರ ರಾಜ್ಯ ಮಿಜೋರಾಂನಲ್ಲಿ ಭೂಕಂಪ ಸಂಭವಿಸಿದೆ.. ಸಂಜೆ 5.11 ಕ್ಕೆ ಕಚ್‌ನಲ್ಲಿ ಭೂಕಂಪ ಸಂಭವಿಸಿದೆ. ನಂತರ 15 ನಿಮಿಷಗಳ ನಂತರ, ಮಿಜೋರಾಂನಲ್ಲಿಯೂ ಭೂಮಿ ನಡುಗಿದೆ.

ಗುಜರಾತ್ ನ ಕಚ್ ಪ್ರದೇಶದಲ್ಲಿ ಇಂದು ಸಂಜೆ ಸಂಭವಿರಿಸುವ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.2ರಷ್ಟಿತ್ತು ಎಂದು ಅಳೆಯಲಾಗಿದೆ. ಈ ಭೂಕಂಪದ ಕೇಂದ್ರಬಿಂದು ರಾಜ್ಯದ ಭಚೌ ಬಳಿ ಇತ್ತು ಎನ್ನಲಾಗಿದೆ. ಇದಾದ 15 ನಿಮಿಷಗಳ ಬಳಿಕ ಮಿಜೋರಾಂ ನ ಚಂಪೈ ಜಿಲ್ಲೆಯಲ್ಲಿಯೂ ಕೂಡ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.6 ರಷ್ಟಿತ್ತು ಎನ್ನಲಾಗಿದೆ.

ಬೆಳಗ್ಗೆ ಕಾರ್ಗಿಲ್ ಬಳಿ ಕಂಪಿಸಿತ್ತು ಭೂಮಿ
ಇದಕ್ಕೂ ಮೊದಲು ಇಂದು ಬೆಳಗ್ಗೆ ಲಡಾಖ್ ನ ಕಾರ್ಗಿಲ್ ಬಳಿ ಬೆಳಗಿನ ಜಾವ ಸುಮಾರು 3.37ರ ಸುಮಾರಿಗೆ ಭೂಮಿ ಕಂಪಿಸಿರುವ ಅನುಭವ ಉಂಟಾಗಿದೆ. ರಿಕ್ಟರ್ ಸ್ಕೇಲ್ ನಲ್ಲಿ ಇದರ ತೀವ್ರತೆ 4.7ರಷ್ಟಿತ್ತು. ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಾಜಿ ನೀಡಿರುವ ಮಾಹಿತಿ ನೀಡಿರುವ ಪ್ರಕಾರ ಭೂಕಂಪದ ಕೇಂದ್ರ ಕಾರ್ಗಿಲ್ ನಿಂದ ಸುಮಾರು 433 ಕಿ.ಮೀ ದೂರದಲ್ಲಿನಾರ್ತ್- ನಾರ್ತ್-ವೆಸ್ಟ್ ನಲ್ಲಿತ್ತು. ಆದರೆ, ಈ ಭೂಕಂಪದಲ್ಲಿ ಯಾವುದೇ ರೀತಿಯ ಹಾನಿಯಾಗಿಲ್ಲ ಎಂಬುದು ನೆಮ್ಮದಿಯ ಸುದ್ದಿ.
 

More Stories

Trending News