ಅಂಡಮಾನ್-ನಿಕೋಬಾರ್‌ನಲ್ಲಿ ಮತ್ತೆ ಭೂಕಂಪ

ಇದಕ್ಕೂ ಮೊದಲು ಜುಲೈ 8ರಂದು ಅಂಡಮಾನ್ ದ್ವೀಪಗಳಲ್ಲಿ ಭೂಕಂಪ ಸಂಭವಿಸಿತ್ತು.

Last Updated : Jul 13, 2020, 11:30 AM IST
ಅಂಡಮಾನ್-ನಿಕೋಬಾರ್‌ನಲ್ಲಿ ಮತ್ತೆ ಭೂಕಂಪ  title=

ನವದೆಹಲಿ: ಕರೋನಾ ಬಿಕ್ಕಟ್ಟಿನ ಜೊತೆಗೆ ದೇಶದ ಹಲವು ಭಾಗಗಳಲ್ಲಿ ಭೂಕಂಪದ ನಡುಕ ತಲ್ಲಣ ಹೆಚ್ಚಿಸಿದೆ. ದೇಶದ ವಿವಿಧ ಭಾಗಗಳಲ್ಲಿ ಆಗಾಗ್ಗೆ ಭೂಕಂಪ ಸಂಭವಿಸಿರುವ ಬಗ್ಗೆ ವರದಿಯಾಗುತ್ತಿದೆ. ಅಂಡಮಾನ್ ದ್ವೀಪಗಳ ಪ್ರದೇಶದಲ್ಲಿ ಇಂದು ಮುಂಜಾನೆ 2: 30ಕ್ಕೆ ಮತ್ತೆ ಭೂಕಂಪ (Earthquake) ಸಂಭವಿಸಿದೆ, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆಯು 4.3 ಎಂದು ಅಂದಾಜಿಸಲಾಗಿದೆ.

ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಈಶಾನ್ಯ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಭೂಕಂಪ ಸಂಭವಿಸಿದೆ ಮತ್ತು ಅದರ ಕೇಂದ್ರವು ಭೂಮಿಯಿಂದ 27 ಕಿಲೋಮೀಟರ್ ಕೆಳಗೆ ಕಂಡು ಬಂದಿದೆ ಎಂದು ವರದಿಯಾಗಿದೆ. 

ಗಮನಿಸಿ! ನಿಮ್ಮ ನಗರದಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗಬಹುದು, ಕಾರಣ...?

ಇದಕ್ಕೂ ಮೊದಲು ಜುಲೈ 8ರಂದು ಅಂಡಮಾನ್ ನಿಕೋಬಾರ್ (Andaman Nicobar) ದ್ವೀಪಗಳ ಡಿಗ್ಲಿಪುರದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಆ ಸಮಯದಲ್ಲಿ ಭೂಕಂಪದ ಕೇಂದ್ರಬಿಂದು ಸುಮಾರು 50 ಕಿಲೋಮೀಟರ್ ಕೆಳಗೆ ಇತ್ತು.

ಅದೇ ಸಮಯದಲ್ಲಿ ಕಳೆದ 45 ದಿನಗಳಲ್ಲಿ ದೇಶದ ರಾಜಧಾನಿ ದೆಹಲಿ-ಎನ್‌ಸಿಆರ್ ಭೂಮಿಯಲ್ಲಿ 14 ಬಾರಿ ಭೂಕಂಪನ ಸಂಭವಿಸಿದೆ.  ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಭೂಕಂಪ ಸಂಭವಿಸಿದೆ. ಆದಾಗ್ಯೂ ಹಲವು ಭೂಕಂಪಗಳ ತೀವ್ರತೆಯು ಹೆಚ್ಚಿರಲಿಲ್ಲ.

Trending News