ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾ ವಿಕಾಸ್ ಅಘಾಡಿ ವಿರುದ್ಧ ಬಹಿರಂಗ ಸವಾಲು ಹಾಕಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ 40 ಶಿವಸೇನೆ ಶಾಸಕರ ಪೈಕಿ ಒಬ್ಬ ಸೋತರೂ ಸಹ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ತಮ್ಮ ಬೆಂಬಲಿಗರೊಬ್ಬರಾದ ಶಾಸಕ ಅಬ್ದುಲ್ ಸತ್ತಾರ್ ಅವರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಿಂಧೆ, ಈ ಎಲ್ಲಾ 50 ಶಾಸಕರು ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ನನಗೆ ಖಾತ್ರಿಯಿದೆ. ಅವರಲ್ಲಿ ಯಾರಾದರೂ ಸೋತರೆ ನಾನು ರಾಜಕೀಯ ತ್ಯಜಿಸುತ್ತೇನೆ. ಮುಂದಿನ ರಾಜ್ಯ ಚುನಾವಣೆಯಲ್ಲಿ ತಮ್ಮ ಶಿವಸೇನೆ ಮತ್ತು ಮಿತ್ರ ಪಕ್ಷ ಭಾರತೀಯ ಜನತಾ ಪಕ್ಷವು ಜಂಟಿಯಾಗಿ 200 ಸ್ಥಾನಗಳನ್ನು ಗೆಲ್ಲಲಿದೆ ಎಂದರು.
ಇದನ್ನೂ ಓದಿ: ಸುಶ್ಮಿತಾ ಸೇನ್ ಜೊತೆ ಲಲಿತ್ ಮೋದಿ ಸಂಬಂಧ: ಈ ಬಗ್ಗೆ ಮಗ ರುಚಿರ್ ಹೇಳಿದ್ದು ಹೀಗೆ
ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಪತನಕ್ಕೆ ಕಾರಣವಾದ ಇತ್ತೀಚಿನ ನಾಟಕೀಯ ದಂಗೆಯನ್ನು ಉಲ್ಲೇಖಿಸಿ ಮಾತನಾಡಿದ ಶಿಂಧೆ, " ಆ ಸಂದರ್ಭದ ಸಂಭವನೀಯ ಪರಿಣಾಮಗಳ ಬಗ್ಗೆ ಚಿಂತಿತನಾಗಿದ್ದೆ. ಇಷ್ಟೆಲ್ಲ ನಡೆಯುವಾಗ ಆರಂಭದಲ್ಲಿ ಸುಮಾರು 30 ಶಾಸಕರು, ನಂತರ 50 ಶಾಸಕರು ಇದ್ದರು. ಅವರೆಲ್ಲರೂ ನನಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಿದ್ದರು. ಆದರೆ ನಾನು ಚಿಂತಿತನಾಗಿದ್ದೆ. ಅವರೆಲ್ಲರೂ ನನ್ನೊಂದಿಗೆ ತನ್ನ ಸಂಪೂರ್ಣ ರಾಜಕೀಯ ಜೀವನವನ್ನು ಪಣಕ್ಕಿಟ್ಟಿದ್ದರಿಂದ ಮುಂದೆ ಏನಾಗಬಹುದು ಎಂದು ನಾನು ಯೋಚಿಸುತ್ತಿದ್ದೆ" ಎಂದರು.
ತಮ್ಮ ಗುಂಪಿಗೆ ನಾಯಿ, ಹಂದಿ, ಶವ ಎಂದು ಶಿವಸೇನೆಯ ವಿವಿಧ ನಾಯಕರು ಹಣೆಪಟ್ಟಿ ಕಟ್ಟಿದ್ದನ್ನು ನೆನಪಿಸಿಕೊಂಡ ಶಿಂಧೆ, ಶಾಸಕರನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದರು. "ಅವರು ಹಿಂದುತ್ವ ಮತ್ತು ರಾಜ್ಯಕ್ಕೆ ಸೇರಿದವರು. ಬಂಡಾಯದ ಬೆಳವಣಿಗೆಗೆ ದನಿ ಒಗ್ಗೂಡಿತು. ಶಾಸಕರು ಬಾಳಾಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ಅವರಿಂದ ಸ್ಫೂರ್ತಿ ಪಡೆದಿದ್ದಾರೆ. ಅವರು ಯಾವಾಗಲೂ ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ರಾಜಕೀಯ ಶತ್ರುಗಳೆಂದು ಪರಿಗಣಿಸಿದ್ದಾರೆ. ಎರಡೂವರೆ ವರ್ಷಗಳ ಎಂವಿಎ ಅಧಿಕಾರಾವಧಿಯಲ್ಲಿ ಉಸಿರುಗಟ್ಟಿದ್ದಾರೆ" ಎಂದು ಗುಡುಗಿದರು.
ಇದನ್ನೂ ಓದಿ: ಗೃಹಸಚಿವರಿಂದ ಪೊಲೀಸ್ ಇಲಾಖೆ ನೈತಿಕ ಸ್ಥೈರ್ಯ ಕಳೆದುಕೊಂಡಿದೆ: ಸಿದ್ದರಾಮಯ್ಯ
ಈ ಹಿಂದೆ ಶಿವಸೇನೆಯ ಹಿರಿಯ ನಾಯಕ ಮತ್ತು ಕ್ಯಾಬಿನೆಟ್ ಸಚಿವ ಏಕನಾಥ್ ಶಿಂಧೆ ನೇತೃತ್ವದ 40 ಬಂಡಾಯ ಶಾಸಕರ ತಂಡವು ಜೂನ್ 22 ರ ಬಳಿಕ ಅಸ್ಸಾಂ ರಾಜಧಾನಿ ಗುವಾಹಟಿಯ ಹೋಟೆಲ್‌ನಲ್ಲಿ ಮೊಕ್ಕಾಂ ಹೂಡಿತ್ತು. ಶಿವಸೇನೆ ಸರ್ಕಾರ ಉರುಳಿಸಿ ತಮ್ಮ ನೆಲೆ ಸ್ಥಾಪಿಸಬೇಕು ಎಂಬ ಉದ್ದೇಶ ಹೊಂದಿದ್ದ ಅವರು, ಬಂಡಾಯ ಎದ್ದಿದ್ದರು. ಆ ಬಳಿಕ ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದರು. ಇದೀಗ ಮಹಾರಾಷ್ಟ್ರ ರಾಜಕೀಯದ ದಾರ ಏಕನಾಥ್ ಶಿಂಧೆ ಕೈಯಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.