ಫೇಸ್ ಬುಕ್ ಇಂಡಿಯಾ ಭಾರತದ ಉನ್ನತಾಧಿಕಾರಿ ಅಂಕಿದಾಸ್ ರಾಜೀನಾಮೆ

ಮಹತ್ವದ ಬೆಳವಣಿಗೆಯೊಂದರಲ್ಲಿ ಫೇಸ್ ಬುಕ್ ಉನ್ನತಾಧಿಕಾರಿಗಳಲ್ಲಿ ಒಬ್ಬರಾದ ಅಂಕಿ ದಾಸ್ (Ankhi Das) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಫೇಸ್ ಬುಕ್ (Facebook) ನ ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾ ಪ್ರಾಂತ್ಯಗಳ ವ್ಯವಹಾರಗಳ ಸಾರ್ವಜನಿಕ ನೀತಿ ನಿರೂಪಣೆಯ ನಿರ್ದೇಶಕರಾಗಿ ಅಂಕಿ ದಾಸ್ ಕಾರ್ಯ ನಿರ್ವಹಿಸುತ್ತಿದ್ದರು. ಭಾರತದಲ್ಲಿ ಫೇಸ್ ಬುಕ್ ಬೆಳೆಯುವಲ್ಲಿ ಅಂಕಿದಾಸ್ ಕೊಡುಗೆ ಮಹತ್ವದ್ದು ಎನ್ನಲಾಗಿದೆ.

Last Updated : Oct 28, 2020, 09:52 AM IST
ಫೇಸ್ ಬುಕ್ ಇಂಡಿಯಾ ಭಾರತದ ಉನ್ನತಾಧಿಕಾರಿ ಅಂಕಿದಾಸ್ ರಾಜೀನಾಮೆ title=

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಫೇಸ್ ಬುಕ್ ಉನ್ನತಾಧಿಕಾರಿಗಳಲ್ಲಿ ಒಬ್ಬರಾದ ಅಂಕಿ ದಾಸ್ (Ankhi Das) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಫೇಸ್ ಬುಕ್ (Facebook) ನ ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾ ಪ್ರಾಂತ್ಯಗಳ ವ್ಯವಹಾರಗಳ ಸಾರ್ವಜನಿಕ ನೀತಿ ನಿರೂಪಣೆಯ ನಿರ್ದೇಶಕರಾಗಿ ಅಂಕಿ ದಾಸ್ ಕಾರ್ಯ ನಿರ್ವಹಿಸುತ್ತಿದ್ದರು. ಭಾರತದಲ್ಲಿ ಫೇಸ್ ಬುಕ್ ಬೆಳೆಯುವಲ್ಲಿ ಅಂಕಿದಾಸ್ ಕೊಡುಗೆ ಮಹತ್ವದ್ದು ಎನ್ನಲಾಗಿದೆ.

ಫೇಸ್ ಬುಕ್ ವಿಷಯ ವ್ಯವಹಾರಗಳು  ಬಿಜೆಪಿ ಪರ  ಇರುವಂತೆ ಅಂಕಿದಾಸ್ ನೋಡಿಕೊಳ್ಳುತ್ತಿದ್ದರು ಎಂಬ ಆರೋಪ  ಅವರ ವಿರುದ್ಧ ಕೇಳಿ ಬಂದಿತ್ತು. ಈ ವಿಷಯದಲ್ಲಿ  ನಂತರ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಈ ಹೊತ್ತಿನಲ್ಲೇ ಅಂಕಿದಾಸ್  ಫೇಸ್ ಬುಕ್ ಗೆ ರಾಜೀನಾಮೆ ನೀಡಿದ್ದಾರೆ.ಈ ಸಂಬಂಧ ಫೇಸ್ ಬುಕ್ ಸ್ಪಷ್ಟನೆ ನೀಡಿದ್ದು, ಅಂಕಿ ದಾಸ್ ರಾಜೀನಾಮೆಗೂ ಮತ್ತು ಅವರನ್ನು ಸುತ್ತಿಕೊಂಡಿರುವ ವಿವಾದಕ್ಕೂ ಯಾವುದೇ ಸಂಬಂಧ ಇಲ್ಲ. ಸಾರ್ವಜನಿಕ ಜೀವನದಲ್ಲಿ ಅವರು ಆಸಕ್ತಿ ಹೊಂದಿದ್ದು, ಅದರಲ್ಲಿಯೇ ಮುಂದುವರಿಯುವ ಇರಾದೆ ಅಂಕಿದಾಸ್ ಹೊಂದಿದ್ದಾರೆ ಎಂದು ಫೇಸ್ ಬುಕ್ ಹೇಳಿದೆ.  .”

Facebook India ಪಾಲಸಿ ನಿರ್ದೇಶಕಿಗೆ ಜೀವ ಬೆದರಿಕೆ

ಫೇಸ್ ಬುಕ್ ಇಂಡಿಯಾ ಕಾರ್ಯ ನಿರ್ವಾಹಕ ನಿರ್ದೇಶಕ  ಅಜಿತ್ ಮೋಹನ್ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದು,  ಸಾರ್ವಜನಿಕ ಜೀವನದಲ್ಲಿ ಮುಂದುವರಿಯುವ ನಿಟ್ಟಿನಲ್ಲಿ ಅಂಕಿ ದಾಸ್ ಫೇಸ್ ಬುಕ್ ತೊರೆದಿದ್ದಾರೆ. ಅಂಕಿದಾಸ್ ಫೇಸ್ ಬುಕ್ ನ ಹಳೆಯ ಉದ್ಯೋಗಿಗಳಲ್ಲಿ ಒಬ್ಬರಾಗಿದ್ದು, ಕಳೆದ 9 ವರ್ಷಗಳಲ್ಲಿಕಂಪನಿಯ ಪ್ರಗತಿ ಮತ್ತು ಸೇವೆಯ ಬೆಳವಣಿಗೆಯಲ್ಲಿ ಗಣನೀಯ ಕೊಡುಗೆ  ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಂಕಿದಾಸ್ ಅವರು ನಮ್ಮ ತಂಡದ ಸದಸ್ಯರಾಗಿದ್ದು, ಅವರ ಕೊಡುಗೆ ಅನನ್ಯವಾಗಿದೆ. ಅವರ ಕೊಡುಗೆಗೆ ನಾವು ಎಂದೆಂದಿಗೂ ಋಣಿಯಾಗಿದ್ದೇವೆ’ ಎಂದು ಹೇಳಿದ್ದಾರೆ.

ಫೇಸ್ ಬುಕ್  ಅನುಸರಿಸಿಕೊಂಡು ಬಂದಿರುವ ದ್ವೇಷ ಭಾಷಣ ನೀತಿಗೆ ಅನುಗುಣವಾಗಿ ಬಿಜೆಪಿ ಮತ್ತು ಅದರ ಸಹವರ್ತಿ  ಅಕೌಂಟ್ ಗಳ ದ್ವೇಷ ಭಾಷಣಗಳ ಪೋಸ್ಟ್ ಗಳನ್ನು ಫೇಸ್ ಬುಕ್  ಸೆನ್ಸಾರ್ ಗೆ ಒಳಪಡಿಸುತ್ತಿರಲಿಲ್ಲ ಎಂದು ಕಳೆದ ಆಗಸ್ಟ್ ನಲ್ಲಿ ವಾಲ್ ಸ್ಟ್ರೀಟ್ ಜರ್ನಲ್ (The Wall Street Journal) ಮತ್ತು ಟೈಮ್ ಮ್ಯಾಗಝಿನ್ (TIME )ವರದಿ ಮಾಡಿತ್ತು. ಬಿಜೆಪಿ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಂಡರೆ ಭವಿಷ್ಯದಲ್ಲಿ ಕಂಪನಿಯ ವ್ಯವಹಾರ ಸಂಬಂಧಗಳಿಗೆ ಧಕ್ಕೆಯಾಗಬಹುದು ಎಂದು ಅಂಕಿದಾಸ್ ಹೇಳಿದ್ದರು ಎನ್ನಲಾಗಿದೆ.

Trending News