ವೈದ್ಯರು ಆಂಬುಲೆನ್ಸ್ ನಿರಾಕರಿಸಿದ್ದಕ್ಕೆ ಭುಜದ ಮೇಲೆಯೇ ಶವ ಸಾಗಿಸಿದ ಯುವಕ!

    

Last Updated : Feb 17, 2018, 03:28 PM IST
ವೈದ್ಯರು ಆಂಬುಲೆನ್ಸ್ ನಿರಾಕರಿಸಿದ್ದಕ್ಕೆ ಭುಜದ ಮೇಲೆಯೇ ಶವ ಸಾಗಿಸಿದ ಯುವಕ!   title=
Photo Courtesy:ANI

ನವದೆಹಲಿ: ಆಘಾತಕಾರಿ ಘಟನೆಯಲ್ಲಿ ತಮ್ಮ ಸಂಬಂಧಿಕನ ಮೃತ ದೇಹವನ್ನು ಒಯ್ಯಲು ಸರ್ಕಾರಿ ಆಸ್ಪತ್ರೆಯಲ್ಲಿ  ಆಂಬುಲೆನ್ಸ್ ನಿರಾಕರಿಸಿದ ಹಿನ್ನಲೆಯಲ್ಲಿ ತನ್ನ ಭುಜದ ಮೇಲೆಯೇ ದೇಹವನ್ನು ಹೊತ್ತೊಯ್ಯ್ದ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದ ಸಂಬಾಲ್ ನಲ್ಲಿ ನಡೆದಿದೆ.

ಆ ನಂತರ, ಆ ಕುಟುಂಬ ಶವವನ್ನು ಅಂತಿಮ ಸಂಸ್ಕಾರ ನೆರವೇರಿಸಲು ಬೈಕ್ ಮೇಲೆ ಮನೆಗೆ ಸಾಗಿಸಿದ್ದಾರೆ. ಈ ವಿಷಯ ತಿಳಿದ ತಕ್ಷಣ ಜಿಲ್ಲಾಧಿಕಾರಿಯವರು ಈ ಘಟನೆಯ ಕುರಿತಾಗಿ ತನಿಖೆಗೆ ಆದೇಶಿಸಿದ್ದಾರೆ. 

ಇಲ್ಲಿನ ಪೊಲೀಸರು ಹೇಳುವಂತೆ ಆ ಮೃತ ವ್ಯಕ್ತಿಯು ತನ್ನ ಅಜ್ಜನಿಗೆ ಹೊಲಗದ್ದೆಯಲ್ಲಿ ಸಹಾಯ ಮಾಡುವಾಗ ಗಾಯಗೊಂಡಿದ್ದಾನೆ ಆದರೆ ಆಸ್ಪತ್ರೆಗೆ ಸಾಗಿಸುವಾಗ ದಾರಿಯ ಮದ್ಯದಲ್ಲಿಯೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.ನಂತರ ಆಸ್ಪತ್ರೆಯ ಸಿಬ್ಬಂಧಿಯು ದೇಹವನ್ನು ಆಸ್ಪತ್ರೆಯಿಂದ ತೆಗೆದುಕೊಂಡುಹೋಗಲು ಆದೇಶಿಸಿದ್ದಾರೆ. ಎಂದು ತಿಳಿದುಬಂದಿದೆ.

ಈ ಕುರಿತಾಗಿ ಪ್ರತಿಕ್ರಯಿಸಿರುವ ಮೃತನ ಸಂಬಂಧಿ" ವೈದ್ಯರು ಮೃತ ದೇಹವನ್ನು ನೋಡಿದ ತಕ್ಷಣವೇ ನಮಗೆ ಆಸ್ಪತ್ರೆಯಿಂದ ಹೊರಹೋಗಲು ತಿಳಿಸಿದರು. ನಾವು ದೇಹವನ್ನು ಸಾಗಿಸಲು ಸ್ಟ್ರೆಚರ್ ಅಥವಾ ಆಂಬುಲೆನ್ಸ್ ಕೇಳಿದರು ಸಹ ಅದಕ್ಕೆ ಅವರು ಸಮ್ಮತಿ ನೀಡಲಿಲ್ಲ, ಆದ್ದರಿಂದ ನಾವು ಈ ರೀತಿ ಹೊತ್ತು ಒಯ್ಯಬೇಕಾಯಿತು" ಎಂದು ತಿಳಿಸಿದ್ದಾರೆ.

 

Trending News