ಖ್ಯಾತ ಕಥಕ್ ನಾಟ್ಯ ಪ್ರವೀಣ ಪಂಡಿತ್ ಬಿರ್ಜು ಮಹಾರಾಜ್ ನಿಧನ

ಪಂಡಿತ್ ಬಿರ್ಜು ಮಹಾರಾಜ್, ಹೃದಯಾಘಾತದಿಂದಾಗಿ ದೆಹಲಿಯಲ್ಲಿ ನಿಧನರಾಗಿದ್ದಾರೆ.   1938 ರಲ್ಲಿ ಜನಿಸಿರುವ ಪಂಡಿತ್ ಬಿರ್ಜು ಮಹಾರಾಜ್, ಲಕ್ನೋ ಘರಾನಾಗೆ ಸೇರಿದವರು. 

Written by - Ranjitha R K | Last Updated : Jan 17, 2022, 09:54 AM IST
  • ಪಂಡಿತ್ ಬಿರ್ಜು ಮಹಾರಾಜ್ ನಿಧನ
  • 1938 ರಲ್ಲಿ ಜನಿಸಿದ್ದ ಪಂಡಿತ್ ಬಿರ್ಜು ಮಹಾರಾಜ್
  • ಶಾಸ್ತ್ರೀಯ ಗಾಯಕರೂ ಆಗಿದ್ದ ಪಂಡಿತ್ ಬಿರ್ಜು ಮಹಾರಾಜ್
ಖ್ಯಾತ ಕಥಕ್ ನಾಟ್ಯ ಪ್ರವೀಣ ಪಂಡಿತ್ ಬಿರ್ಜು ಮಹಾರಾಜ್ ನಿಧನ title=
ಪಂಡಿತ್ ಬಿರ್ಜು ಮಹಾರಾಜ್ ನಿಧನ (file photo)

ನವದೆಹಲಿ : ಖ್ಯಾತ ಕಥಕ್ ನೃತ್ಯಗಾರ ಪಂಡಿತ್ ಬಿರ್ಜು ಮಹಾರಾಜ್ (Pandit Birju Maharaj)  ವಿಧಿವಶರಾಗಿದ್ದಾರೆ. ಪದ್ಮವಿಭೂಷಣ ಪುರಸ್ಕೃತ ಬಿರ್ಜು ಮಹಾರಾಜ್ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಅವರ ಮೊಮ್ಮಗ ಸ್ವರಣ್ಶ್ ಮಿಶ್ರಾ ಸಾಮಾಜಿಕ ಜಾಲತಾಣದಲ್ಲಿ (Social media) ಮಾಹಿತಿ ನೀಡಿದ್ದಾರೆ.

ಪಂಡಿತ್ ಬಿರ್ಜು ಮಹಾರಾಜ್ ನಿಧನ : 
ಪಂಡಿತ್ ಬಿರ್ಜು ಮಹಾರಾಜ್, ಹೃದಯಾಘಾತದಿಂದಾಗಿ  (Heart Attack) ದೆಹಲಿಯಲ್ಲಿ ನಿಧನರಾಗಿದ್ದಾರೆ.   1938 ರಲ್ಲಿ ಜನಿಸಿರುವ ಪಂಡಿತ್ ಬಿರ್ಜು ಮಹಾರಾಜ್ (Pandit Birju Maharaj), ಲಕ್ನೋ ಘರಾನಾಗೆ ಸೇರಿದವರು. ಪಂಡಿತ್ ಬಿರ್ಜು ಮಹಾರಾಜ್ ಕಥಕ್ ನೃತ್ಯಗಾರ ಮತ್ತು ಶಾಸ್ತ್ರೀಯ ಗಾಯಕರಾಗಿದ್ದರು.  ಪಂಡಿತ್ ಬಿರ್ಜು ಮಹಾರಾಜ್ ಅವರ ತಂದೆ ಮತ್ತು ಚಿಕ್ಕಪ್ಪ ಕೂಡ ಕಥಕ್ ನೃತ್ಯಗಾರರಾಗಿದ್ದರು.

ಇದನ್ನೂ ಓದಿ :  Army Day: ಜಗತ್ತಿನ ಅತಿ ದೊಡ್ಡ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿದ ಭಾರತೀಯ ಸೈನ್ಯ

ಹೃದಯಾಘಾತವಾಗುವ ಮುನ್ನ ಅಂತಾಕ್ಷರಿ ಆಡುತ್ತಿದ್ದ ಮಹಾರಾಜರು :
ಪಂಡಿತ್ ಬಿರ್ಜು ಮಹಾರಾಜ್ ಅವರು ಮುಂದಿನ ತಿಂಗಳು 84 ನೇ ವರ್ಷಕ್ಕೆ ಕಾಲಿಡಲಿದ್ದಾರೆ ಎಂದು ಅವರ ಮೊಮ್ಮಗಳು ರಾಗಿಣಿ ಮಹಾರಾಜ್ (Ragini Maharaj) ತಿಳಿಸಿದ್ದಾರೆ. ಪಂಡಿತ್ ಬಿರ್ಜು ಮಹಾರಾಜರ ಮರಣದ ಸಮಯದಲ್ಲಿ, ಅವರ ಕುಟುಂಬ ಸದಸ್ಯರು ಮತ್ತು ಅವರ ಶಿಷ್ಯರು ಅವರ ಸುತ್ತಲೂ ಇದ್ದರು. ಭೋಜನದ ನಂತರ ಅವರು ಅಂತಾಕ್ಷರಿ ಆಡುತ್ತಿದ್ದರು. ಈ ಸಂದರ್ಭದಲ್ಲಿ ಮಹಾರಾಜರಿಗೆ ಇದ್ದಕ್ಕಿದ್ದಂತೆ  ತೊಂದರೆ ಕಾಣಿಸಿಕೊಂಡಿದೆ. ಪಂಡಿತ್ ಬಿರ್ಜು ಮಹಾರಾಜ್ ಮೂತ್ರಪಿಂಡ ಕಾಯಿಲೆಯಿಂದ (Kidney problem)ಬಳಲುತ್ತಿದ್ದರು ಮತ್ತು ಡಯಾಲಿಸಿಸ್ ಮಾಡುತ್ತಿದ್ದರು. ಪಂಡಿತ್ ಬಿರ್ಜು ಮಹಾರಾಜ್ ಹೃದಯಾಘಾತದಿಂದ ನಿಧನರಾದರು.  

ಕಲಾವಿದರು ಪಂಡಿತ್ ಬಿರ್ಜು ಮಹಾರಾಜ್ ಅವರಿಗೆ ಗೌರವ :
ಭಾರತದ ಶ್ರೇಷ್ಠ ಕಲಾವಿದರಲ್ಲಿ ಪಂಡಿತ್ ಬಿರ್ಜು ಮಹಾರಾಜ್ ಅವರ ಹೆಸರನ್ನು ಸೇರಿಸಲಾಗಿದೆ. ಅವರಿಗೆ ಜಗತ್ತಿನಾದ್ಯಂತ ಲಕ್ಷಾಂತರ ಕೋಟಿ ಅಭಿಮಾನಿಗಳಿದ್ದಾರೆ. ಗಾಯಕಿ ಮಾಲಿನಿ ಅವಸ್ತಿ ಮತ್ತು ಅದ್ನಾನ್ ಸಾಮಿ ಅವರಿಗೆ ಸಾಮಾಜಿಕ ಮಾಧ್ಯಮ (Social media) ಪೋಸ್ಟ್‌ಗಳ ಮೂಲಕ ಗೌರವ ಸಲ್ಲಿಸಿದ್ದಾರೆ.

 

ಇದನ್ನೂ ಓದಿ : Post Office ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ : ಕೇವಲ 5 ವರ್ಷದಲ್ಲಿ 14 ಲಕ್ಷಕ್ಕೂ ಹೆಚ್ಚು ಹಣ ಲಾಭ ಸಿಗುತ್ತೆ!

ಶ್ರೇಷ್ಠ ಕಥಕ್ ನೃತ್ಯಗಾರ ಪಂಡಿತ್ ಬಿರ್ಜು ಮಹಾರಾಜ್ ಅವರ ನಿಧನದ ಸುದ್ದಿಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ ಎಂದು ಅದ್ನಾನ್ ಸಾಮಿ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಅವರು ತಮ್ಮ ಪ್ರತಿಭೆಯಿಂದ ಹಲವಾರು ತಲೆಮಾರುಗಳ ಮೇಲೆ ಪ್ರಭಾವ ಬೀರಿದ್ದಾರೆ. ಅವರ  ಆತ್ಮಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News