Farmer Bought Chopper To Sell Milk - ಹಾಲು ಮಾರಾಟ ಮಾಡಲು 30 ಕೋಟಿ. ರೂ ಹೆಲಿಕಾಪ್ಟರ್ ಖರೀದಿಸಿದ ರೈತ

Farmer Bought Chopper To Sell Milk - ಮಹಾರಾಷ್ಟ್ರದ (Maharashtra) ಭಿವಂಡಿಯ (Bhiwandi) ರೈತನೊಬ್ಬ ತನಗಾಗಿ ಹೆಲಿಕಾಪ್ಟರ್ ಖರೀದಿಸಿದ್ದಾನೆ. ವಾಸ್ತವವಾಗಿ, ವೃತ್ತಿಯಲ್ಲಿ ಕೃಷಿಕರಾದ ಜನಾರ್ದನ್ ಭೋಯಿರ್ ಡೈರಿಯನ್ನು ಆರಂಭಿಸಿದ್ದಾರೆ.

Written by - Nitin Tabib | Last Updated : Feb 17, 2021, 03:46 PM IST
  • ಹಾಲು ಮಾರಾಟ ಮಾಡಲು ಹೆಲಿಕ್ಯಾಪ್ಟರ್ ಖರೀದಿಸಿದ ರೈತ.
  • ಪ್ರಯಾಣದಲ್ಲಾಗುವ ಸಮಯ ವ್ಯರ್ಥವನ್ನು ತಪ್ಪಿಸುವ ಉದ್ದೇಶ ಅವರದು.
  • ವ್ಯವಸಾಯದ ಜೊತೆಗೆ ರಿಯಲ್ ಎಸ್ಟೇಟ್ ದಂಧೆ ಕೂಡ ಮಾಡುತ್ತಾರೆ ಜನಾರ್ಥನ್.
Farmer Bought Chopper To Sell Milk - ಹಾಲು ಮಾರಾಟ ಮಾಡಲು 30 ಕೋಟಿ. ರೂ ಹೆಲಿಕಾಪ್ಟರ್ ಖರೀದಿಸಿದ ರೈತ title=
Farmer Bought Chopper To Sell Milk (File Photo)

Farmer Bought Chopper To Sell Milk - ಮಹಾರಾಷ್ಟ್ರದ (Maharashtra) ಭಿವಂಡಿಯ (Bhiwandi) ರೈತನೊಬ್ಬ ತನಗಾಗಿ ಹೆಲಿಕಾಪ್ಟರ್ ಖರೀದಿಸಿದ್ದಾನೆ. ವಾಸ್ತವವಾಗಿ, ವೃತ್ತಿಯಲ್ಲಿ ಕೃಷಿಕರಾದ ಜನಾರ್ದನ್ ಭೋಯಿರ್ ಡೈರಿಯನ್ನು ಆರಂಭಿಸಿದ್ದಾರೆ. ಈ ವ್ಯವಹಾರವನ್ನು ಮುಂದುವರಿಸಲು ಅವರು ಹೆಲಿಕಾಪ್ಟರ್ ಖರೀದಿಸಿದ್ದಾರೆ. ಈ ಹೆಲಿಕಾಪ್ಟರ್‌ನ ಬೆಲೆ 30 ಕೋಟಿ ರೂ. ಎಂದು ಹೇಳಲಾಗುತ್ತಿದೆ.

ತನ್ನ ಹಾಲಿನ ವ್ಯಾಪಾರವನ್ನು (Dairy Business) ವಿಸ್ತರಿಸಲು ಜನಾರ್ಧನ್ ದೇಶಾದ್ಯಂತ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಾರೆ. ಪ್ರಯಾಣದಲ್ಲಾಗುವ ತೊಂದರೆಯನ್ನು ತಪ್ಪಿಸಲು ಜನಾರ್ದನ್ ಈ ಹೆಲಿಕ್ಯಾಪ್ಟರ್ (Chopper) ಖರೀದಿಸಿದ್ದಾರೆ.

ಇದನ್ನೂ ಓದಿ- ಡಿಮಾಂಡ್ ಹಾಗೂ ಲಾಭ ನೀಡುವ ಈ Business ಆರಂಭಿಸಿ, ಮೊದಲ ದಿನದಿಂದಲೇ ಗಳಿಕೆ ಆರಂಭಿಸಿ

ಈ ಕುರಿತು ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿರುವ ಜನಾರ್ದನ್ (Janardhan Bhoir), ತಮ್ಮ ಡೈರಿ ಉದ್ಯಮವನ್ನು ದೇಶಾದ್ಯಂತ ವಿಸ್ತರಿಸಲು ತಮಗೆ ಹಲವು ಬಾರಿ ಪಂಜಾಬ್, ಹರಿಯಾಣಾ, ರಾಜಸ್ಥಾನ್ ಹಾಗೂ ಗುಜರಾತ್ ರಾಜ್ಯಗಳಿಗೆ ಭೇಟಿ ನೀಡಬೇಕಾಗುತ್ತದೆ. ಹಲವು ಪ್ರದೇಶಗಳಲ್ಲಿ ವಿಮಾನ ನಿಲ್ದಾಣದ ಸೌಕರ್ಯ ಇಲ್ಲದ ಕಾರಣ ತಮ್ಮ ಹೆಚ್ಚಿನ ಸಮಯ ಪ್ರಯಾಣದಲ್ಲಿಯೇ ವ್ಯರ್ಥವಾಗುತ್ತದೆ ಎಂದಿದ್ದಾರೆ. ಹೀಗಾಗಿ ತಮ್ಮ ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ತಾವು ಈ ಹೆಲಿಕ್ಯಾಪ್ಟರ್ ಖರೀದಿಸಿರುವುದಾಗಿ ಜನಾರ್ಧನ್ ಹೇಳಿದ್ದಾರೆ. 

ಇದನ್ನೂ ಓದಿ- ತಿಂಗಳಿಗೆ 70 ಸಾವಿರ ನಿವ್ವಳ ಆದಾಯ ನೀಡುವ ಈ ಬಿಸಿನೆನ್ಸ್ ನೀವೂ ಆರಂಭಿಸಿ, Modi ಸರ್ಕಾರ ನೀಡುತ್ತೆ ಧನಸಹಾಯ

ಭಾನುವಾರ ಈ ಹೆಲಿಕ್ಯಾಪ್ಟರ್ ಅನ್ನು ಜನಾರ್ಧನ್ ಅವರ ಗ್ರಾಮಕ್ಕೆ ಟ್ರಯಲ್ ಗಾಗಿ ಕಳುಹಿಸಲಾಗಿತ್ತು. ಈ ಸಂದರ್ಭದಲ್ಲಿ ಜನಾರ್ಧನ್ ತಮ್ಮ ಊರಿನ ಗ್ರಾಮ ಪಂಚಾಯತ್ ಸದಸ್ಯರನ್ನೂ ಕೂಡ ಈ ಹೆಲಿಕ್ಯಾಪ್ಟರ್ ನಲ್ಲಿ ಸವಾರಿ ಮಾಡಿಸಿದ್ದಾರೆ. ಜನಾರ್ಧನ್ 2.5 ಎಕರೆ ಜಮೀನಿನಲ್ಲಿ ಒಂದು ಸೇಫ್ಟಿ ಗೋಡೆಯ ಜೊತೆಗೆ ಒಂದು ಹೆಲಿಪ್ಯಾಡ್ ಮಾಡಲು ಕೂಡ ವ್ಯವಸ್ಥೆ ನಡೆಸಿದ್ದಾರೆ. ತಮ್ಮ ಹೆಲಿಕ್ಯಾಪ್ಟರ್ ಗಾಗಿ ಅವರು ಒಂದು ಪೈಲಟ್ ರೂಮ್, ಟೆಕ್ನಿಷಿಯನ್ ರೂಮ್ ಹಾಗೂ ಗ್ಯಾರೇಜ್ ಅನ್ನು ಕೂಡ ಅವರು ನಿರ್ಮಿಸಲಿದ್ದಾರೆ. ಮಾರ್ಚ್ 15 ರಂದು ಈ ಹೆಲಿಕ್ಯಾಪ್ಟರ್ ತಮಗೆ ಡಿಲೆವರಿ ಮಾಡುವುದಾಗಿ ಹೆಲಿಕ್ಯಾಪ್ಟರ್ ಕಂಪನಿ ಹೇಳಿದೆ ಎಂದು ಜನಾರ್ಧನ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಜನಾರ್ಧನ್ 100 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿದ್ದಾರೆ ಎನ್ನಲಾಗುತ್ತದೆ. ಡೈರಿ ಹಾಗೂ ವ್ಯವಸಾಯದ ಜೊತೆಗೆ ಜನಾರ್ಧನ್ ರಿಯಲ್ ಎಸ್ಟೇಟ್ ಧಂದೆ ಕೂಡ ಮಾಡುತ್ತಾರೆ.

ಇದನ್ನೂ ಓದಿ- ಡೆರಿ ಉದ್ಯಮ ಆರಂಭಿಸಲು ಇಲ್ಲಿದೆ ಸುವರ್ಣಾವಕಾಶ, Modi ಸರ್ಕಾರ ನೀಡುತ್ತೆ ಅಗ್ಗದ Loan

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News