ರೈತರ ಬೇಡಿಕೆಗೆ ಒಪ್ಪದ ಕೇಂದ್ರ ಸರ್ಕಾರ, ಸಂಧಾನ ವಿಫಲ

32 ಕ್ಕೂ ಹೆಚ್ಚು ರೈತ ಸಂಘದ ಮುಖಂಡರು ಮತ್ತು ಸರ್ಕಾರದ ನಡುವೆ ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ನಡೆದ ಮಾತುಕತೆ ಯಾವುದೇ ತಾರ್ಕಿಕ ಅಂತ್ಯ ಕಾಣುವಲ್ಲಿ ವಿಫಲವಾಗಿದೆ. ನಾಲ್ಕನೇ ಸುತ್ತಿನ ಮಾತುಕತೆ ಡಿಸೆಂಬರ್ 3 ರ ಗುರುವಾರ ನಡೆಯಲಿದೆ.

Last Updated : Dec 1, 2020, 08:47 PM IST
ರೈತರ ಬೇಡಿಕೆಗೆ ಒಪ್ಪದ ಕೇಂದ್ರ ಸರ್ಕಾರ, ಸಂಧಾನ ವಿಫಲ  title=

ನವದೆಹಲಿ: 32 ಕ್ಕೂ ಹೆಚ್ಚು ರೈತ ಸಂಘದ ಮುಖಂಡರು ಮತ್ತು ಸರ್ಕಾರದ ನಡುವೆ ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ನಡೆದ ಮಾತುಕತೆ ಯಾವುದೇ ತಾರ್ಕಿಕ ಅಂತ್ಯ ಕಾಣುವಲ್ಲಿ ವಿಫಲವಾಗಿದೆ. ನಾಲ್ಕನೇ ಸುತ್ತಿನ ಮಾತುಕತೆ ಡಿಸೆಂಬರ್ 3 ರ ಗುರುವಾರ ನಡೆಯಲಿದೆ.

ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವಂತೆ ಸರ್ಕಾರ ಮಂಗಳವಾರ ಸೂಚಿಸಿದೆ, ಆದರೆ ಮೂರು ಕೇಂದ್ರ ಸಚಿವರೊಂದಿಗಿನ ಮ್ಯಾರಥಾನ್ ಸಭೆಯಲ್ಲಿ 35 ಆಂದೋಲನ ಸಂಘಟನೆಗಳ ಪ್ರತಿನಿಧಿಗಳು ಇದನ್ನು ತಿರಸ್ಕರಿಸಿದರು.

ರೈತರ ಬೇಡಿಕೆಗಳ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ದ-ಅಮಿತ್ ಶಾ ಭರವಸೆ

ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಘೋಷಿಸಿದರು ಮತ್ತು ಸರ್ಕಾರದಿಂದ ತಮ್ಮ ಬೇಡಿಕೆಗಳಿಗೆ ಪರಿಹಾರ ಸಿಗದ ತನಕ ಆಂದೋಲನವನ್ನು ದಿನದಿಂದ ದಿನಕ್ಕೆ ಬಲಪಡಿಸಲಾಗುತ್ತದೆ ಎನ್ನಲಾಗಿದೆ. ಸರ್ಕಾರ ತನ್ನ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸಿದ್ಧರಿಲ್ಲ, ಮತ್ತು ನಡೆಯುತ್ತಿರುವ ಅಸ್ತವ್ಯಸ್ತತೆಯನ್ನು ಪರಿಹರಿಸಲು ಕಾನೂನು ಸಂಬಂಧಿತ ತಪ್ಪು ಕಲ್ಪನೆಗಳನ್ನು ಅಧ್ಯಯನ ಮಾಡಲು ಮತ್ತು ಸ್ಪಷ್ಟಪಡಿಸಲು ಸಮಿತಿಯನ್ನು ರಚಿಸಲು ಪ್ರಸ್ತಾಪಿಸಿತು.

ಚರ್ಚೆಯ ಭಾಗವಾಗುವುದಾಗಿ ಸರ್ಕಾರದ ಭರವಸೆಯ ಹೊರತಾಗಿಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಭೆಯಲ್ಲಿ ಹಾಜರಿರಲಿಲ್ಲ ಎಂದು ರೈತರು ಹೇಳಿದರು.ದೆಹಲಿಯ ವಿಜ್ಞಾನ ಭವನದಲ್ಲಿ ಪ್ರಾರಂಭವಾದ ಸಭೆಯ ಕೊನೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ "ಮೂರನೇ ಸುತ್ತಿನ ಸಭೆ ಮುಗಿದಿದೆ ಮತ್ತು ನಾಲ್ಕನೇ ಸುತ್ತಿನ ಸಭೆ ಗುರುವಾರ (ಡಿಸೆಂಬರ್ 3) ನಡೆಯಲಿದೆ" ಎಂದು ಹೇಳಿದರು. 

'ಅವರು ಹತ್ತು ಸಾರಿ ನನಗೆ ಕರೆ ಮಾಡಿದರೂ ನಾನು ಅವರ ಕರೆಯನ್ನು ಸ್ವೀಕರಿಸುವುದಿಲ್ಲ'

"ರೈತರ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ" ಎಂದು ಪಂಜಾಬ್ ಕಿಸಾನ್ ಸಂಗಥನ್ ಖಜಾಂಚಿ ಕರ್ನಾಲ್ ಸಿಂಗ್ ಐಎಎನ್‌ಎಸ್‌ಗೆ ತಿಳಿಸಿದರು.

ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಅಧ್ಯಯನ ಮಾಡಲು ಸಮಿತಿಯನ್ನು ರಚಿಸುವ ಸರ್ಕಾರದ ಪ್ರಸ್ತಾವನೆಯನ್ನು ರೈತ ಸಂಘಗಳು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮಂಗಳವಾರ ಕರೆದಿರುವ ಮಾತುಕತೆಯ ಸಂದರ್ಭದಲ್ಲಿ ತಿರಸ್ಕರಿಸಿದ್ದಾರೆ.

ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಸೆಪ್ಟೆಂಬರ್‌ನಲ್ಲಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳಿಗೆ ಸಂಬಂಧಿಸಿದ ವಿಷಯಗಳನ್ನು ಅಧ್ಯಯನ ಮಾಡಲು ಮತ್ತು ಚರ್ಚಿಸಲು ಸಮಿತಿಯೊಂದನ್ನು ರಚಿಸಲು ಸರ್ಕಾರ ಪ್ರಸ್ತಾಪಿಸಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರೂಪ್ ಸಿಂಗ್ ಸನ್ನಾ ಐಎಎನ್‌ಎಸ್‌ಗೆ ತಿಳಿಸಿದರು.

Trending News