Farmers Protest ಬಗ್ಗೆ ಅಮೆರಿಕ ಹೇಳಿಕೆಗೆ ಭಾರತ ಪ್ರತಿಕ್ರಿಯಿಸಿದ್ದು ಹೀಗೆ

ಕೃಷಿ ಕಾನೂನುಗಳ (Agriculture Laws) ವಿರುದ್ಧ ರೈತರ ಪ್ರತಿಭಟನೆಗೆ (Farmers Protest) ಪ್ರತಿಕ್ರಿಯಿಸುವ ಮೂಲಕ ಯುನೈಟೆಡ್ ಸ್ಟೇಟ್ಸ್ ಕಾನೂನುಗಳನ್ನು ಬೆಂಬಲಿಸಿದೆ. ರೈತ ಚಳವಳಿಯ ಬಗ್ಗೆ ಅಮೆರಿಕ ನೀಡಿದ ಹೇಳಿಕೆಯ ನಂತರ ಭಾರತ ಪ್ರತಿಕ್ರಿಯಿಸಿದೆ.

Written by - Yashaswini V | Last Updated : Feb 5, 2021, 08:55 AM IST
  • ಕೃಷಿ ಕಾನೂನುಗಳ ವಿರುದ್ಧ 72 ದಿನಗಳಿಂದ ಮುಂದುವರೆದಿರುವ ರೈತರ ಪ್ರತಿಭಟನೆ
  • ಕೃಷಿ ಕಾನೂನುಗಳನ್ನು ಬೆಂಬಲಿಸಿದ ಅಮೆರಿಕ
  • ಅಮೆರಿಕದ ಹೇಳಿಕೆಗೆ ಭಾರತದ ಪ್ರತಿಕ್ರಿಯೆ
Farmers Protest ಬಗ್ಗೆ ಅಮೆರಿಕ ಹೇಳಿಕೆಗೆ ಭಾರತ ಪ್ರತಿಕ್ರಿಯಿಸಿದ್ದು ಹೀಗೆ title=
India compares Red Fort violence with Capitol Hill riots

ನವದೆಹಲಿ: ಕೃಷಿ ಕಾನೂನುಗಳ (Agriculture Laws) ವಿರುದ್ಧ ರೈತರ ಪ್ರತಿಭಟನೆ ಕಳೆದ 72 ದಿನಗಳಿಂದ ನಡೆಯುತ್ತಿದ್ದು, ಅನೇಕ ಅಂತಾರಾಷ್ಟ್ರೀಯ ಗಣ್ಯರು ಪ್ರಚಾರ ಮಾಡಲು ಯತ್ನಿಸಿದರೆ, ಇದಕ್ಕೆ ಪ್ರತಿಕ್ರಿಯೆಯಾಗಿ ಯುಎಸ್ ಪ್ರತಿಕ್ರಿಯಿಸಿದೆ. ರೈತ ಚಳವಳಿಯ ಬಗ್ಗೆ ಅಮೆರಿಕ ನೀಡಿದ ಹೇಳಿಕೆಯ ನಂತರ ಭಾರತ ಕೂಡ ತನ್ನ ಪ್ರತಿಕ್ರಿಯೆಯನ್ನು ನೀಡಿದೆ.

'ಭಾರತ ವಿವಾದ ಬಗೆಹರಿಸಲು ಪ್ರಯತ್ನಿಸುತ್ತಿದೆ' :
ಅಮೆರಿಕದ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ,  'ನಾವು ಅಮೆರಿಕದ (America) ಪ್ರತಿಕ್ರಿಯೆಯನ್ನು ನೋಡಿದ್ದೇವೆ ಮತ್ತು ಯಾವುದೇ ಹೇಳಿಕೆಯನ್ನು ಅದರ ಪೂರ್ಣ ದೃಷ್ಟಿಕೋನದಿಂದ ನೋಡಬೇಕು. ಭಾರತದಲ್ಲಿ ಕೃಷಿ ಸುಧಾರಣೆಗೆ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಯುಎಸ್ ಇಲಾಖೆ ಸಮರ್ಥಿಸಿದೆ ಎಂದು ನೀವು ಎಲ್ಲರೂ ನೋಡಿರಬೇಕು. ಯಾವುದೇ ಪ್ರತಿಭಟನೆಗೆ ಸಂಬಂಧಪಟ್ಟಂತೆ, ಭಾರತ ಸರ್ಕಾರವು ಅವರ ಪ್ರಜಾಪ್ರಭುತ್ವ ನಂಬಿಕೆಗಳ ಆಧಾರದ ಮೇಲೆ ರೈತ ಸಂಘಟನೆಗಳೊಂದಿಗೆ ಹೊಂದಾಣಿಕೆ ಮಾಡಲು ಇನ್ನೂ ಪ್ರಯತ್ನಿಸುತ್ತಿದೆ ಎಂದು ವಿವರಿಸಿದ್ದಾರೆ.

ಕೆಂಪು ಕೋಟೆಯ ಹಿಂಸಾಚಾರವನ್ನು ಕ್ಯಾಪಿಟಲ್ ಹಿಲ್ ಘಟನೆಗೆ ತಳುಕು ಹಾಕಿದ ಭಾರತ :
'ಭಾರತ ಮತ್ತು ಅಮೆರಿಕ ಎರಡೂ ಪ್ರಗತಿಪರ ಪ್ರಜಾಪ್ರಭುತ್ವಗಳು. ಐತಿಹಾಸಿಕ ಕೆಂಪು ಕೋಟೆಯ ಮೇಲಿನ ಹಿಂಸಾಚಾರ ಮತ್ತು ವಿಧ್ವಂಸಕತೆಯು ಜನವರಿ 6ರಂದು ಕ್ಯಾಪಿಟಲ್ ಹಿಲ್ ಘಟನೆಯನ್ನು ನೆನಪಿಸಿತು. ಭಾರತದಲ್ಲಿ ಇದೇ ರೀತಿಯ ಭಾವನೆಗಳನ್ನು ಹುಟ್ಟುಹಾಕಿತು, ಕ್ಯಾಪಿಟಲ್ ಹಿಲ್ ಘಟನೆಯ (Capitol Hill Violence) ಬಗ್ಗೆ ಜನವರಿ 6 ರಂದು ಅಮೆರಿಕದ ಸಂಸತ್ತು ಮಾಡಿದಂತೆ ಸ್ಥಳೀಯ ಕಾನೂನುಗಳ ಪ್ರಕಾರ ಈ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ಇದನ್ನೂ ಓದಿ - Farmers Protest: ತಂಡದ ಮೀಟಿಂಗ್ ನಲ್ಲಿ ರೈತರ ಹೋರಾಟದ ಬಗ್ಗೆ ಚರ್ಚಿಸಲಾಗಿದೆ ಎಂದ ಕೊಹ್ಲಿ

ಖಲಿಸ್ತಾನಕ್ಕೆ ಸಂಬಂಧಿಸಿದಂತೆ ಅಮೆರಿಕದಿಂದ ಸಹಾಯ :
ಇದರೊಂದಿಗೆ ಭಾರತವು ಖಲಿಸ್ತಾನಿ ಗುಂಪು ಸಿಖ್ ಫಾರ್ ಜಸ್ಟೀಸ್ (Sikh for Justice) ಮತ್ತು ಅದರ ಪ್ರತ್ಯೇಕತಾವಾದಿ ಅಭಿಯಾನ ಜನಾಭಿಪ್ರಾಯ 2020 ರ ತನಿಖೆಗಾಗಿ ಯು.ಎಸ್. ನ್ಯಾಯಾಂಗ ಇಲಾಖೆ ಸಹಾಯವನ್ನು ಕೋರಿದೆ. ರೈತರ ಪ್ರತಿಭಟನೆಯ ಖಲಿಸ್ತಾನ್ ಬಣಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ವಿದೇಶಾಂಗ ಸಚಿವಾಲಯ ಗುರುವಾರ ಈ ಮಾಹಿತಿಯನ್ನು ನೀಡಿತು.

ಕೃಷಿ ಕಾನೂನುಗಳು ಮತ್ತು ಚಳುವಳಿಗೆ ಅಮೆರಿಕದ ಪ್ರತಿಕ್ರಿಯೆ :
ಯುಎಸ್ ಆಡಳಿತವು ಗುರುವಾರ ಭಾರತೀಯ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳನ್ನು (Agriculture Laws) ಬೆಂಬಲಿಸಿದೆ ಮತ್ತು ಇದು ಭಾರತೀಯ ಮಾರುಕಟ್ಟೆಗಳ ಉಪಯುಕ್ತತೆಯನ್ನು ಹೆಚ್ಚಿಸುತ್ತದೆ. ಭಾರತದ ಮಾರುಕಟ್ಟೆಗಳ ಉಪಯುಕ್ತತೆಯನ್ನು ಸುಧಾರಿಸುವ ಮತ್ತು ಹೆಚ್ಚಿನ ಖಾಸಗಿ ವಲಯದ ಹೂಡಿಕೆಗೆ ಉತ್ತೇಜನ ನೀಡುವ ಇಂತಹ ಕ್ರಮಗಳನ್ನು ಯುಎಸ್ ಸ್ವಾಗತಿಸುತ್ತದೆ ಎಂದು ತಿಳಿಸಿದೆ. 

ಇದನ್ನೂ ಓದಿ - ಸರ್ವಾಧಿಕಾರಿಗಳ ಹೆಸರುಗಳು 'M' ನಿಂದೇಕೆ ಪ್ರಾರಂಭವಾಗುತ್ತವೆ?- ರಾಹುಲ್ ಗಾಂಧಿ

ಇದರೊಂದಿಗೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ರೈತ ಚಳವಳಿ (Farmers Protest) ಬಗ್ಗೆ ಕೂಡ ಪ್ರತಿಕ್ರಿಯಿಸಿ, ವಿವಾದವನ್ನು ಸಂವಾದದ ಮೂಲಕ ಬಗೆಹರಿಸಬೇಕು. ಶಾಂತಿಯುತ ಪ್ರತಿಭಟನೆಯು ಬಲವಾದ ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣವಾಗಿದೆ ಎಂದು ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News