ಪ್ರಯಾಗ್​ರಾಜ್: ಕುಂಭ ಮೇಳದ ದಿಗಂಬರ್ ಶಿಬಿರದಲ್ಲಿ ಅಗ್ನಿ ಅನಾಹುತ

ದಿಗಂಬರ್ ಅಖಾಡಾ ಮತ್ತು ಅದರ ಅಕ್ಕ-ಪಕ್ಕದ ಶಿಬಿರಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Last Updated : Jan 14, 2019, 01:36 PM IST
ಪ್ರಯಾಗ್​ರಾಜ್: ಕುಂಭ ಮೇಳದ ದಿಗಂಬರ್ ಶಿಬಿರದಲ್ಲಿ ಅಗ್ನಿ ಅನಾಹುತ title=

ಪ್ರಯಾಗ್​ರಾಜ್: ಪ್ರಯಾಗ್​ರಾಜ್ ನ ಸಂಗಂ ನಗರದಲ್ಲಿಲ್ಲಿರುವ ಕುಂಭ ಮೇಳದಲ್ಲಿ  ಸೋಮವಾರ ಅಗ್ನಿ ಅನಾಹುತ ಸಂಭವಿಸಿದೆ. ಇಲ್ಲಿನ ದಿಗಂಬರ್ ಅಖಾಡಾ ಮತ್ತು ಅದರ ಅಕ್ಕ-ಪಕ್ಕದ ಶಿಬಿರಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕೆನ್ನಾಲಿಗೆ ವೇಗವಾಗಿ ಸುತ್ತಮುತ್ತ ಚಾಚಿಕೊಂಡಿದೆ ಎನ್ನಲಾಗಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Pic: ANIPic: ANI

ಪೊಲೀಸ್ ಅಧೀಕ್ಷಕ (ಕುಂಭ ಮೇಳ) ಪ್ರಕಾರ, ಸದ್ಯ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಅಡುಗೆ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಬೆಂಕಿಯಿಂದ ದಿಗಂಬರ್ ಶಿಬಿರಕ್ಕೆ ಹೆಚ್ಚು ಹಾನಿಯಾಗಿದೆ. ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ತನಿಖೆ ಮುಂದುವರೆದಿದೆ. 

ಎರಡು ಸಿಲಿಂಡರ್ ಸ್ಪೋಟದಿಂದಾಗಿ ಈ ಅನಾಹುತ ಸಂಭವಿಸಿದೆ ಎನ್ನಲಾಗಿದ್ದು, ದಿಗಂಬರ್ ಅಖಾಡವನ್ನು ಸ್ಥಳಾಂತರಿಸಲಾಗಿದೆ. ಆಡಳಿತವು ಶಾಂತಿ ಕಾಪಾಡಿಕೊಳ್ಳುವಂತೆ ಜನರಿಗೆ ಮನವಿ ಮಾಡಿದೆ. ಅಗ್ನಿಶಾಮಕ ದಳದ ಹಲವು ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

Trending News