ವಿಜಯವಾಡಾ: ಹೋಟೆಲ್ ವೊಂದರಲ್ಲಿ ಭೀಕರ ಅಗ್ನಿ ಅವಘಡ, 7 Corona ರೋಗಿಗಳ ದುರ್ಮರಣ

ಆಂಧ್ರ ಪ್ರದೇಶದ ವಿಜಯವಾಡಾದಲ್ಲಿರುವ ಹೋಟೆಲ್ ವೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 7 ಕೊರೊನಾ ರೋಗಿಗಳು ಮೃತಪಟ್ಟಿದ್ದು, 10 ರೋಗಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

Updated: Aug 9, 2020 , 09:10 AM IST
ವಿಜಯವಾಡಾ: ಹೋಟೆಲ್ ವೊಂದರಲ್ಲಿ ಭೀಕರ ಅಗ್ನಿ ಅವಘಡ, 7 Corona ರೋಗಿಗಳ ದುರ್ಮರಣ

ವಿಜಯವಾಡಾ: ಆಂಧ್ರ ಪ್ರದೇಶದ ವಿಜಯವಾಡಾದಲ್ಲಿರುವ ಒಂದು ಹೋಟೆಲ್ ವೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಸ್ವ್ವರ್ಣ ಪ್ಯಾಲೇಸ್ ಹೆಸರಿನ ಈ ಹೋಟೆಲ್ ಅನ್ನು ಕೊವಿಡ್ ಫೆಸಿಲಿಟಿ ಸೆಂಟರ್ ಆಗಿ ಮಾರ್ಪಡಿಸಲಾಗಿತ್ತು ಈ ಹೋಟೆಲ್ ನಲ್ಲಿ ಒಟ್ಟು 30 ಸೊಂಕಿತರನ್ನು ಇಡಲಾಗಿತ್ತು. ಇವರಲ್ಲಿ ಒಟ್ಟು 7 ಸೊಂಕಿತರು ಮೃತಪಟ್ಟಿದ್ದು, 10 ಸೊಂಕಿತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ದಳದ ವಾಹನಗಳು ಅಗ್ನಿ ನಂದಿಸುವಲ್ಲಿ ನಿರತವಾಗಿವೆ.