ಮೇ 3 ರ ನಂತರ ಲಾಕ್ ಡೌನ್ ವಿಸ್ತರಣೆಗೆ ಕೇಂದ್ರ ಸರ್ಕಾರಕ್ಕೆ ಐದು ರಾಜ್ಯಗಳ ಮನವಿ

ಮೇ 3 ರ ನಂತರ ಲಾಕ್ ಡೌನ್ ವಿಸ್ತರಣೆ ಮಾಡುವಂತೆ ಐದು ಪ್ರಮುಖ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಜೊತೆಗೆ ದೆಹಲಿಯೂ ಕೂಡ ಲಾಕ್ ಡೌನ್ ವಿಸ್ತರಣೆಗೆ ಮನವಿ ಮಾಡಿಕೊಂಡಿದೆ.

Last Updated : Apr 26, 2020, 07:00 PM IST
ಮೇ 3 ರ ನಂತರ ಲಾಕ್ ಡೌನ್ ವಿಸ್ತರಣೆಗೆ ಕೇಂದ್ರ ಸರ್ಕಾರಕ್ಕೆ ಐದು ರಾಜ್ಯಗಳ ಮನವಿ title=
file photo

ನವದೆಹಲಿ: ಮೇ 3 ರ ನಂತರ ಲಾಕ್ ಡೌನ್ ವಿಸ್ತರಣೆ ಮಾಡುವಂತೆ ಐದು ಪ್ರಮುಖ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಜೊತೆಗೆ ದೆಹಲಿಯೂ ಕೂಡ ಲಾಕ್ ಡೌನ್ ವಿಸ್ತರಣೆಗೆ ಮನವಿ ಮಾಡಿಕೊಂಡಿದೆ.

ಈಗ ಈ ರಾಜ್ಯಗಳು ಲಾಕ್ ವಿಸ್ತರಣೆಗೆ ಮನವಿ ಮಾಡಿಕೊಂಡ ಬೆನ್ನಲೆಯಲ್ಲಿ ಕೇಂದ್ರ ಈಗ ಮತ್ತೆ ಗೊಂದಲಕ್ಕೆ ಒಳಗಾಗಿದೆ. ಆದ್ದರಿಂದ ಈಗ ಅದು ಎಲ್ಲ ರಾಜ್ಯಗಳ ಸಿಎಂ ಗಳ ಜೊತೆ ಚರ್ಚಿಸಿ ಅಂತಿಮ ನಿರ್ಧಾರಕೈಗೊಳ್ಳಲಿದೆ ಎನ್ನಲಾಗಿದೇ.ನಾಳೆ ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಸಭೆ ನಡೆಯಲಿದೆ.

ನಾಳಿನ ಸಭೆಗೂ ಮುನ್ನವೇ ಈಗಾಗಲೇ  ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳು ಪ್ರಧಾನಿ ಮೋದಿ ಅವರಿಗೆ ಮಾಡಿವೇ.  ಇನ್ನು ನಾಳೆ ನಡೆಯಲಿರುವ ಸಭೆಯಲ್ಲಿಯೂ ಕೂಡ ಲಾಕ್ ಡೌನ್ ವಿಸ್ತರಣೆ ಈ ರಾಜ್ಯಗಳು ಕಟಿಬಿಳುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸಕ್ತ ಸಂದರ್ಭದಲ್ಲಿ ಲಾಕ್ಡೌನ್ ಮುಂದುವರಿಸುವುದು ಸೂಕ್ತ ಎನ್ನಲಾಗಿದ್ದು ಅದಕ್ಕೆ ಹಂತ ಹಂತವಾಗಿ ವಿನಾಯತಿ ‌ನೀಡಬೇಕು ಎನ್ನುವ ಅಭಿಪ್ರಾಯಕ್ಕೆ ಬಂದಿವೆ ಎನ್ನಲಾಗಿದೆ.ದೇಶದ ಹಲವು ಭಾಗಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಮುಂದುವರೆಸುವುದು ಸೂಕ್ತ ಎನ್ನುವ ಅಭಿಪ್ರಾಯಕ್ಕೆ ಈ ಮೇಲಿನ ರಾಜ್ಯಗಳು ಅಭಿಪ್ರಾಯ ಪಟ್ಟಿವೆ ಎನ್ನಲಾಗಿದೆ.

ಗುಜರಾತ್, ಆಂಧ್ರಪ್ರದೇಶ , ತಮಿಳುನಾಡು, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ಇತರ ಆರು ರಾಜ್ಯಗಳು ಕೇಂದ್ರ ಸರ್ಕಾರದ ನಿರ್ದೇಶನವನ್ನು ಅನುಸರಿಸುವುದಾಗಿ ಹೇಳಿದ್ದರೆ ,ಅಸ್ಸಾಂ, ಕೇರಳ ಮತ್ತು ಬಿಹಾರ ರಾಜ್ಯಗಳು ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋ ಸಮಾವೇಶದ ನಂತರ ಅಂತಿಮ ನಿರ್ಧಾರವನ್ನುಪ್ರಕಟಿಸುವುದಾಗಿ ಹೇಳಿವೆ . ಇನ್ನೊಂದೆಡೆಗೆ ಈಗಾಗಲೇ ತೆಲಂಗಾಣ ಮೇ 7ರ ವರೆಗೂ ಲಾಕ್ಡೌನ್ ವಿಸ್ತರಿಸಿದೆ.

Trending News