ನವದೆಹಲಿ: ಆಂಧ್ರಪ್ರದೇಶದ ವಿಧಾನಸಭೆ ಮಾಜಿ ಸ್ಪೀಕರ್ ಕೊಡೆಲಾ ಶಿವ ಪ್ರಸಾದ್ ರಾವ್ ಅವರು ಹೈದರಾಬಾದ್ ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 72 ವರ್ಷದ ಶ್ರೀ ರಾವ್ ಅವರು ರಾಜ್ಯದ ವಿರೋಧ ಪಕ್ಷದ ತೆಲುಗು ದೇಶಂ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರು.
ಅವರನ್ನು ನಟ-ರಾಜಕಾರಣಿ ಬಾಲಕೃಷ್ಣ ಅವರೊಂದಿಗೆ ಸ್ಥಾಪಿಸಿದ್ದ ಬಸವತಾರಕಂ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಲ್ಲಿ ವೈದ್ಯರು ಅವರ ಸಾವನ್ನು ಖಚಿತಪಡಿಸಿದರು.
ಆಂಧ್ರಪ್ರದೇಶವನ್ನು ವಿಭಜಿಸಿದ ನಂತರ ರಾವ್ ಅವರು 2014 ರಲ್ಲಿ ಸ್ಪೀಕರ್ ಆದರು. ಆರು ಬಾರಿಯ ಶಾಸಕರಾಗಿದ್ದ ಅವರು ಐದು ಬಾರಿ ನರಸಾರೋಪೇಟೆಯಿಂದ ಮತ್ತು 2014 ರಲ್ಲಿ ಸಟ್ಟೇನಪಳ್ಳಿಯಿಂದ ಗೆದ್ದಿದ್ದಾರೆ. ಅಲ್ಲದೆ ಗೃಹ ಸಚಿವರಾಗಿ ಮತ್ತು ಪಂಚಾಯತ್ ರಾಜ್ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ರೈತರ ಕುಟುಂಬದಲ್ಲಿ ಜನಿಸಿದ ಶ್ರೀ ರಾವ್, ಗುಂಟೂರು ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದ ನಂತರ ವೈದ್ಯರಾದರು.
ಈಗ ಅವರ ನಿಧನ ತೀವ್ರ ಸಂತಾಪ ವ್ಯಕ್ತಪಡಿಸಿದ ಬಿಜೆಪಿ ವಕ್ತಾರ ಕೆ. ಕೃಷ್ಣಾ ಸಾಗರ್ ರಾವ್ 'ಮಾಜಿ ಸ್ಪೀಕರ್ ಶ್ರೀ ಕೊಡೆಲಾ ಶಿವ ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸಂಗತಿ ನಿಜಕ್ಕೂ ಆಘಾತವಾಗಿದೆ. ಈ ಹಿರಿಯ ರಾಜಕಾರಣಿಯ ದುರದೃಷ್ಟಕರ ನಿಧನಕ್ಕೆ ನಾನು ಹೃತ್ಪೂರ್ವಕ ಸಂತಾಪ ಸೂಚಿಸುತ್ತೇನೆ' ಎಂದು ಕಂಬನಿ ಮಿಡಿದಿದ್ದಾರೆ.