Former Minister Shanti Bhushan passes away: ಮಾಜಿ ಕಾನೂನು ಸಚಿವ, ಹಿರಿಯ ವಕೀಲ ಶಾಂತಿ ಭೂಷಣ್ ವಿಧಿವಶ

Former Minister Shanti Bhushan passes away: ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಅವರು 2018 ರಲ್ಲಿ 'ಮಾಸ್ಟರ್ ಆಫ್ ರೋಸ್ಟರ್' ವ್ಯವಸ್ಥೆಯನ್ನು ಬದಲಾಯಿಸುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪ್ರಕರಣಗಳನ್ನು ರೋಸ್ಟರ್ ಅಡಿಯಲ್ಲಿ ಪೀಠಕ್ಕೆ ಕಳುಹಿಸುವ ತತ್ವ ಮತ್ತು ಕಾರ್ಯವಿಧಾನವನ್ನು ನಿರ್ಧರಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

Written by - Bhavishya Shetty | Last Updated : Jan 31, 2023, 09:13 PM IST
    • ಮಾಜಿ ಕಾನೂನು ಸಚಿವ ಹಾಗೂ ಹಿರಿಯ ವಕೀಲ ಶಾಂತಿ ಭೂಷಣ್ ನಿಧನ
    • ಮೊರಾರ್ಜಿ ದೇಸಾಯಿ ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದ್ದರು.
    • ಇಂದು ದೆಹಲಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ
Former Minister Shanti Bhushan passes away: ಮಾಜಿ ಕಾನೂನು ಸಚಿವ, ಹಿರಿಯ ವಕೀಲ ಶಾಂತಿ ಭೂಷಣ್ ವಿಧಿವಶ
Shanti Bhushan

Former Minister Shanti Bhushan passes away: ಮಾಜಿ ಕಾನೂನು ಸಚಿವ ಹಾಗೂ ಹಿರಿಯ ವಕೀಲ ಶಾಂತಿ ಭೂಷಣ್ (97) ದೆಹಲಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ಮೊರಾರ್ಜಿ ದೇಸಾಯಿ ಸಚಿವಾಲಯದಲ್ಲಿ 1977 ರಿಂದ 1979 ರವರೆಗೆ ಭಾರತದ ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿ

ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಅವರು 2018 ರಲ್ಲಿ 'ಮಾಸ್ಟರ್ ಆಫ್ ರೋಸ್ಟರ್' ವ್ಯವಸ್ಥೆಯನ್ನು ಬದಲಾಯಿಸುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪ್ರಕರಣಗಳನ್ನು ರೋಸ್ಟರ್ ಅಡಿಯಲ್ಲಿ ಪೀಠಕ್ಕೆ ಕಳುಹಿಸುವ ತತ್ವ ಮತ್ತು ಕಾರ್ಯವಿಧಾನವನ್ನು ನಿರ್ಧರಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ಶಾಂತಿ ಭೂಷಣ್ ತಮ್ಮ ಪುತ್ರ ಹಾಗೂ ವಕೀಲ ಪ್ರಶಾಂತ್ ಭೂಷಣ್ ಮೂಲಕ ಈ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ಅಸಾರಾಂ ಬಾಪು ದೋಷಿ, ಕೋರ್ಟ್ ಮಹತ್ವದ ತೀರ್ಪು

ಶಾಂತಿ ಭೂಷಣ್ ಅವರು ಕಾಂಗ್ರೆಸ್ (ಒ) ಪಕ್ಷದ ಸಕ್ರಿಯ ಸದಸ್ಯರಾಗಿದ್ದರು. ನಂತರ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಅವರು 14 ಜುಲೈ 1977ರಿಂದ 2 ಏಪ್ರಿಲ್ 1980 ರವರೆಗೆ ರಾಜ್ಯಸಭೆಯ ಸದಸ್ಯರೂ ಆಗಿದ್ದರು. 1980 ರಲ್ಲಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. 1986 ರಲ್ಲಿ, ಭಾರತೀಯ ಜನತಾ ಪಕ್ಷವು ಚುನಾವಣಾ ಅರ್ಜಿಯ ಬಗ್ಗೆ ಅವರ ಸಲಹೆಯನ್ನು ಸ್ವೀಕರಿಸದಿದ್ದಾಗ, ಅವರು ಪಕ್ಷಕ್ಕೆ ರಾಜೀನಾಮೆ ನೀಡಿದರು. ಶಾಂತಿ ಭೂಷಣ್ ಮತ್ತು ಅವರ ಪುತ್ರ ಪ್ರಶಾಂತ್ ಭೂಷಣ್ ಅಣ್ಣಾ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News