ಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆ

ರಾಜಸ್ಥಾನ ವಿಧಾನಸಭೆಯಲ್ಲಿ ಸಂಖ್ಯೆಯ ಕೊರತೆಯಿಂದಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ)ವು ಯಾವುದೇ ಅಭ್ಯರ್ಥಿಯನ್ನು ನೇಮಿಸಲಿಲ್ಲವಾದ್ದರಿಂದ, ನಾಮಪತ್ರಗಳನ್ನು ಹಿಂಪಡೆಯಲು ನಿಗದಿತ ಸಮಯದ ನಂತರ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರಾಜ್ಯಸಭೆಗೆ ಚುನಾಯಿತರಾದರು.

Last Updated : Aug 20, 2019, 09:06 AM IST
ಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆ title=
Photo Courtesy: IANS

ಜೈಪುರ: ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರು  ಸೋಮವಾರ ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಜಸ್ಥಾನ ವಿಧಾನಸಭೆಯಲ್ಲಿ ಸಂಖ್ಯೆಯ ಕೊರತೆಯಿಂದಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ)ವು ಯಾವುದೇ ಅಭ್ಯರ್ಥಿಯನ್ನು ನೇಮಿಸಲಿಲ್ಲವಾದ್ದರಿಂದ, ನಾಮಪತ್ರಗಳನ್ನು ಹಿಂಪಡೆಯಲು ನಿಗದಿತ ಸಮಯದ ನಂತರ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರಾಜ್ಯಸಭೆಗೆ ಅವಿರೋಧವಾಗಿ ಚುನಾಯಿತರಾದರು.

ಡಾ. ಮನಮೋಹನ್ ಸಿಂಗ್ ಅವರ ಪರವಾಗಿ ಮುಖ್ಯ ವಿಪ್ ಮಹೇಶ್ ಜೋಶಿ ಚುನಾವಣಾ ಪ್ರಮಾಣಪತ್ರವನ್ನು ಸ್ವೀಕರಿಸಿದರು. 

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ವಿಧಾನಸಭೆ ಸ್ಪೀಕರ್ ಸಿ.ಪಿ. ಜೋಶಿ ಅವರು ಡಾ. ಮನಮೋಹನ್ ಸಿಂಗ್ ಅವರನ್ನು ಅಭಿನಂದಿಸಿದರು.

"ಮಾಜಿ ಪ್ರಧಾನಿ ಡಾ. #ಮನಮೋಹನ್ ಸಿಂಗ್ ಜಿ ಅವರನ್ನು # ರಾಜಸ್ಥಾನದಿಂದ # ರಾಜ್ಯಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ನಾನು ಅಭಿನಂದಿಸುತ್ತೇನೆ. ಡಾ. ಸಿಂಗ್ ಅವರ ಚುನಾವಣೆಯು ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಅವರ ಅಪಾರ ಜ್ಞಾನ ಮತ್ತು ಶ್ರೀಮಂತ ಅನುಭವವು ರಾಜಸ್ಥಾನದ ಜನರಿಗೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ" ಎಂದು ಅಶೋಕ್ ಗೆಹ್ಲೋಟ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.

"ರಾಜ್ಯಸಭಾ ಸಂಸದರಾಗಿ ಅವಿರೋಧವಾಗಿ ಆಯ್ಕೆಯಾದ ವಿಶ್ವಪ್ರಸಿದ್ಧ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರಿಗೆ ಅಭಿನಂದನೆಗಳು" ಎಂದು ಸ್ಪೀಕರ್  ಸಿ.ಪಿ. ಜೋಶಿ ಟ್ವೀಟ್ ಮಾಡಿದ್ದಾರೆ.

ಮನಮೋಹನ್ ಸಿಂಗ್ ಅವರ ಚುನಾವಣೆಯೊಂದಿಗೆ, ಕಾಂಗ್ರೆಸ್ ಈಗ ರಾಜಸ್ಥಾನ್ ರಾಜ್ಯದಿಂದ ಒಬ್ಬ ಸಂಸದರನ್ನು ಹೊಂದಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ಮದನ್ ಲಾಲ್ ಸೈನಿ ಅವರ ನಿಧನದ ನಂತರ ರಾಜ್ಯಸಭೆಯ ಒಂದು ಸ್ಥಾನ ತೆರವಾಗಿತ್ತು.
 

Trending News