ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಇನ್ನಿಲ್ಲ

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ (89) ಇಂದು ಸೆಪ್ಸಿಸ್ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಲಕ್ನೋದಲ್ಲಿ ನಿಧನರಾದರು.ಅವರು ಜುಲೈ 4 ರಿಂದ ಉತ್ತರ ಪ್ರದೇಶದ ರಾಜಧಾನಿಯ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಸ್‌ಜಿಪಿಜಿಐಎಂಎಸ್) ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Written by - Zee Kannada News Desk | Last Updated : Aug 21, 2021, 11:52 PM IST
  • ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ (89) ಇಂದು ಸೆಪ್ಸಿಸ್ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಲಕ್ನೋದಲ್ಲಿ ನಿಧನರಾದರು.
  • ಅವರು ಜುಲೈ 4 ರಿಂದ ಉತ್ತರ ಪ್ರದೇಶದ ರಾಜಧಾನಿಯ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಸ್‌ಜಿಪಿಜಿಐಎಂಎಸ್) ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಇನ್ನಿಲ್ಲ  title=
file photo

ನವದೆಹಲಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ (89) ಇಂದು ಸೆಪ್ಸಿಸ್ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಲಕ್ನೋದಲ್ಲಿ ನಿಧನರಾದರು.ಅವರು ಜುಲೈ 4 ರಿಂದ ಉತ್ತರ ಪ್ರದೇಶದ ರಾಜಧಾನಿಯ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಸ್‌ಜಿಪಿಜಿಐಎಂಎಸ್) ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕಲ್ಯಾಣ್ ಸಿಂಗ್ (Kalyan Singh) ಅವರು ಸಮಾಜದ ಶೋಷಿತ ಸಮುದಾಯಗಳಿಗೆ ಧ್ವನಿಯಾಗಿದ್ದರು.ರೈತರು, ಯುವಕರು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷವಾಗಿ ಶ್ರಮಿಸಿದ್ದರು.ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಶ್ರೀ ಸಿಂಗ್ ಅವರನ್ನು ಭೇಟಿ ಮಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಅವರ ಸಾವನ್ನು ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದರು.ಅವರ ಸರ್ಕಾರವು ಮೂರು ದಿನಗಳ ಶೋಕಾಚರಣೆ ಮತ್ತು ಆಗಸ್ಟ್ 23 ರಂದು ರಜೆಯನ್ನು ಘೋಷಿಸಿದ್ದು, ಸಿಂಗ್ ಅವರ ಪಾರ್ಥಿವ ಶರೀರವನ್ನು ದಹನ ಮಾಡಲಾಗುತ್ತದೆ.

ಇದನ್ನೂ ಓದಿ: Kalyan Singh : UP ಮಾಜಿ ಸಿಎಂ ಸಾವಿನ ವದಂತಿಗಳು : ವೈದ್ಯಕೀಯ ಬುಲೆಟಿನ್ ಹೊರಡಿಸಿದ SGPGI

ಕಲ್ಯಾಣ್ ಸಿಂಗ್ ಅವರ ನಿಧನಕ್ಕೆ ರಾಷ್ಟ್ರಪತಿ ಕೊವಿಂದ್ ಹಾಗೂ ಪ್ರಧಾನಿ ಮೋದಿ (Narendra Modi) ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕಲ್ಯಾಣ್ ಸಿಂಗ್ ಜೂನ್ 1991 ರಿಂದ ಡಿಸೆಂಬರ್ 1992 ಮತ್ತು ಸೆಪ್ಟೆಂಬರ್ 1997 ರಿಂದ ನವೆಂಬರ್ 1999 ವರೆಗೆ ಎರಡು ಬಾರಿ  ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು,ಅವರು 2014 ಮತ್ತು 2019 ರ ನಡುವೆ ರಾಜಸ್ಥಾನದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದರು.

ಮುಖ್ಯಮಂತ್ರಿಯಾಗಿ ಅವರ ಮೊದಲ ಅವಧಿಯು ಡಿಸೆಂಬರ್ 6, 1992 ರಂದು ಅಯೋಧ್ಯೆಯಲ್ಲಿನ ವಿವಾದಿತ ಬಾಬ್ರಿ ಮಸೀದಿ ಧ್ವಂಸವಾಯಿತು. ಈ ಘಟನೆ ನಡೆದ ತಕ್ಷಣವೇ ಕಲ್ಯಾಣ್ ಸಿಂಗ್ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಕೂಡ ಅದೇ ದಿನ ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಿದರು.

ಎಲ್‌ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರಂತಹ ಇತರ ಬಿಜೆಪಿ ಧುರೀಣರ ಜೊತೆಯಲ್ಲಿ, ಶ್ರೀ ಸಿಂಗ್ ಅವರ ಮೇಲೆ ಈ ಘಟನೆಯ ಪಿತೂರಿಯ ಆರೋಪ ಹೊರಿಸಲಾಯಿತು.ಕಳೆದ ವರ್ಷ, ಲಕ್ನೋ ನ್ಯಾಯಾಲಯವು ಪ್ರಕರಣದಲ್ಲಿ ಶ್ರೀ ಸಿಂಗ್ ಮತ್ತು ಇತರರನ್ನು ಖುಲಾಸೆಗೊಳಿಸಿತು. 2009 ರಲ್ಲಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ಅವರು ಮಸೀದಿ ಧ್ವಂಸದ ಹಿಂದೆ ತಮ್ಮ ಯಾವುದೇ ಪಿತೂರಿ ಇಲ್ಲ ಎಂದು ಅವರು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದರು.

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರ ಮಾಸಿಕ ವೇತನ 30,000 ರೂ.ವರೆಗೆ ಹೆಚ್ಚಳ!

"ಯಾವುದೇ ಪಿತೂರಿಯೂ ಇಲ್ಲ. ನೂರಾರು ವರ್ಷಗಳಿಂದ ಅವರ ಆಕಾಂಕ್ಷೆಗಳನ್ನು ಬಲವಂತವಾಗಿ ಹತ್ತಿಕ್ಕಿದ ಕೋಟ್ಯಂತರ ಹಿಂದೂಗಳ ಭಾವನೆಗಳ ಹೊರಹೊಮ್ಮುವಿಕೆಯಾಗಿದೆ. ನಾವು ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದೇವು" ಎಂದು ಅವರು ಹೇಳಿದರು.

"ಅದರ ಹೊರತಾಗಿಯೂ ಮಸಿದಿ ಧ್ವಂಸವಾಯಿತು ಎಂಬುದು ನಿಜ. ಕೆಲವೊಮ್ಮೆ ಭದ್ರತೆ ಹೊಂದಾಣಿಕೆಯಾಗುವುದಿಲ್ಲ ಎಂದು ಮಾತ್ರ ನಾನು ಹೇಳಬಲ್ಲೆ. ಏನಾಗಿದ್ದರೂ ನಾನು ಪ್ರಬಲ ಮುಖ್ಯಮಂತ್ರಿಯಾಗಿದ್ದೆ. ಯಾವುದೇ ಗುಂಡು ಹಾರಿಸುವುದಿಲ್ಲ ಎಂದು ನಾನು ಸ್ಪಷ್ಟಪಡಿಸಿದ್ದೆ.ಆಗ ನಾನು ಗುಂಡಿನ ದಾಳಿಗೆ ಆದೇಶಿಸಿದ್ದರೆ ಸಾವಿರಾರು ಜನರು ಸಾಯುತ್ತಿದ್ದರು" ಎಂದು ಅವರು ಹೇಳಿದ್ದರು.

ಉತ್ತರ ಪ್ರದೇಶದ ಅಲಿಗಡ್ ಜಿಲ್ಲೆಯ ಅತ್ರೌಲಿ ಪಟ್ಟಣದಲ್ಲಿ ಜನಿಸಿದ ಅವರು ಮೊದಲು 1967 ರಲ್ಲಿ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು.

ಇದನ್ನೂ ಓದಿ-EPFO- ಆಧಾರ್ ಲಿಂಕ್ Alert! ಈ ದಿನಾಂಕದ ಒಳಗೆ ಈ ದಾಖಲೆಗಳನ್ನು ಲಿಂಕ್ ಮಾಡಿ! ಹೇಗೆ ಇಲ್ಲಿದೆ ನೋಡಿ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News