ನಾಳೆಯಿಂದ ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ

ಅಕ್ಟೋಬರ್ 29 ರಿಂದ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಬಸ್ಸುಗಳು ಮತ್ತು ಕ್ಲಸ್ಟರ್ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಬಹುದಾಗಿದೆ. ಆ ಮೂಲಕ ಕೇಜ್ರಿವಾಲ್ ಸರ್ಕಾರ ಈಗ ಮಹಿಳೆಯರಿಗೆ ದೀಪಾವಳಿ ಹಬ್ಬದ ಗಿಫ್ಟ್ ನೀಡಿದಂತಾಗಿದೆ.

Last Updated : Oct 28, 2019, 02:38 PM IST
ನಾಳೆಯಿಂದ ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ   title=

ನವದೆಹಲಿ: ಅಕ್ಟೋಬರ್ 29 ರಿಂದ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಬಸ್ಸುಗಳು ಮತ್ತು ಕ್ಲಸ್ಟರ್ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಬಹುದಾಗಿದೆ. ಆ ಮೂಲಕ ಕೇಜ್ರಿವಾಲ್ ಸರ್ಕಾರ ಈಗ ಮಹಿಳೆಯರಿಗೆ ದೀಪಾವಳಿ ಹಬ್ಬದ ಗಿಫ್ಟ್ ನೀಡಿದಂತಾಗಿದೆ.

ಬಸ್ ಗಳಲ್ಲಿನ ಸುರಕ್ಷತಾ ವ್ಯವಸ್ಥೆ ಕುರಿತಾಗಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ' ಮಹಿಳೆಯರ ಸುರಕ್ಷತೆಗಾಗಿ ನಾಳೆಯಿಂದ ದೆಹಲಿಯ ಎಲ್ಲಾ ಬಸ್‌ಗಳಲ್ಲಿ ಬಸ್ ಮಾರ್ಷಲ್‌ಗಳನ್ನು ನಿಯೋಜಿಸಲಾಗುವುದು. ಇದಕ್ಕಾಗಿ 13,000 ಬಸ್ ಮಾರ್ಷಲ್‌ಗಳನ್ನು ನೇಮಕ ಮಾಡಲಾಗಿದೆ' ಎಂದು ತಿಳಿಸಿದರು.

ಆಗಸ್ಟ್ 29 ರಂದು ದೆಹಲಿಯ ರಾಜ್ಯ ವಿಧಾನಸಭಾ ಚುನಾವಣೆಗೆ ಹಲವು ತಿಂಗಳುಗಳ ಮೊದಲು ವಿಧಾನಸಭೆ ಅಧಿವೇಶನದಲ್ಲಿ ದೆಹಲಿ ಸಚಿವ ಸಂಪುಟ ರಾಜಧಾನಿಯಲ್ಲಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಅನುಮೋದನೆ ನೀಡಿತ್ತು. ಇದಕ್ಕೆ ಪೂರಕವಾಗಿ ಸರ್ಕಾರ ಸಾರಿಗೆ ಇಲಾಖೆಗೆ 9 479 ಕೋಟಿ ಪೂರಕ ಅನುದಾನ ಅನುಮೋದಿಸಿತ್ತು. ಇದರಲ್ಲಿ ದೆಹಲಿ ಮೆಟ್ರೊದಲ್ಲಿ ಮತ್ತು ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಕ್ರಮವಾಗಿ 140 ಕೋಟಿ ರೂ. ಮತ್ತು 150 ಕೋಟಿ ರೂ. ಸಹಾಯಧನಕ್ಕೆ ವಿಧಾನಸಭೆ ಅನುಮೋದನೆ ನೀಡಿದೆ.

Trending News