ದೇಶಾದ್ಯಂತ ಜಾರಿಗೆ ಬರಲಿದೆ ESI ಯೋಜನೆ : ಏಪ್ರಿಲ್ 1ರಿಂದ ಪ್ರತಿ ಜಿಲ್ಲೆಗಳಲ್ಲೂ ಸೇವೆ ಲಭ್ಯ

ಏಪ್ರಿಲ್ ಒಂದರಿಂದ ದೇಶಾದ್ಯಂತ ಇಎಸ್ಐ ಸೇವೆ ಜಾರಿಗೆಬರಲಿದೆ. ದೇಶದ ಎಲ್ಲಾ ಜಿಲ್ಲೆಗಳಲ್ಲಿ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಹೊಸ ಆಸ್ಪತ್ರೆಗಳನ್ನು ಪ್ರಾರಂಭಿಸಲಾಗುವುದು ಮತ್ತು ಹಳೆಯ ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು.

Written by - Ranjitha R K | Last Updated : Jan 28, 2021, 04:50 PM IST
  • ಇಎಸ್‌ಐ ಕಾರ್ಡ್ ಹೊಂದಿದವರಿಗೊಂದು ಶುಭ ಸುದ್ದಿ
  • ಏಪ್ರಿಲ್ ಒಂದರಿಂದ ದೇಶಾದ್ಯಂತ ಇಎಸ್ಐ ಸೇವೆ ಜಾರಿಗೆ
  • ಪ್ರತೀ ಜಿಲ್ಲೆಗಳಲ್ಲೂ ಇನ್ನು ಮುಂದೆ ಸೇವೆ ಲಭ್ಯ
ದೇಶಾದ್ಯಂತ ಜಾರಿಗೆ ಬರಲಿದೆ ESI ಯೋಜನೆ : ಏಪ್ರಿಲ್ 1ರಿಂದ ಪ್ರತಿ ಜಿಲ್ಲೆಗಳಲ್ಲೂ ಸೇವೆ ಲಭ್ಯ title=
ಏಪ್ರಿಲ್ ಒಂದರಿಂದ ದೇಶಾದ್ಯಂತ ಇಎಸ್ಐ ಸೇವೆ ಜಾರಿಗೆ (filephoto)

ದೆಹಲಿ:  ಇಎಸ್‌ಐ ಕಾರ್ಡ್ (ESI) ಹೊಂದಿದವರಿಗೊಂದು ಶುಭ ಸುದ್ದಿಯಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಇಎಸ್ಐ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇನ್ನು ದೇಶದ  ಪ್ರತಿಯೊಂದು ಜಿಲ್ಲೆಯಲ್ಲಿಯೂ ಇಎಸ್ಐ ಸೇವೆಯನ್ನು ಪಡೆಯಬಹುದಾಗಿದೆ.  ಏಪ್ರಿಲ್ ಒಂದರಿಂದ ದೇಶಾದ್ಯಂತ ಇಎಸ್ಐ ಸೇವೆ ಜಾರಿಗೆಬರಲಿದೆ.

ದೇಶದ ಎಲ್ಲಾ 735 ಜಿಲ್ಲೆಗಳಲ್ಲಿ  ಇಎಸ್ಐಸಿ ಯೋಜನೆ ಲಭ್ಯ:
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಜೊತೆಗಿನ ಒಪ್ಪಂದದ ಪ್ರಕಾರ,  ಇಎಸ್ಐಸಿ ಫಲಾನುಭವಿಗಳು ಇಎಸ್ಐ (ESI) ಯೋಜನೆಯಡಿ ದೇಶದ ಎಲ್ಲಾ 735 ಜಿಲ್ಲೆಗಳಲ್ಲಿ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಬುಧವಾರ ನಡೆದ ಸಭೆಯಲ್ಲಿ ABPMJAY ಅಡಿಯಲ್ಲಿ ನಿರ್ವಹಣೆಗೆ ಉದ್ದೇಶಿತ ಬಜೆಟ್ (Budget) ಅನ್ನು ಸ್ಥಾಯಿ ಸಮಿತಿ ಅನುಮೋದಿಸಿದೆ ಎಂದು ಇಎಸ್ಐಸಿಯ (ESIC) ಸ್ಥಾಯಿ ಸಮಿತಿಯ ಸದಸ್ಯ ಎಸ್ಪಿ ತಿವಾರಿ ಹೇಳಿದ್ದಾರೆ. ಇದರೊಂದಿಗೆ ವಿಮೆ ಮಾಡಿದ ವ್ಯಕ್ತಿಗಳು 2021 ಏಪ್ರಿಲ್ 1 ರಿಂದ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಹೊಸ ಆಸ್ಪತ್ರೆಗಳನ್ನು (Hospital) ಪ್ರಾರಂಭಿಸಲಾಗುವುದು ಮತ್ತು ಹಳೆಯ ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು.

ಇದನ್ನೂ ಓದಿ : ಈ ರಾಜ್ಯದಲ್ಲಿ ಇನ್ನು ಮುಂದೆ ಖಾಸಗಿ ವಲಯದ ಉದ್ಯೋಗಳಲ್ಲಿ ಸ್ಥಳೀಯರಿಗೆ ಶೇ 75 ರಷ್ಟು ಮೀಸಲಾತಿ

ಸದ್ಯ ಇಎಸ್‌ಐನ ಯೋಜನೆಯ ಸ್ಥಿತಿ ಹೀಗಿದೆ : 
ಏಪ್ರಿಲ್ 1 ರಿಂದ ಫಲಾನುಭವಿಗಳು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಆರೋಗ್ಯ (Health) ಸಂಬಂಧಿತ ಸೇವೆಗಳನ್ನು ಪಡೆಯಬಹುದಾಗಿದೆ. ಪ್ರಸ್ತುತ, ಈ ಸೌಲಭ್ಯವು ದೇಶದ 387 ಜಿಲ್ಲೆಗಳಲ್ಲಿ ಮಾತ್ರ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಇದಲ್ಲದೆ, 187 ಜಿಲ್ಲೆಗಳಲ್ಲಿ ಭಾಗಶಃ ಸೇವೆಗಳು ಲಭ್ಯವಿದ್ದರೆ, 161 ಜಿಲ್ಲೆಗಳಲ್ಲಿ ಇಎಸ್ಐಸಿ ಸದಸ್ಯರಿಗೆ ಯಾವುದೇ ಆರೋಗ್ಯ ಸೇವೆ ದೊರೆಯುವುದಿಲ್ಲ.

ಯಾರು ಇಎಸ್ಐ ಸೇವೆ ಪಡೆಯಬಹುದು?
ಪ್ರತಿ ತಿಂಗಳು, 21, ಸಾವಿರ ಅಥವಾ ಅದಕ್ಕಿಂತ ಕಡಿಮೆ ಸಂಬಳ (Salary) ಹೊಂದಿರುವ ಜನರು ಕೈಗಾರಿಕಾ ಕಾರ್ಮಿಕರ ಇಎಸ್ಐಸಿ ಯೋಜನೆಯಡಿ ಬರುತ್ತಾರೆ. ಪ್ರತಿ ತಿಂಗಳು ಅವರ ಸಂಬಳದ ಒಂದು ಭಾಗವನ್ನು ಕಡಿತಗೊಳಿಸಲಾಗುತ್ತದೆ. ಪ್ರತಿ ತಿಂಗಳು ಕಾರ್ಮಿಕರ ವೇತನದಿಂದ ಶೇಕಡಾ 0.75 ಮತ್ತು ಉದ್ಯೋಗದಾತರಿಂದ ತಿಂಗಳಿಗೆ 3.25 ಶೇಕಡಾರಷ್ಟು  ಇಎಸ್ಐ ಖಾತೆಗೆ ನಿಡಲಾಗುತ್ತದೆ. ಅಂದರೆ, ಒಟ್ಟಾರೆಯಾಗಿ, ವ್ಯಕ್ತಿಯ ಸಂಬಳದ 4% ಇಎಸ್ಐಸಿ ಖಾತೆಗೆ ನೀಡಲಾಗುತ್ತದೆ.

ಇದನ್ನೂ ಓದಿ : New Guidelines: ಕೇಂದ್ರ ಸರ್ಕಾರದ ಹೊಸ ಗೈಡ್‌ಲೈನ್ಸ್: 100 % ಥೇಟರ್ ಆಸನ ಭರ್ತಿಗೆ ಅನುಮತಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News