ನವದೆಹಲಿ: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಲವು ತಿಂಗಳ ಕಾಲ ಚಿತ್ರಮಂದಿರಗಳು ಬಾಗಿಲು ಹಾಕಿದ್ದವು. ಆನಂತರ ಸಿನಿಮಾ ಮಂದಿರಗಳನ್ನು ತೆರೆಯಲು ಅವಕಾಶ ಸಿಕ್ಕಿತ್ತು. ಆದರೆ, ಶೇ.50 ಆಸನ ಭರ್ತಿಗೆ ಅವಕಾಶ ನೀಡಲಾಗಿತ್ತು. ಇದರಿಂದ ಸಹಜವಾಗಿಯೇ ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಪಕರಿಗೆ ಹಾಗೂ ಚಿತ್ರಮಂದಿರದ ಮಾಲೀಕರಿಗೆ ಹೊರೆಯಾಗಿತ್ತು. ಆದರೆ, ಕೊರೊನಾ ನಿಯಂತ್ರಣಕ್ಕೆ ಇದು ಅವಶ್ಯಕವಾಗಿತ್ತು. ಇದೀಗ ಶೇ.50 ಆಸನ ಭರ್ತಿ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಹೆಚ್ಚುವರಿ ಆಸನಗಳನ್ನು ಬಳಸಿಕೊಂಡು ಸಿನಿಮಾ ಪ್ರದರ್ಶನ ಮಾಡಬಹುದು ಎಂದು ಕೇಂದ್ರ ಸರ್ಕಾರದ ಗೈಡ್‌ಲೈನ್ಸ್ ರಿಲೀಸ್ ಮಾಡಿದೆ.
ಮಾರ್ಗಸೂಚಿಯಲ್ಲಿ ಹೊಸ ಬದಲಾವಣೆ: ಕೇಂದ್ರ ಗೃಹ ಸಚಿವಾಲಯವು ಇದುವರೆಗೂ ಇದ್ದ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದ್ದು, ಚಿತ್ರಮಂದಿರ(Cinema Theatre)ಗಳಲ್ಲಿ ಶೇ.50ರಷ್ಟು ಆಸನ ಭರ್ತಿ ಮಾಡಬೇಕು ಎಂಬ ನಿಯಮವನ್ನು ಹಿಂಪಡೆದಿದೆ. ಹೆಚ್ಚುವರಿ ಆಸನಗಳನ್ನು ಭರ್ತಿ ಮಾಡಿ, ಸಿನಿಮಾ ಪ್ರದರ್ಶನ ಮಾಡಬಹುದು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ. ಅಲ್ಲದೆ, ಲಾಕ್‌ಡೌನ್ ಆರಂಭವಾದ ದಿನದಿಂದಲೂ ಸಾರ್ವಜನಿಕ ಈಜುಕೋಳಗಳನ್ನು ಬಂದ್ ಮಾಡಲಾಗಿತ್ತು. ಇದೀಗ ಅದಕ್ಕೂ ಕೂಡ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಅಗತ್ಯ ಮುಂಜಾಗ್ರತ ಕ್ರಮಗಳೊಂದಿಗೆ ಓಪನ್ ಮಾಡುವುದಕ್ಕೆ ಅನುವು ಮಾಡಿಕೊಟ್ಟಿದೆ. ಫೆ.1ರಿಂದ ಈ ಮಾರ್ಗಸೂಚಿ ಜಾರಿಗೆ ಬರಲಿದೆ.
Sardar VM Singh: ಟ್ರ್ಯಾಕ್ಟರ್ ಪರೇಡ್ ಹಿಂಸಾಚಾರ: ತಕ್ಷಣದಿಂದಲೇ ರೈತರ ಪ್ರತಿಭಟನೆಯಿಂದ ಹಿಂದಕ್ಕೆ!?
ಮಾಸ್ಟರ್‌ಗೆ ಸಿಕ್ಕಿರಲಿಲ್ಲ ಈ ಅವಕಾಶ: ಜನವರಿ 13ರಂದು ವಿಜಯ್ ನಟನೆಯ ಮಾಸ್ಟರ್ ಸಿನಿಮಾ ತೆರೆಕಂಡಿತ್ತು. ಆ ಸಲುವಾಗಿ ಚಿತ್ರಮಂದಿರಗಳಲ್ಲಿ ಶೇ.100 ಆಸನ ಭರ್ತಿಗೆ ಅವಕಾಶ ಮಾಡಿಕೊಡುವಂತೆ ತಮಿಳುನಾಡು ಸಿಎಂ ಕೆ.ಪಳನಿಸ್ವಾಮಿ ಅವರ ಬಳಿ ವಿಜಯ್ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಸ್ಪಂದಿಸಿದ ಅವರು ಶೇ.100 ಆಸನ ಭರ್ತಿಗೆ ಅವಕಾಶ ನೀಡಿದ್ದರು. ಆದರೆ, ಕೇಂದ್ರ ಸರ್ಕಾರ ಆದೇಶವನ್ನು ರದ್ದು ಮಾಡಿತ್ತು. ಶೇ.50 ಆಸನ ಭರ್ತಿಗೆ ಮಾತ್ರ ಅವಕಾಶ ನೀಡಿತ್ತು. ಇಂದಿಗೂ 'ಮಾಸ್ಟರ್' ಚಿತ್ರ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದೆ. ಜನವರಿ 29ರಿಂದ ಈ ಸಿನಿಮಾ ಓಟಿಟಿಯಲ್ಲಿ ಪ್ರದರ್ಶನವಾಗುವುದರಿಂದ, ಸರ್ಕಾರದ ಈ ಹೊಸ ಆದೇಶದಿಂದ 'ಮಾಸ್ಟರ್'ಗೆ ಹೆಚ್ಚಿನ ಲಾಭವಾಗುವುದು ಅನುಮಾನ ಎನ್ನಲಾಗಿದೆ.
Tractor Parade ಹಿಂಸಾಚಾರದ ಬಳಿಕ 300 ಟ್ವಿಟರ್ ಅಕೌಂಟ್ ಸಸ್ಪೆಂಡ್, ಟ್ರೆಂಡಿಂಗ್ ನಿಯಮದಲ್ಲೂ ಬದಲಾವಣೆ
ಸ್ಟಾರ್ ಸಿನಿಮಾಗಳಿಗೆ ದೊಡ್ಡ ಲಾಭ: ಸುದೀರ್ಘ ಒಂದು ವರ್ಷದ ನಂತರ ಕನ್ನಡ ಚಿತ್ರರಂಗ ಟ್ರ್ಯಾಕ್‌ಗೆ ಮರಳಿದೆ. ಸಾಲು ಸಾಲು ಸ್ಟಾರ್ ಸಿನಿಮಾಗಳು ರಿಲೀಸ್ ಡೇಟ್ ಘೋಷಣೆ ಮಾಡಿವೆ. ಜ.29ರಂದು ಅನೀಶ್ ನಟನೆಯ 'ರಾಮಾರ್ಜುನ' ತೆರೆಕಾಣುತ್ತಿದೆ. ಆನಂತರ ಸತತವಾಗಿ ಮೇ ಅಂತ್ಯದವರೆಗೂ ಸ್ಟಾರ್ ಸಿನಿಮಾಗಳಿಗೆ ದಿನಾಂಕಗಳು ಬುಕ್ ಆಗಿವೆ. ಕೇಂದ್ರ ಸರ್ಕಾರದ ಈ ಹೊಸ ಮಾರ್ಗಸೂಚಿಯಿಂದ ನಿರ್ಮಾಪಕರು ನಿಟ್ಟುಸಿರು ಬಿಡುವಂತಾಗಿದೆ.
'ಬಟ್ಟೆ ಬಿಚ್ಚದೆ ಎದೆಗೆ ಕೈಹಾಕುವುದು ಲೈಂಗಿಕ ಕಿರುಕುಳ ಅಲ್ಲ' , HC ತೀರ್ಪಿಗೆ ಸುಪ್ರೀಂ ತಡೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.