ದೀಪಾವಳಿ ಹೊತ್ತಿಗೆ ಪೆಟ್ರೋಲ್ ದರ ಕಡಿಮೆಯಾಗುವ ಸಾಧ್ಯತೆ- ಧರ್ಮೇಂದ್ರ ಪ್ರಧಾನ್

ಇತ್ತೀಚಿಗೆ ದೈನಂದಿನ ತೈಲ ದರದ ಪರಿಷ್ಕರಣೆಯ ನಂತರ ವಿರೋಧ ಪಕ್ಷಗಳಿಂದ ಬೆಲೆ ಏರಿಕೆ ಕುರಿತಂತೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

Last Updated : Sep 19, 2017, 12:39 PM IST
ದೀಪಾವಳಿ ಹೊತ್ತಿಗೆ ಪೆಟ್ರೋಲ್ ದರ ಕಡಿಮೆಯಾಗುವ ಸಾಧ್ಯತೆ- ಧರ್ಮೇಂದ್ರ ಪ್ರಧಾನ್ title=

ಅಮೃತಸರ: ಮುಂದಿನ ತಿಂಗಳು ದೀಪಾವಳಿಯ ಹೊತ್ತಿಗೆ ತೈಲ ಬೆಲೆ ಇಳಿಕೆಯಾಗಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ ತಿಳಿಸಿದ್ದಾರೆ.

ಇತ್ತೀಚಿಗೆ ಸರ್ಕಾರವು ದೈನಂದಿನ ದರ ಪರಿಷ್ಕರಣೆಯ ಕಾರ್ಯವಿಧಾನವನ್ನು ಪರಿಚಯಿಸಿದ ನಂತರ ತೈಲ ಬೆಳೆಗಳ ತೀವ್ರ ಏರಿಕೆಯಿಂದಾಗಿ ವಿರೋಧ ಪಕ್ಷಗಳ ತೀವ್ರವಾದ ಟೀಕೆಗೊಳಗಾಗಿತ್ತು.

ಇದರ ಬೆನ್ನಲ್ಲೇ "ಇಂಧನ ಬೆಲೆಗಳು ದೀಪಾವಳಿ ಹಬ್ಬದಿಂದ ಕಡಿಮೆಯಾಗಬಹುದೆಂಬ" ಇಂಧನ ಸಚಿವರ ಹೇಳಿಕೆಯು ಎಲ್ಲರಲ್ಲೂ ಸಂತಸ ಮೂಡಿಸಿದೆ. 

ಇದೇ ತಿಂಗಳು ನಡೆದ ಮೋದಿ ಸಂಪುಟ ಸರ್ಜರಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾಗಿ ಬಡ್ತಿ ಹೊಂದಿರುವ ಪ್ರಧಾನ್, ಯುಎಸ್ ನಲ್ಲಿ ತೈಲ ಉತ್ಪಾದನೆಯು ಶೇ.13ರಷ್ಟು ಕುಸಿದಿರುವುದು, ತೈಲ ದರ ಏರಿಕೆಯಾಗಲು ಕಾರಣ ಎಂದು ತಿಳಿಸಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ (GST) ಅಡಿಯಲ್ಲಿ ತೈಲ ತರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಮುಂದಿನ ದಿನಗಳಲ್ಲಿ ತೈಲಗಳನ್ನು ಜಿಎಸ್ಟಿ ಅಡಿಯಲ್ಲಿ ತರುವ ವಿಶ್ವಾಸ ವ್ಯಕ್ತಪಡಿಸಿದರು. "ಇದರಿಂದ ಗ್ರಾಹಕರಿಗೆ ಬಹಳ ಪ್ರಯೋಜನ ಉಂಟಾಗಲಿದೆ ಎಂದು ತಿಳಿಸಿದರು."

Trending News