ಗೌತಮ್ ಬುದ್ಧ ನಗರ: ಹೈರೈಸ್ ಕಟ್ಟಡದಲ್ಲಿ ವಾಸಿಸುವ ಜನರಿಗೆ ಈ ಸುದ್ದಿಯನ್ನು ಕೇಳಿ ಕೊಂಚ ಹೆದರಿಕೆಯಾಗಬಹುದು. ನೋಯ್ಡಾ (Noida) ಪೊಲೀಸ್ ಠಾಣೆ ಬಿಸಾರ್ಕ್‌ನ ಸೊಸೈಟಿಯಲ್ಲಿ 17 ನೇ ಮಹಡಿಯಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬಳು ತನ್ನ ಎರಡು ವರ್ಷದ ಮಗಳೊಂದಿಗೆ ಕಟ್ಟಡದಿಂದ ಕೆಳಗೆ ಬಿದ್ದಿದ್ದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದೇ ಸಮಯದಲ್ಲಿ ಎರಡನೇ ಘಟನೆ ಘಜಿಯಾಬಾದ್‌ನ ರಾಜನಗರ ಎಕ್ಸ್ಟೆನ್ಷನ್ ನಲ್ಲಿರುವ ವಿವಿಐಪಿ ಸೊಸೈಟಿಯಲ್ಲಿ ಸಂಭವಿಸಿದೆ. ಇಲ್ಲಿ 6 ವರ್ಷದ ಮಗು ಹೈರೈಸ್ ಕಟ್ಟಡದ ಫ್ಲ್ಯಾಟ್‌ನ ಬಾಲ್ಕನಿಯಲ್ಲಿ ಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.
ಜಾತಕವನ್ನು ಓದಿದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ವ್ಯಕ್ತಿ, ಮುಂದೆ...
ಬೆಳಿಗ್ಗೆ ಬಿಸಾರ್ಕ್ ಸೊಸೈಟಿಯಲ್ಲಿ ಘಟನೆ :
ಈ ಆಘಾತಕಾರಿ ಘಟನೆ ಬಿಸಾರ್ಕ್ ಪ್ರದೇಶದ ಪ್ರಸಿದ್ಧ ಸೊಸೈಟಿಯಲ್ಲಿ ನಡೆದಿದೆ. ಇಲ್ಲಿ ಶನಿವಾರ ಬೆಳಿಗ್ಗೆ 17 ನೇ ಮಹಡಿಯಲ್ಲಿ ವಾಸಿಸುತ್ತಿರುವ ಕುಟುಂಬದ ಮಹಿಳೆಯೊಬ್ಬಳು ತನ್ನ 2 ವರ್ಷದ ಮಗಳೊಂದಿಗೆ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾರೆ. ಬಹಳ ಎತ್ತರದಿಂದ ನೆಗೆದಿರುವ ಕಾರಣ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ತಲುಪಿದ್ದು ಘಟನೆ ಹಿಂದಿನ ಕಾರಣವನ್ನು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ವರದಿಯಲ್ಲಿ ಮಗಳ ಜೊತೆ ಹಾರಿ ಮಹಿಳೆ ಆತ್ಮಹತ್ಯೆ (Woman Suicide) ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Tik Tok ವಿಡಿಯೋಗೆ ಹೆಚ್ಚು ಲೈಕ್ ಬರಲಿಲ್ಲವೆಂದು ಪ್ರಾಣವನ್ನೇ ಕಳೆದುಕೊಂಡ ಯುವಕ
ರಾಜನಗರ ಎಕ್ಸ್ಟೆನ್ಷನ್ ನಲ್ಲಿ ಕಟ್ಟಡದಿಂದ ಬಿದ್ದು ಮಗು ಮೃತ:
ಮತ್ತೊಂದು ಎನ್‌ಸಿಆರ್ ನಗರ ಗಾಜಿಯಾಬಾದ್‌ನಲ್ಲಿ ಹೈರೈಸ್ ಕಟ್ಟಡದಲ್ಲಿ ದುರಂತ ಅಪಘಾತ ಸಂಭವಿಸಿದೆ. ಶುಕ್ರವಾರ ರಾತ್ರಿ ಮಗು ತನ್ನ ಮನೆಯ ಬಾಲ್ಕನಿಯಿಂದ ಕೆಳಗೆ ಬಿದ್ದಿದೆ. ಈ ಘಟನೆ ರಾಜನಗರ ಎಕ್ಸ್ಟೆನ್ಷನ್ ನಲ್ಲಿರುವ ಸೊಸೈಟಿಯಲ್ಲಿ ನಡೆದಿದೆ. ಮಗುವಿಗೆ 6 ವರ್ಷ ವಯಸ್ಸಾಗಿತ್ತು ಮತ್ತು ಫ್ಲ್ಯಾಟ್‌ನ ಬಾಲ್ಕನಿಯಲ್ಲಿ ಆಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.