ನವದೆಹಲಿ: ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ವತಿಯಿಂದ ನಡೆದಿರುವ ದೇಣಿಗೆ ಸಂಗ್ರಹ ಕಾರ್ಯಕ್ಕೆ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಮಾಜಿ ಕ್ರಿಕೆಟರ್ ಕಮ್ ರಾಜಕಾರಣಿ ಗೌತಮ್ ಗಂಭೀರ್(Gautam Gambhir) ಅವರು ತಮ್ಮ ಕೊಡುಗೆ ಬಗ್ಗೆ ಮಾತನಾಡಿ, ರಾಮ ಮಂದಿರ ನಿರ್ಮಾಣ ಎಂಬುದು ಭಾರತೀಯರ ಕನಸಾಗಿತ್ತು. ಕೊನೆಗೂ ರಾಮ ಜನ್ಮ ಭೂಮಿ ವಿವಾದ ಬಗೆ ಹರಿದಿದ್ದು, ಭವ್ಯವಾದ ರಾಮ ಮಂದಿರ ನಿರ್ಮಾಣದ ಕನಸು ಈಗ ನನಸಾಗಲಿದೆ. ಭಾರತದ ಐಕ್ಯತೆ ಹಾಗೂ ಸಮಗ್ರತೆಯ ಪ್ರತೀಕವಾದ ಈ ಮಂದಿರಕ್ಕೆ ನಮ್ಮ ಕೈಲಾಗುವ ಸಣ್ಣ ಸಹಾಯವನ್ನು ನೀಡಬೇಕಿದೆ ಎಂದು ಗಂಭೀರ್ ಪ್ರತಿಕ್ರಿಯಿಸಿದ್ದಾರೆ.
Corona Vaccine ತಯಾರಿಸುತ್ತಿದ್ದ Serum Institute of India ಕಂಪನಿ ಕಟ್ಟಡದಲ್ಲಿ ಬೆಂಕಿ
ದೆಹಲಿಯಲ್ಲಿ ಕೂಪರ್ ಸಿಸ್ಟಂ ಮೂಲಕ ರಾಮ ಮಂದಿರ ನಿರ್ಮಾಣ ದೇಣಿಗೆ ಸಂಗ್ರಹವಾಗುತ್ತಿದೆ. 10 ರೂ. 100 ರೂ. ಹಾಗೂ 1000 ರೂಪಾಯಿಗಳು ಕೂಪನ್ ಗಳ ಮೂಲಕ ಮನೆ ಮನೆಗೂ ತೆರಳಿ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂದು ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಲ್ಜೀತ್ ಚಾಹಲ್ ಹೇಳಿದರು.
ರಾಮ್ ಮಂದಿರ ನಿರ್ಮಾಣಕ್ಕೆ ೧ ಕೋಟಿ ರೂ ದೇಣಿಗೆ ನೀಡಿದ ಗೌತಮ್ ಗಂಭೀರ್
ದೊಡ್ಡ ಮೊತ್ತದ ದೇಣಿಗೆಗಳನ್ನು ಚೆಕ್ ಮೂಲಕ್ ಸಂಗ್ರಹಿಸಲಾಗುತ್ತಿದೆ. ವಿಶ್ವಹಿಂದೂಪರಿಷತ್, ಆರೆಸ್ಸೆಸ್ ಹಾಗೂ ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಫೆಬ್ರವರಿ 1ರಿಂದ ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದರು.
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ಆಗ್ತಾರಾ ಪ್ರಿಯಾಂಕಾ ಗಾಂಧಿ..? ಇಲ್ಲಿದೆ ಮೆಗಾ ಪ್ಲಾನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.