ದೇಶದ ಎಲ್ಲಾ ಜನತೆಗೂ ಸಿಗಲಿದೆ ಮೇಲ್ಜಾತಿ ಮೀಸಲಾತಿ ಲಾಭ, ಹೇಗೆಂದು ತಿಳಿಯಿರಿ

General Reservation Qouta: ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ಒದಗಿಸುವ ಮಸೂದೆ ಲೋಕಸಭೆಯಲ್ಲಿಂದು ಮಂಡನೆಯಾಯಿತು.

Last Updated : Jan 8, 2019, 04:23 PM IST
ದೇಶದ ಎಲ್ಲಾ ಜನತೆಗೂ ಸಿಗಲಿದೆ ಮೇಲ್ಜಾತಿ ಮೀಸಲಾತಿ ಲಾಭ, ಹೇಗೆಂದು ತಿಳಿಯಿರಿ title=

ನವದೆಹಲಿ: ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಶೇ. 10 ರಷ್ಟು ಮೀಸಲಾತಿ ಯನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಇಂದು ಲೋಕಸಭೆಯಲ್ಲಿಂದು ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ  ಒದಗಿಸುವ ಮಸೂದೆ ಮಂಡನೆಯಾಯಿತು. 

ಮೇಲ್ಜಾತಿ ಮೀಸಲಾತಿಯಿಂದಾಗಿ ದೇಶದ ಎಲ್ಲಾ ವರ್ಗದ ಜನರಿಗೂ ಪ್ರಯೋಜನವಾಗಲಿದೆ...

1. 8  ಲಕ್ಷ ರೂ.ಗಿಂತ ಕಡಿಮೆ ಆದಾಯ ಗಳಿಸುವವರು ಈ ಮೀಸಲಾತಿಯ ಪ್ರಯೋಜನ ಪಡೆಯುತ್ತಾರೆ ಎಂದು ಸರ್ಕಾರ ಹೇಳಿದೆ. ಆದಾಯ ತೆರಿಗೆ ಇಲಾಖೆ ಮತ್ತು ಎನ್ಎಸ್ಎಸ್ಒ ಅಂಕಿಅಂಶಗಳು ದೇಶದಲ್ಲಿ ಸುಮಾರು 95 ಪ್ರತಿಶತದಷ್ಟು ಕುಟುಂಬಗಳ ವಾರ್ಷಿಕ ಆದಾಯ ಕಡಿಮೆ ಇರುವುದನ್ನು ತೋರಿಸುತ್ತದೆ. ಅಂಕಿಅಂಶಗಳ ಪ್ರಕಾರ, ಐದು ಸದಸ್ಯರ ಕುಟುಂಬವು ಎಂಟು ಲಕ್ಷ ರೂಪಾಯಿಗಳ ವಾರ್ಷಿಕ ಆದಾಯವನ್ನು ಗಳಿಸಿದರೆ, ಪ್ರತಿಯೊಬ್ಬರ ಸರಾಸರಿ ಆದಾಯವು ತಿಂಗಳಿಗೆ 13 ಸಾವಿರ ರೂ. 2011-12ರ ಅಂಕಿ ಅಂಶಗಳ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ವ್ಯಕ್ತಿಯ ಸರಾಸರಿ ಮಾಸಿಕ ಆದಾಯವು 2,625 ರೂ. ಮತ್ತು ನಗರ ಪ್ರದೇಶದ ಒಬ್ಬ ವ್ಯಕ್ತಿಯ ಸರಾಸರಿ ಮಾಸಿಕ ಆದಾಯ 6,015 ರೂ. ಆಗಿದೆ. ಅಂದರೆ, ಎರಡೂ ವಿಭಾಗಗಳ ಜನರು ಆದಾಯದ ವ್ಯಾಪ್ತಿಯೊಳಗೆ ಎಂಟು ಲಕ್ಷಕ್ಕಿಂತ ಕಡಿಮೆಯಿರುತ್ತಾರೆ. ಹೀಗಾಗಿ, 8 ಲಕ್ಷಕ್ಕೂ ಅಧಿಕ ಆದಾಯವಿರುವ ಕುಟುಂಬಗಳು ಅಂದರೆ ಶೇ. 5 ರಷ್ಟು ಮಂದಿ ಮಾತ್ರ ಮೀಸಲಾತಿಯ ಲಾಭ ಪಡೆಯುವುದಿಲ್ಲ.

2. ಐದು ಎಕರೆ ಭೂಮಿಗಿಂತ ಕಡಿಮೆಯಿರುವ ಕುಟುಂಬಗಳು ಮೀಸಲಾತಿಯ ಲಾಭ ಪಡೆದುಕೊಳ್ಳಲಿವೆ ಎಂದು ಸರ್ಕಾರ ಹೇಳಿದೆ. 2015-16ರ ಕೃಷಿ ಮಾಹಿತಿಯ ಪ್ರಕಾರ, ಭೂಮಿಯನ್ನು ಹೊಂದಿರುವವರ ಪೈಕಿ 86.2 ಪ್ರತಿಶತದಷ್ಟು ಎರಡು ಹೆಕ್ಟೇರ್ಗಳಿಗಿಂತಲೂ ಕಡಿಮೆ ಭೂಮಿ ಹೊಂದಿದ್ದಾರೆ. ಅದು ಐದು ಎಕರೆಗಳಿಗಿಂತ ಕಡಿಮೆಯಿದೆ. ಹೀಗಾಗಿ, ಈ ವಿಭಾಗವು ಮೀಸಲಾತಿಯ ಲಾಭವನ್ನು ಪಡೆಯುತ್ತದೆ.

3. 1000 ಚದರಡಿಗಿಂತ ಕಡಿಮೆ ವಿಸ್ತೀರ್ಣದ ಮನೆ ಹೊಂದಿರುವವರು ಇದರ ಪ್ರಯೋಜನ ಪಡೆಯುತ್ತಾರೆ. 

Trending News