ಪ್ರಧಾನಿ ಮೋದಿಗೆ ಬಂದ ಉಡುಗೊರೆಗಳು ನಿಮಗೆ ಬೇಕೆ? ಇಲ್ಲಿದೆ ಪ್ರಕ್ರಿಯೆ

ಪ್ರಧಾನಿ ನರೇಂದ್ರ ಮೋದಿಯವರು ಪಡೆದ 2772 ಉಡುಗೊರೆಗಳಲ್ಲಿ ಶಾಲುಗಳು, ಭಾವಚಿತ್ರಗಳು, ಬೆಳ್ಳಿ ಪಾತ್ರೆಗಳು, ಶಿರಸ್ತ್ರಾಣಗಳು ಮತ್ತು ಕತ್ತಿಗಳು ಸೇರಿವೆ, ಇದನ್ನು ಶನಿವಾರದಿಂದ ಆನ್‌ಲೈನ್‌ನಲ್ಲಿ ಹರಾಜು ಮಾಡಲಾಗುತ್ತದೆ. 

Last Updated : Sep 14, 2019, 04:19 PM IST
ಪ್ರಧಾನಿ ಮೋದಿಗೆ ಬಂದ ಉಡುಗೊರೆಗಳು ನಿಮಗೆ ಬೇಕೆ? ಇಲ್ಲಿದೆ ಪ್ರಕ್ರಿಯೆ    title=
file photo

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿಯವರು ಪಡೆದ 2772 ಉಡುಗೊರೆಗಳಲ್ಲಿ ಶಾಲುಗಳು, ಭಾವಚಿತ್ರಗಳು, ಬೆಳ್ಳಿ ಪಾತ್ರೆಗಳು, ಶಿರಸ್ತ್ರಾಣಗಳು ಮತ್ತು ಕತ್ತಿಗಳು ಸೇರಿವೆ, ಇದನ್ನು ಶನಿವಾರದಿಂದ ಆನ್‌ಲೈನ್‌ನಲ್ಲಿ ಹರಾಜು ಮಾಡಲಾಗುತ್ತದೆ.

ಈ ಆನ್ ಲೈನ್ ಹರಾಜಿನಲ್ಲಿ ಮೆಮೆಂಟೋಗಳ ಮೂಲ ಬೆಲೆ 200ರೂ. ಮತ್ತು ಗರಿಷ್ಠ 2.5 ಲಕ್ಷ ರೂ. ವರಗೆ ಇರಲಿದೆ. ಹರಾಜಿನಿಂದ ಬರುವ ಆದಾಯವು ಗಂಗಾ ನದಿಯನ್ನು ಶುದ್ಧೀಕರಿಸುವ, ಸಂರಕ್ಷಿಸುವ ಮತ್ತು ಪುನರ್ಯೌವನಗೊಳಿಸುವ ಕೇಂದ್ರ ಸರ್ಕಾರದ ಯೋಜನೆಯಾದ ನಮಾಮಿ ಗಂಗೆ ಯೋಜನೆಗೆ ಧನಸಹಾಯವನ್ನು ನೀಡುತ್ತದೆ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಪ್ರಹ್ಲಾದ್ ಜೋಶಿ 'ಕಳೆದ ಆರು ತಿಂಗಳಲ್ಲಿ ಪ್ರಧಾನಿ ಸ್ವೀಕರಿಸಿದ ಉಡುಗೊರೆಗಳನ್ನು ಹರಾಜು ಮಾಡಲಾಗುತ್ತದೆ.ಈ ಬಾರಿ ಹರಾಜು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿರುತ್ತದೆ.ಈ ಅವಕಾಶವನ್ನು ನೀಡಿದ ಪ್ರಧಾನಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ವಸ್ತುಗಳ ಕನಿಷ್ಠ ಕಾಯ್ದಿರಿಸಿದ ಬೆಲೆ 200 ರೂ. ಮತ್ತು ಗರಿಷ್ಠ 2.5 ಲಕ್ಷ ರೂ. ವರೆಗೆ ಇರಲಿದೆ' ಎಂದು ಹೇಳಿದ್ದಾರೆ. 

ಈ ಉಡುಗೊರೆಗಳನ್ನು ಪ್ರಸ್ತುತ ಕೇಂದ್ರ ದೆಹಲಿಯ ಜೈಪುರ ಹೌಸ್‌ನ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನಲ್ಲಿ (ಎನ್‌ಜಿಎಂಎ) ಪ್ರದರ್ಶಿಸಲಾಗಿದೆ. ಆಸಕ್ತರು ನೋಂದಾಯಿಸಲು ಮತ್ತು ಹರಾಜಿನಲ್ಲಿ ಭಾಗವಹಿಸಲು pmmementos.gov.in ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬಹುದು.

ಹರಾಜಿನ ಆಕರ್ಷಣೆಗಳಲ್ಲಿ ಒಂದಾಗಿರುವ ಮೋದಿಯವರ ಭಾವಚಿತ್ರ ಮೂಲ ಬೆಲೆ 2.5 ಲಕ್ಷ ರೂ ಆಗಿದೆ. ಸ್ಮರಣಿಕೆಗಳಲ್ಲಿ 576 ಶಾಲುಗಳು, 964 ಅಂಗವಸ್ತ್ರಂ (ಬಟ್ಟೆ), 88 ಪಾಗ್ರಿಸ್ (ತಲೆ-ಉಡುಗೆ) ಮತ್ತು ಭಾರತದ ವೈವಿಧ್ಯತೆಯನ್ನು ಚಿತ್ರಿಸುವ ವಿವಿಧ ಜಾಕೆಟ್‌ಗಳು ಸೇರಿವೆ. ಪ್ರತಿಯೊಂದು ಐಟಂ ಅನ್ನು ಮೂಲ ಬೆಲೆಯನ್ನು ನಿಗದಿಪಡಿಸಲು ತಜ್ಞರು ಮೌಲ್ಯಮಾಪನ ಮಾಡಿದ್ದಾರೆ.

ಜನವರಿಯಲ್ಲಿ ಪ್ರಧಾನಮಂತ್ರಿ ಸ್ವೀಕರಿಸಿದ 1,800 ಕ್ಕೂ ಹೆಚ್ಚು ಉಡುಗೊರೆಗಳನ್ನು ಹದಿನೈದು ದಿನಗಳ ಹರಾಜಿನಲ್ಲಿ ಮಾರಾಟ ಮಾಡಲಾಯಿತು, 4000 ಜನರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

Trending News