ನವದೆಹಲಿ: 7th Pay Commission latest news: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 58 ವರ್ಷಕ್ಕೆ ಇಳಿಸಲು ಮೋದಿ ಸರ್ಕಾರ ಯೋಜಿಸುತ್ತಿದೆ ಎಂಬ ವದಂತಿಗಳನ್ನು ಅಲ್ಲಗಳೆದಿರುವ ಕೇಂದ್ರ ಸರ್ಕಾರ ಅಂತಹ ಯಾವುದೇ ನೀತಿ ನಿರ್ಧಾರಗಳಿಲ್ಲ ಎಂದು ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ. ಪ್ರಧಾನಿ ಕಚೇರಿಯಲ್ಲಿ (ಪಿಎಂಒ) ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಕುರಿತು ಮೋದಿ ಸರ್ಕಾರದ ನಿಲುವನ್ನು ಪ್ರಕಟಿಸಿದರು.
ಕೌಶಲ್ ಕಿಶೋರ್ ಅವರು, "ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 58 ವರ್ಷಕ್ಕೆ ಇಳಿಸಲು ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪವಿದೆಯೇ ಅಥವಾ ಕಡ್ಡಾಯ ನಿವೃತ್ತಿಯ 56 (ಜೆ) ಕಲಂ ಅಡಿಯಲ್ಲಿ 50 ವರ್ಷ ದಾಟಿದವರಿಗೆ ಕಡ್ಡಾಯ ನಿವೃತ್ತಿ ಬಗೆಗೆ ಯಾವುದೇ ಪ್ರಸ್ತಾಪವಿದೆಯೇ" ಎಂದು ಪ್ರಶ್ನಿಸಿದರು.
ಇದಕ್ಕೆ ಜಿತೇಂದ್ರ ಸಿಂಗ್ ಅವರು ನವೆಂಬರ್ 27 ರಂದು ಲೋಕಸಭೆಯಲ್ಲಿ ಉತ್ತರಿಸುತ್ತಾ, "ಪ್ರಸ್ತುತ, ನಿವೃತ್ತಿಯ ವಯಸ್ಸನ್ನು 60 ವರ್ಷದಿಂದ 58 ವರ್ಷಕ್ಕೆ ಇಳಿಸುವ ಪ್ರಸ್ತಾಪವಿಲ್ಲ" ಎಂದು ಸ್ಪಷ್ಟಪಡಿಸಿದರು.
ಮೂಲಭೂತ ನಿಯಮಗಳು (ಎಫ್‌ಆರ್) 56 (ಜೆ), ಕೇಂದ್ರ ನಾಗರಿಕ ಸೇವೆಗಳ ನಿಯಮ 48 (ಸಿಸಿಎಸ್) (ಪಿಂಚಣಿ) ನಿಯಮಗಳು, 1972 ಮತ್ತು ಅಖಿಲ ಭಾರತ ಸೇವೆಗಳ ನಿಯಮ 16 (3) (ತಿದ್ದುಪಡಿ) (ಡೆತ್‌ಕಮ್-ನಿವೃತ್ತಿ ಲಾಭಗಳು) [ಎಐಎಸ್ (ಡಿಸಿಆರ್ಬಿ)] ನಿಯಮಗಳು, 1958, ಅದರ ಪ್ರಕಾರ, ಸರ್ಕಾರಿ ಅಧಿಕಾರಿಗಳು ಅಕಾಲಿಕವಾಗಿ ನಿವೃತ್ತಿ ಹೊಂದುವ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ. ಸಮಗ್ರತೆಯ ಕೊರತೆ ಅಥವಾ ನಿಷ್ಪರಿಣಾಮದ ಆಧಾರದ ಮೇಲೆ, ಸಾರ್ವಜನಿಕ ಹಿತದೃಷ್ಟಿಯಿಂದ, ಮೂರು ತಿಂಗಳಿಗಿಂತ ಕಡಿಮೆಯಿಲ್ಲದ ಅಥವಾ ಮೂರು ಬಾರಿ ನೋಟಿಸ್ ನೀಡುವ ಮೂಲಕ ನಿವೃತ್ತಿ ಹೊಂದಬಹುದು.