ನವದೆಹಲಿ: 2020ರ ಆರ್ಥಿಕ ಆಯವ್ಯಯದಲ್ಲಿ ಆದಾಯ ತೆರಿಗೆ ಪಾವತಿದಾರರಿಗಾಗಿ ನೂತನ ವೈಕಲ್ಪಿಕ ಟ್ಯಾಕ್ಸ್ ಸ್ಲಾಬ್ ಗಳನ್ನು ಘೋಷಿಸಲಾಗಿದೆ. ಈ ಸ್ಲಾಬ್ ಗಳ ಅಡಿ ಆದಾಯ ತೆರಿಗೆ ದರಗಳನ್ನು ಕೂಡ ಕಡಿಮೆ ಇಡಲಾಗಿದೆ. 2020 ರ ಬಜೆಟ್‌ನಲ್ಲಿ, ತೆರಿಗೆದಾರರು ಹಳೆಯ ತೆರಿಗೆ ದರ ಮತ್ತು ಹೊಸ ತೆರಿಗೆ ದರಗಳ ನಡುವೆ ಆಯ್ಕೆ ಮಾಡಬಹುದು ಎಂದು ಹೇಳಲಾಗಿದೆ. ಆದರೆ ಇದರೊಂದಿಗೆ ಹೊಸ ಪರ್ಯಾಯ ತೆರಿಗೆ ಸ್ಲ್ಯಾಬ್‌ನ ಲಾಭವನ್ನು ಪಡೆದುಕೊಳ್ಳುವವರಿಗೆ ಆದಾಯ ತೆರಿಗೆ ಕಾಯ್ದೆಯ ಅಧ್ಯಾಯ VI-A ಅಡಿಯಲ್ಲಿ ತೆರಿಗೆ ಕಡಿತ ಮತ್ತು ವಿನಾಯಿತಿಯ ಲಾಭ ದೊರೆಯುವುದಿಲ್ಲ ಎಂಬ ಷರತ್ತು ಕೂಡ ವಿಧಿಸಲಾಗಿದೆ.
ಆದರೆ ಇದೀಗ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ) ಈ ಘೋಶನೆಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ. ತಿದ್ದುಪಡಿ ಮಾಡಲಾಗಿರುವ ನಿಯಮಗಳಲ್ಲಿ ಇದೀಗ ಹೊಸ ಪರ್ಯಾಯ ಆದಾಯ ತೆರಿಗೆ ಸ್ಲಾಬ್ ಆರಿಸಿಕೊಂಡು ಸಂಬಳ ಪಡೆಯುವ ತೆರಿಗೆದಾರರು ಆಯ್ದ ಪ್ರಕರಣಗಳಲ್ಲಿ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಬಹುದು. ಈ ಆಯ್ಕೆಮಾಡಿದ ಸಂದರ್ಭಗಳಲ್ಲಿ, ಪ್ರಯಾಣ ಅಥವಾ ವರ್ಗಾವಣೆಯ ಸಂದರ್ಭದಲ್ಲಿ, ಪ್ರಯಾಣದ ವೆಚ್ಚಗಳಿಗಾಗಿ ಉದ್ಯೋಗದಾತ ನೀಡಿದ ಭತ್ಯೆ, ಪ್ರಯಾಣದ ಅವಧಿಯಲ್ಲಿ ಪಾವತಿಸಿದ ಯಾವುದೇ ಭತ್ಯೆ, ಸಾಮಾನ್ಯ ಕೆಲಸದ ಸ್ಥಳದಿಂದ ಅನುಪಸ್ಥಿತಿಯಲ್ಲಿರುವಾಗ ನೌಕರನ ದೈನಂದಿನ ಖರ್ಚುಗಳನ್ನು ಪೂರೈಸಲು ನೀಡಲಾಗುವ ಭತ್ಯೆ ಇತ್ಯಾದಿ. ಇವುಗಳ ಹೊರತಾಗಿ, ಉದ್ಯೋಗದಾತನು ಉಚಿತ ಪ್ರಯಾಣದ ಸೌಲಭ್ಯವನ್ನು ಒದಗಿಸದಿದ್ದರೆ, ದೈನಂದಿನ ಪ್ರಯಾಣಕ್ಕೆ ಪಾವತಿಸುವ ಭತ್ಯೆಯ ಮೇಲೂ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಬಹುದು.
ಫುಡ್ ವೌಚರ್ ಗಳ ಮೇಲೆ ತೆರಿಗೆ ವಿನಾಯ್ತಿ ಇಲ್ಲ
ಸಿಬಿಡಿಟಿ ಸಹ ಉಚಿತ ಆಹಾರ ಮತ್ತು ಅಲ್ಕೋಹಾಲ್ ಯುಕ್ತ ಪಾನೀಯಗಳಿಗೆ ಸಂಬಂಧಿಸಿದಂತೆ ಉದ್ಯೋಗದಾತ ಒದಗಿಸಿದ ವೌಚರ್ ಮೂಲಕ ಪಾವತಿಸುವ ಭಟ್ತೆಗೆ ತೆರಿಗೆ ವಿನಾಯಿತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದಲ್ಲದೆ, ದೃಷ್ಟಿ ವಿಕಲಚೇತನರು, ಕಿವುಡರು ಅಥವಾ ದಿವ್ಯಾಂಗ ಕಾರ್ಮಿಕರು ಸಾರಿಗೆ ಭತ್ಯೆಯಲ್ಲಿ ತಿಂಗಳಿಗೆ 3,200 ರೂ.ವಿನಾಯ್ತಿ ಪಡೆಯಬಹುದಾಗಿದೆ.
ಟ್ಯಾಕ್ಸ್ ಸ್ಲಾಬ್ ಗಳಲ್ಲಿನ ವಿಕಲ್ಪಗಳು
2020-20ರ ಬಜೆಟ್‌ನಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದ ಪರ್ಯಾಯ ಆದಾಯ ತೆರಿಗೆ ಸ್ಲಾಬ್ ಗಳು ಹೀಗಿರಲಿವೆ.
ವಾರ್ಷಿಕ ಆದಾಯ ತೆರಿಗೆ ದರ
0 ಯಿಂದ 2.5 ಲಕ್ಷ ರೂ. ಶೇ.0
2.5 ಲಕ್ಷ ರೂ. ಗಳಿಂದ 5 ಲಕ್ಷ ರೂ. ಶೇ..5
5 ಲಕ್ಷ ರೂ.ಗಳಿಂದ 7.5 ಲಕ್ಷ ರೂ. ಶೇ.10
7.5 ಲಕ್ಷ ರೂ.ಗಳಿಂದ 10 ಲಕ್ಷ ರೂ. ಶೇ.15
10 ಲಕ್ಷ ರೂ.ಗಳಿಂದ 12.5 ಲಕ್ಷ ರೂ. ಶೇ.20
12.5 ಲಕ್ಷ ರೂ.ಗಳಿಂದ 15 ಲಕ್ಷ ರೂ. ಶೇ.25
15 ಲಕ್ಷಕ್ಕೂ ಅಧಿಕ ಆದಾಯ ಹೊಂದಿದವರು ಶೇ.30