ನವದೆಹಲಿ:ಇಂದು ಭಾರತ ಸಣ್ಣ-ಪುಟ್ಟ ರಾಷ್ಟ್ರವಾಗಿ ಉಳಿದಿಲ್ಲ. ಏಕೆಂದರೆ ಇಂದು ಭಾರತ ವಿಶ್ವದ ಟಾಪ್ ಐದು ಆರ್ಥಿಕತೆಯಲ್ಲಿ ಶಾಮೀಲಾಗಿದೆ. ಆರ್ಥಿಕತೆಯಲ್ಲಿ ಭಾರತ ಎಷ್ಟೊಂದು ಮುಂದುವರೆದಿದೆ ಎಂದರೆ ಯುರೋಪ್ ನ ಅತ್ಯಂತ ಶಕ್ತಿಶಾಲಿ ಎಂದೇ ಪರಿಗಣಿಸಲ್ಪಡುವ ದೇಶಗಳನ್ನು ಕೂಡ ಹಿಂದಿಕ್ಕಿದೆ. ವರ್ಲ್ಡ್ ಪಾಪ್ಯುಲೇಶನ್ ರಿಪೋರ್ಟ್ ವರದಿ ಪ್ರಕಾರ ಭಾರತ ಇದೀಗ ವಿಶ್ವದ ಐದು ಟಾಪ್ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪಟ್ಟಿ ಸೇರಿದೆ.
ಜಪಾನ್ ಹಾಗೂ ಯೂರೋಪಿನ ದೇಶಗಳನ್ನು ಹಿಂದಿಕ್ಕಿದ ಭಾರತ
ವರ್ಲ್ಡ್ ಪೋಪ್ಯುಲೆಶನ್ ರಿವ್ಯೂನ ತಾಜಾ ವರದಿಯ ಪ್ರಕಾರ ಭಾರತ ವಿಶ್ವದ ಟಾಪ್ ಐದು ಅರ್ಥ ವ್ಯವಸ್ಥೆಗಳಲ್ಲಿ ಶಾಮೀಲಾಗಿದೆ. ಹೌದು, ಸದ್ಯ ಭಾರತದ ಜಿಡಿಪಿ 2.94 ಟ್ರಿಲಿಯನ್ ಡಾಲರ್ ಗೆ ಬಂದು ತಲುಪಿದೆ ಎಂದು ವರದಿಯಲ್ಲಿ ಹೇಳಲಾಗಿದ್ದು, ಈ ಪಟ್ಟಿಯಲ್ಲಿ ಭಾರತ ಇಂಗ್ಲೆಂಡ್ ಹಾಗೂ ಫ್ರಾನ್ಸ್ ದೇಶಗಳನ್ನೂ ಸಹ ಹಿಂದಿಕ್ಕಿದೆ. ಆದರೆ, ಸದ್ಯ ಮುಂದುವರೆದಿರುವ ಆರ್ಥಿಕತೆ ಕುಸಿತದ ಹಿನ್ನೆಲೆಯಲ್ಲಿ ಭಾರತದ ಆರ್ಥಿಕ ವೇಗ ಕೊಂಚ ಕಡಿಮೆಯಾಗಿದೆ ಎಂದೂ ಕೂಡ ವರದಿಯಲ್ಲಿ ಹೇಳಲಾಗಿದೆ. ಇತ್ತೀಚೆಗಷ್ಟೇ ಮಂಡಿಸಲಾಗಿರುವ ಆರ್ಥಿಕ ಸಮೀಕ್ಷೆಯಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಅಭಿವೃದ್ಧಿ ದರ ಶೇ.5ರ ಆಸುಪಾಸು ಇರಲಿದೆ ಎನ್ನಲಾಗಿತ್ತು.
ಲಿಬರಲ್ ಆರ್ಥಿಕತೆ ನಿರ್ಣಾಯಕ ಪಾತ್ರ ವಹಿಸಿದೆ
ವರದಿಯ ಪ್ರಕಾರ 1990ರಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯನ್ನು ಲಿಬರಲ್ ಮಾಡುವ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯವೇ ಇಂದಿನ ಈ ಬೆಳವಣಿಗೆಗೆ ಪೂರಕವಾಗಿ ಸಾಬೀತಾಗಿದೆ. ಈ ನಿರ್ಣಯದಿಂದ ದೇಶದಲ್ಲಿ ಉಂಟಾದ ನೇರ ವಿದೇಶಿ ಬಂಡವಾಳ ಹೂಡಿಕೆ ಮತ್ತು ಖಾಸಗೀಕರಣದಿಂದ ಈ ಲಾಭವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ಕಾರಣದಿಂದ ಭಾರತ ಆರ್ಥಿಕತೆಯಲ್ಲಿ ಉತ್ತಮ ಪ್ರದರ್ಶನ ತೋರಿದೆ. ಇದರಲ್ಲಿ ದೇಶದ ಸೇವಾ ವಿಭಾಗ ಉತ್ತಮ ಪ್ರದರ್ಶನ ತೋರಿದೆ. ಭಾರತದ ಅರ್ಥ ವ್ಯವಸ್ಥೆಯಲ್ಲಿ ಸೇವಾ ವಿಭಾಗ ಶೇ.60ರಷ್ಟು ಕೊಡುಗೆ ನೀಡಿದೆ. ಇದನ್ನು ಹೊರತುಪಡಿಸಿದರೆ ಎಂಪ್ಲಾಯ್ಮೆಂಟ್ ಶೇ.28ರಷ್ಟು ಕೊಡುಗೆ ನೀಡಿದೆ.